VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 27, 2010

ಮಂಗಳೂರು: ಹಿದಾಯ ಫೌಂಡೇಶನ್‌ನಿಂದ ವೈದ್ಯಕೀಯ ಶಿಬಿರ


ಮಂಗಳೂರು, ಮಾ.೨೬: ನಗರದ ಹಿದಾಯ ಫೌಂಡೇಶನ್ ವತಿಯಿಂದ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆಯ ಸಹಯೋಗ ದೊಂದಿಗೆ ನಡೆದ ಶಿಬಿರವನ್ನು ಕಾವಳಕಟ್ಟೆಯ ಹಝ್ರತ್ ಮೌಲಾನ ಮುಹಮ್ಮದ್ ಫಾಝಿಲ್ ರಝ್ವಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕಾವಳ ಮೂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಸ್ಥಳೀಯ ಮುಖಂಡ ವಸಂತ ಶೆಟ್ಟಿ, ಕುಂಞಿ ಅಬ್ದುಲ್ ಖಾದರ್, ಬುರೂಜ್ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಶೇಖ್ ರಹ್ಮತುಲ್ಲಾ, ಯೆನೆಪೋಯ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗ್ಲಾಡಿಸ್ ಭಾಗವಹಿಸಿದ್ದರು.

ಹಿದಾಯ ಫೌಂಡೇಶನ್‌ನ ಕಾರ್ಯಕಾರಿ ಸಮಿತಿ ಸಂಚಾಲಕ ಹಾಜಿ ಜಿ. ಮುಹಮ್ಮದ್ ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಮರ್ ಯು.ಎಚ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೆಹನಾ ಹಕೀಂ ಮಹಿಳೆಯರಿಗೆ ಪ್ರವಚನ ನೀಡಿದರು.

ಕಾವಳಕಟ್ಟೆ ಸರಕಾರಿ ಸಂಯುಕ್ತ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಸಹ ಪ್ರಾಯೋಜಕತ್ವದಲ್ಲಿ ನಡೆದ ಶಿಬಿರದಲ್ಲಿ ಯೆನೆಪೋಯ ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಮಕ್ಕಳ ರೋಗ, ಪ್ರಸೂತಿ, ಸ್ತ್ರೀ ರೋಗ, ನರ ಮಾನಸಿಕ ರೋಗ, ಕಿವಿ, ಮೂಗು, ಗಂಟಲು ರೋಗ, ಚರ್ಮ ರೋಗ, ಕಣ್ಣು ಮತ್ತು ಮೂಳೆ ರೋಗ ವಿಭಾಗದ ವೈದ್ಯರು ಭಾಗವಹಿಸಿದ್ದರು.

ಆರೋಗ್ಯ ಸಂರಕ್ಷಣೆಯ ಸೂತ್ರಗಳನ್ನು ತಿಳಿಸುವ ವಿಶೇಷ ಕಾರ್ಯಕ್ರಮವನ್ನು ಶಿಬಿದರಲ್ಲಿ ಏರ್ಪಡಿಸಲಾಗಿತ್ತು.

No comments: