VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಇಂದು ‘ಬೃಹತ್’ ಚುನಾವಣೆ: ಘಟಾನುಘಟಿಗಳು ಪ್ರತಿಷ್ಠೆಯ ಕಣ


ಬೆಂಗಳೂರು, ಮಾ.೨೭: ಬಿಬಿ‌ಎಂಪಿಯ ಮತದಾನಕ್ಕೆ ಕ್ಷಣಗಣನೆಗಳು ಆರಂಭವಾಗಿದ್ದು, ೧೯೮ ವಾರ್ಡ್‌ಗಳಲ್ಲಿ ಹಲವಾರು ಮಾಜಿ ಮೇಯರ್‌ಗಳು, ಮಾಜಿ ಶಾಸಕರು, ಚಿತ್ರನಟರು ಪಾಲಿಕೆ ಚುನಾವಣೆಯಲ್ಲಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಒಟ್ಟು ೧೩೩೪ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ರಾಜಧಾನಿ ಕೇಂದ್ರಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯಾಗಿದ್ದು. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಚುನಾವಣೆಯಲ್ಲಿ ಸಚಿವರು, ಶಾಸಕರು ತಮ್ಮ ಪುತ್ರರನ್ನು ಮತ್ತು ಸಂಬಂಧಿಗಳನ್ನು ಕಣಕ್ಕಿಳಿಸಿದ್ದಾರೆ.

ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮ್ಮ ಪುತ್ರ ಜಗದೀಶ್ ಕಟ್ಟಾರನ್ನು ವಸಂತನಗರ ವಾರ್ಡ್‌ನಿಂದ ಕಣಕ್ಕಿಳಿಸಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ತಮ್ಮ ಪುತ್ರ ಎಸ್.ವೆಂಕಟೇಶ್‌ಬಾಬುರನ್ನು ಕೊಟ್ಟಿಗೆ ಪಾಳ್ಯದಿಂದ ಕಣಕ್ಕಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್.ರಯ್ಯನವರ ಪುತ್ರ ಸ್ವರೂಪ್ ಕೆ.ಆರ್.ಮಾರ್ಕೇಟ್ ವಾರ್ಡ್‌ನಿಂದ, ಶಾಸಕ ನೆ.ಲ. ನರೇಂದ್ರಬಾಬು ತಮ್ಮ ಸಹೋದರ ನೆ.ಲ.ರವಿಶಂಕರ್‌ರನ್ನು ನಾಗಾಪುರವಾರ್ಡ್‌ನಿಂದ ಕಣಕ್ಕಿಳಿಸಿದ್ದು ಗೆಲುವಿಗಾಗಿ ಹರಸಾಹಸ ನಡೆಸುತ್ತಿದ್ದಾರೆ.

ಇವರಲ್ಲದೆ ಮಾಜಿ ಮೆಯರ್‌ಗಳಾದ ಪಿ.ಆರ್.ರಮೇಶ್ ವಿಶ್ವೇಶ್ವರಪುರ ವಾರ್ಡ್‌ನಿಂದ, ಮಾಜಿ ಮೇಯರ್ ಮತ್ತು ಮಾಜಿ ಶಾಸಕ ಕೆ.ಚಂದ್ರಶೇಖರ್ ಹನುಮಂತನಗರ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ಎ.ಕೃಷ್ಣಪ್ಪ ತಮ್ಮ ಪುತ್ರಿ ಪೂರ್ಣಿಮಾರನ್ನು ಬಸವಪುರವಾರ್ಡ್‌ನಿಂದ, ಸಹೋದರ ಎ.ಗೋಪಾಲ್ ನಾರಾಯಣ್‌ಪುರ ವಾರ್ಡ್‌ನಿಂದ ಕಣಕ್ಕೀಳಿದಿದ್ದಾರೆ.

ಜೆಡಿ‌ಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಸಂಬಂಧಿ ರಘು ಡಾ.ರಾಜ್‌ಕುಮಾರ್ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ.

ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಗಣೇಶ ಮಂದಿರ ವಾರ್ಡ್‌ನಿಂದ, ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ ಜೆ.ಪಿ.ಉದ್ಯಾನವನ ವಾರ್ಡ್‌ನಿಂದ, ಎಚ್.ಪದ್ಮರಾಜ್ ಬಸವೇಶ್ವರನಗರದಿಂದ, ರಂಗಣ್ಣ ಕಾಮಾಕ್ಷಿಪಾಳ್ಯದಿಂದ, ಗಂಗಬೈರಯ್ಯ ಡಾ.ರಾಜ್‌ಕುಮಾರ್ ವಾರ್ಡ್‌ನಿಂದ, ಎಚ್.ರಂದ್ರ ವಿಜಯನಗರವಾರ್ಡ್‌ನಿಂದ, ವೇದವ್ಯಾಸಭಟ ಸಿದ್ಧಾಪುರವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ.

ಮಾಜಿ ಸದಸ್ಯೆ ಮಾರಿಮುತ್ತು ಜೆಡಿ‌ಎಸ್ ಅಭ್ಯಥಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪಾಲಿಕೆಯ ಸದಸ್ಯತ್ವಕ್ಕೆ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಕಲ್ಯಾಣಿ ಮತ್ತು ಕಿರುತೆರೆಯ ನಟಿಯೊಬ್ಬರು ಚುನಾವಣಾ ಕಣದಲ್ಲಿದ್ದಾರೆ.

No comments: