ಮಂಗಳೂರು, ಮಾ.೨೬ : ಮನೆಯಲ್ಲಿ ಪ್ರತ್ಯೇಕಿಸಲ್ಪಟ್ಟ ಕಸ, ಅಲ್ಲಿಂದ ನೇರವಾಗಿ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿಯಾಗುವ ಮಹತ್ವಾಕಾಂಕ್ಷಿ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಮಂಗ ಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಳ್ಳಲಿದೆ.
ಇನ್ನು ಒಂದು ವರ್ಷದೊಳಗೆ ಮಂಗಳೂರನ್ನು `ಸ್ವಚ್ಛ ನಗರ'ವಾಗಿ ಮಾರ್ಪಡಿಸುವ ಪ್ರಯತ್ನಕ್ಕೆ ಪಾಲಿಕೆ ಸನ್ನದ್ಧವಾಗಿದ್ದು, ಬಳಿಕ ನಗರದಲ್ಲಿರುವ ಕಸ ತೊಟ್ಟಿಗಳೂ ಕಣ್ಮರೆಯಾಗಲಿವೆ. ಇದಕ್ಕಾ ಗಿಯೇ ೧೨ ಕೋಟಿ ರು.ಗಳ ನೂತನ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ.
ಹಾಲಿ ಕ್ರಮ:
ಪ್ರಸ್ತುತ ಕಸವಿಲೇವಾರಿ ಹಳೆ ಪದ್ಧತಿಯಲ್ಲಿದೆ. ೪೬ ವಾರ್ಡ್‌ಗೆ ಗುತ್ತಿಗೆ ಕ್ರಮದಲ್ಲಿ ಹಾಗೂ ೧೪ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.
ನಗರದಲ್ಲಿ ದಿನಂಪ್ರತಿ ೨೦೦ರಿಂದ ೨೨೦ ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಪಚ್ಚನಾಡಿ ಡಂಪಿಂ ಗ್ ಯಾರ್ಡ್‌ಗೆ ಕಸ ವಿಲೇವಾರಿಯಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ವಾರ್ಷಿಕ ೩.೫೦ ಕೋಟಿ ರು. ವೆಚ್ಚ ತಗಲುತ್ತಿದೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ೫-೬ ದಶಕದಿಂದ ಒಂದೇ ಕಡೆ ಕಸ ತಂದು ಸುರಿದ ಪರಿಣಾ ಮ ಅಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾಗಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾ ಗಿ ಸುತ್ತಮುತ್ತ ೫-೬ ಕಿ.ಮೀ ವರೆಗೆ ದಟ್ಟ ವಾಸನೆಯುಕ್ತ ಹೊಗೆ ಆವರಿಸುತ್ತಿತ್ತು. ಜನರ ಬದುಕಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಪಾಲಿಕೆ ಈ ತ್ಯಾಜ್ಯ ಹರವಿದ ಭಾಗವನ್ನು ಲೇಯರ್ ಹಾಕಿ ಟ್ಯಾಪಿಂಗ್ ಮಾಡಲು ತೀರ್ಮಾನಿಸಿದೆ.
ಡಂಪಿಂಗ್ ಯಾರ್ಡ್:
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ೨ ವರ್ಷದ ಹಿಂದೆ ಎಡಿಬಿ ನೆರವಿನಲ್ಲಿ ೧೬.೫೦ ಕೋಟಿ ವೆಚ್ಚದಲ್ಲಿ ಕಸವಿಲೇವಾರಿಗೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಆದರೂ ಸರಿಯಾಗಿ ಕಸ ವಿಲೇವಾ ರಿಯಾಗುತ್ತಿಲ್ಲ ಎಂಬ ಆರೋಪ ನಿರಂತರ ಕೇಳಿಬರುತ್ತಿದೆ.
ಮುಕ್ಕಾಲಂಶ ಕಸ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬಿಸಾಡುವುದರಿಂದ, ಇಂಥ ಕಸಗಳನ್ನು ವಿಭಜಿ ಸಿ, ವಿಲೇವಾರಿ ಮಾಡುವುದು ಕಷ್ಟ. ಯಂತ್ರ ಮೂಲಕವಾದರೂ ಪಾಲಿಕೆ ಇದನ್ನು ಸರಿಯಾಗಿ ವಿಭಾಗಿಸಿ ನಿರ್ವಹಿಸುತ್ತಿಲ್ಲ. ಹಾಗಾಗಿ ಪಚ್ಚನಾಡಿ ಯಾರ್ಡ್‌ನಲ್ಲಿ ಕಸ ತುಂಬಿ ಹೋಗಿದೆ ಎನ್ನುವು ದು ಸ್ಥಳೀಯರ ಆರೋಪ.
ಡೋರ್ ಟು ಡೋರ್:
ನಗರದ ಮಣ್ಣಗುಡ್ಡ ಕೆಲವು ಮನೆಗಳಿಂದ ಡೋರ್ ಟು ಡೋರ್ ಕಸ ವಿಲೇವಾರಿ ಪ್ರಯತ್ನ ನಡೆ ದಿದೆ. ಇದು ಸರ್ಕಾರೇತರ ಸಂಸ್ಥೆಗಳ ಸಹಕಾರದಲ್ಲಿ. ಉಳಿದಂತೆ ಬೇರೆ ಎಲ್ಲಿಯೂ ಈ ಪ್ರಯತ್ನ ನಡೆದಿಲ್ಲ.
ಮೊದಲು ಮನೆಗಳಲ್ಲೇ ಕಸ ವಿಭಾಗಿಸಿದರೆ, ಅದನ್ನು ಲಾರಿಗಳಲ್ಲಿ ಡಂಪಿಂಗ್ ಯಾರ್ಡ್‌ಗೆ ಸಾಗಿಸ ಲು ಸುಲಭ. ಅಲ್ಲಿ ಮುಂದಿನ ವಿಲೇವಾರಿ ವಿಧಾನ ನಡೆಸಲು ಸುಲಭ. ಇದನ್ನು ಕಾರ್ಯಗತಗೊಳಿ ಸಲು ಇನ್ನು ೪-೫ ತಿಂಗಳು ಬೇಕಾದೀತು ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ|ವಿಜಯ ಪ್ರಕಾಶ್.
ಜಾಗತಿಕ ಟೆಂಡರ್:
ಘನತ್ಯಾಜ್ಯ ವಿಲೇವಾರಿಗೆ ಮೊದಲಿದ್ದ ಸಿಂಗಲ್ ಪ್ಯಾಕೇಜ್ ಟೆಂಡರ್‌ಗೆ ಪಾಲಿಕೆ ತಿಲಾಂಜಲಿ ನೀಡಿದೆ. ಈಗ ೩ ಪ್ಯಾಕೇಜ್‌ಗಳಾಗಿ ಹೊಸ ಜಾಗತಿಕ ಟೆಂಡರ್ ಕರೆಯಲಾಗುತ್ತಿದೆ.
ಪಾಲಿಕೆ ಒಟ್ಟು ೬೦ ವಾರ್ಡ್‌ಗಳನ್ನು ಉತ್ತರ ಹಾಗೂ ದಕ್ಷಿಣ ಎಂದು ವಿಭಾಗಿಸಲಾಗಿದ್ದು, ಉತ್ತರ ಕ್ಕೆ ೨೯ ಹಾಗೂ ದಕ್ಷಿಣಕ್ಕೆ ೩೧ ವಾರ್ಡ್ ನಿಗದಿಪಡಿಸಲಾಗಿದೆ. ಉತ್ತರ ವಾರ್ಡ್‌ಗೆ ೪.೨೫ ಕೋಟಿ, ದಕ್ಷಿಣಕ್ಕೆ ೫.೪೫ ಕೋಟಿ ಪ್ರಸ್ತಾಪಿಸಲಾಗಿದೆ. ಇದು ೨ ಪ್ಯಾಕೇಜ್. ೩ನೇ ಪ್ಯಾಕೇಜ್ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ, ಇದರ ಚಾಲನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ್ದು.
ಈ ಟೆಂಡರ್‌ಗೆ ಮುನ್ನ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಸರ್ಕಾರ ರೂಪಿಸಿದ ೧೪ ಅಂಶಗಳಿಗೆ ಸಮ್ಮತಿಸಿದ ಬಳಿಕವೇ ಸರ್ಕಾರಕ್ಕೆ ಟೆಂಡರ್ ಬಗ್ಗೆ ವರದಿ ಸಲ್ಲಿಸಬೇಕು. ನಂತರ ಟೆಂಡರ್ ಕರೆಯಲಾಗುವುದು. ಏನಿದ್ದರೂ ಮುಂದಿನ ವರ್ಷದಲ್ಲಿ ಹೊಸ ತ್ಯಾಜ್ಯ ವಿಲೇವಾರಿ ವಿಧಾನ ಕಾರ್ಯರೂಪಕ್ಕೆ ಬರಬಹುದು ಎನ್ನುತ್ತಾರೆ ಆಯುಕ್ತ ಡಾ|ವಿಜಯ ಪ್ರಕಾಶ್.
ಸಂಸ್ಥೆಗಳ ಒಪ್ಪಂದ
`ಕ್ಲೀನ್ ಮಂಗಳೂರು ಸಿಟಿ' ಘೋಷಣೆಯನ್ನು ಇಡೀ ಮಂಗಳೂರಿಗೆ ವಿಸ್ತರಿಸಲು ಪಾಲಿಕೆ ಹಾಕಿ ಕೊಂಡ ಕಾರ್ಯಕ್ರಮ ವಿವಿಧ ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳನ್ನು ಒಗ್ಗೂಡಿಸು ವುದು.
ಇವುಗಳ ನೆರವಿನಲ್ಲಿ ಎಲ್ಲರಲ್ಲಿ ಕಸ ವಿಲೇವಾರಿ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು, ಶಾಲೆ ಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿ, ಮುಂದೆ ಮನೆಗಳಲ್ಲಿ ಕಸ ವಿಭಾಗಿಸಲು, ಡೋರ್ ಟು ಡೋರ್ ಸಂಗ್ರಹಕ್ಕೆ ಇದು ಸುಲಭ ಎನ್ನುವುದು ಪಾಲಿಕೆಯ ಲೆಕ್ಕಾಚಾರ.
ಈಗಾಗಲೇ ಮಲಬಾರ್ ಗೋಲ್ಡ್ ಜತೆ ಪಾಲಿಕೆ ಕ್ಲೀನ್ ಸಿಟಿ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ನಗರದ ಆಗ್ನೇಸ್ ಕಾಲೇಜು ಜತೆ ಒಪ್ಪಂದಕ್ಕೆ ಮುಂದಾಗಿದೆ. ಇನ್ನೂ ಹಲವು ಸಂಘ ಸಂಸ್ಥೆ, ಶಾಲಾ ಕಾಲೇಜುಗಳು ಪಾಲಿಕೆ ಜತೆ ಕೈಜೋಡಿಸುವ ಪ್ರಯತ್ನ ಸಾಗುತ್ತಿದೆ
ಸಾಮಾನ್ಯವಾಗಿ ಮಳೆಗಾಲದಲ್ಲಿ ನಗರದಲ್ಲಿ ಕೃತಕ ನೆರೆ ಸೃಷ್ಟಿಸುವ ಚರಂಡಿಗಳತ್ತ ಈಗಲೇ ಗಮನ ಹರಿಸಲು ಪಾಲಿಕೆ ನಿರ್ಧರಿಸಿದೆ.
ಅಂಥ ಚರಂಡಿಗಳನ್ನು ಗುರ್ತಿಸಿ, ಬೇಸಗೆಯಲ್ಲಿ ಹೂಳೆತ್ತಿ, ಚರಂಡಿಯನ್ನು ಮತ್ತಷ್ಟು ಆಳ ಮಾಡು ವ ಉದ್ದೇಶ ಪಾಲಿಕೆಗಿದೆ. ಇದಕ್ಕೆ ಈಗಲೇ ಕಾರ್ಯಪ್ರವೃತ್ತವಾಗಿದೆ. ಪುಟ್‌ಪಾತ್, ಬೀಚ್‌ಗಳಲ್ಲೂ ಸ್ವಚ್ಛತೆ ಕಾಣಿಸಿಕೊಳ್ಳಲಿದೆ. ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ೬ ಲಕ್ಷ ಜನಸಂಖ್ಯೆ ಇದ್ದು, ಸುಮಾರು ೧.೨೫ ಲಕ್ಷ ಕುಟುಂಬ ಇರಬಹುದು ಎನ್ನುವುದು ಪಾಲಿಕೆಯ ಅಂದಾಜು.
Subscribe to:
Post Comments (Atom)
No comments:
Post a Comment