ಮಂಗಳೂರು: ಅವ್ಯವಹಾರದಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿದ್ದ ಉಳ್ಳಾಲ ದಗರ್ಾ ಆಡಳಿತ ಸಮಿತಿಯ ಉಪಾಧ್ಯಕ್ಷ ಹಾಗೂ ಉರೂಸ್ ಸಮಿತಿಯ ಸಂಚಾಲಕ ಅಹ್ಮದ್ ಬಾವಾ ರನ್ನು ಅಧಿಕಾರದಿಂದ ಕಿತ್ತೊಗೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ದರ್ಗಾದ ಕಟ್ಟಡವೊಂದನ್ನು ಬಾಡಿಗೆ ನೀಡಲು 10 ಸಾವಿರ ರೂ. ಅಡ್ವಾನ್ಸ್ ಪಡೆದು ಹಾಗೂ ಬ್ಲ್ಯಾಂಕ್ ಸಿ.ಡಿ.ಗಾಗಿ ಸಾವಿರ ರೂ. ಪಡೆದ ಆರೋಪವೂ ಸೇರಿದಂತೆ ದರ್ಗಾದ ಆಡಳಿತಕ್ಕೆ ಕಳಂಕ ತರುವ ರೀತಿಯಲ್ಲಿ ವ್ಯವಹರಿಸುತ್ತಿದ್ದ ಆರೋಪದಲ್ಲಿ ಅಹ್ಮದ್ ಬಾವಾ ದರ್ಗಾದ ಆಡಳಿತಾ ತ್ಮಕ ಎಲ್ಲಾ ಹುದ್ದೆಗಳನ್ನು ಕಳೆದು ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವಿಷಯವಾಗಿ ಕಳೆದ ಮೂರು ವಾರಗಳಿಂದ ಗಲಾಟೆ ಗದ್ದಲ ಗಳು ನಡೆಯುತ್ತಿದ್ದು, ಕಳೆದ ಶುಕ್ರವಾರ ವಿಶೇಷ ಸಮಿತಿ ನಡೆಸಿದ ವಿಚಾರಣೆಯ ನಂತರ ಅಹ್ಮದ್ ಬಾವಾರನ್ನು ಉರೂಸ್ ಕಮಿಟಿ, ದರ್ಗಾ ಕಮಿಟಿ ಹಾಗೂ ಅರೆಬಿಕ್ ಟ್ರಸ್ಟ್ನ ಆಡಳಿತಾತ್ಮಕ ಹುದ್ದೆಗಳಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಚುನಾವಣೆಯ ಮೂಲಕ ಆಯ್ಕೆ ಯಾದ ದರ್ಗಾ ಕಮಿಟಿಯ ಸದಸ್ಯತ್ವ ಸ್ಥಾನದಿಂದಲೂ ವಜಾಗೊಳಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಇದರ ಅಧಿಕಾರವನ್ನು ಖಾಝಿಯವರಿಗೆ ನೀಡಲಾಗಿದೆ. ಈಗ ಕೇರಳದಲ್ಲಿರುವ ಖಾಝಿ ಇಂದು ಅಥವಾ ನಾಳೆ ಉಳ್ಳಾಲಕ್ಕೆ ಬರಲಿದ್ದು, ಅವರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಲಿದೆ.
ಒಂದು ಕಾಲದಲ್ಲಿ ಒಳ್ಳೆಯ ವ್ಯವಹಾರದೊಂದಿಗೆ ಜನರ ಮಧ್ಯೆದಲ್ಲಿ ಗುರುತಿಸಿಕೊಂಡಿದ್ದ ಅಹ್ಮದ್ ಬಾವಾ ಇತ್ತೀಚಿನ ದಿನಗಳಲ್ಲಿ ವ್ಯತಿರಕ್ತ ವ್ಯವ ಹಾರಗಳಿಂದ ದರ್ಗಾದಲ್ಲಿ ಹಂಗಾಮಕ್ಕೆ ಕಾರಣರಾಗಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ಅಹ್ಮದ್ ಬಾವಾರ ವರ್ತನೆಯ ಬಗ್ಗೆ ದಗರ್ಾ ಸಮಿತಿಯಲ್ಲಿ ಬಹಳ ಹಿಂದಿ ನಿಂದಲೂ ಆಕ್ಷೇಪಗಳಿತ್ತು.
ದರ್ಗಾದಲ್ಲಿ ಅವ್ಯವಹಾರ ನಡೆಸಿದರೆ ಅದು ಬೇಗನೇ ಬಹಿರಂಗಕ್ಕೆ ಬರುತ್ತದೆ. ಹಿಂದಿನ ಅಧ್ಯಕ್ಷ ಇಬ್ರಾಹಿಂ ಹಾಜಿ ಇಂತಹ ಸಂದರ್ಭದಲ್ಲಿ ಅವ್ಯವ ಹಾರದ ಭಾಗಿದಾರರಿಗೆ ಕೂಡಲೇ ಶಿಕ್ಷೆ ವಿಧಿಸಿ ಪ್ರಕರಣ ಹೆಚ್ಚು ಚರ್ಚೆಗೆ ಒಳಗಾಗದಂತೆ ಗಮನ ಹರಿಸುತ್ತಿದ್ದರು ಎಂದು ಹೇಳುವ ದರ್ಗಾದ ಭಕ್ತರು ಈಗಿನ ಅಧ್ಯಕ್ಷರಾದ ಯು.ಕೆ. ಮೋನು ಅವರು ಕೂಡಾ ಇಂತಹದ್ದೇ ಆಡಳಿತ ನಡೆಸಲಿ ಎಂದು ಆಶಯ ವ್ಯಕ್ತಪಡಿ ಸುತ್ತಾರೆ.
ಮೋನು ಅವರು ದರ್ಗಾದ ಅಧ್ಯಕ್ಷರಾದ ಬಳಿಕ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿರುವುದನ್ನು ಇಲ್ಲಿಯ ಭಕ್ತರು ಶ್ಲಾಘಿಸಿದ್ದಾರೆ.
ಸುಳ್ಳು ಹೇಳಿ ನಿಯೋಗಕ್ಕೆ ವಂಚಿಸಿದ ಶಾಸಕ ಭಟ್
ಉಡುಪಿ: ತನ್ನನ್ನು ಭೇಟಿ ಮಾಡಲು ಬಂದ ನಿಯೋಗವೊಂದಕ್ಕೆ ಶಾಸಕ.ಕೆ. ರಘುಪತಿ ಭಟ್ ಸುಳ್ಳು ಹೇಳಿ ವಂಚಿಸಿದ ಘಟನೆ ನಡೆದಿದೆ.
ಅಂಬಲಪಾಡಿ ಶ್ರೀಮಹಾಕಾಳಿ ಜನಾರ್ದನ ದೇವಾಲಯದ ಆವರಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ದಿನವಾದ ಮಾರ್ಚ್ 21ರಂದು ಈ ಪ್ರಸಂಗ ನಡೆದಿದೆ.
ಉದ್ಘಾಟನಾ ಸಮಾರಂಭದಲ್ಲಿ ರಘುಪತಿ ಭಟ್ಟರು ಅತಿಥಿಯಾಗಿ ಉಪಸ್ಥಿತರಿ ದ್ದರು. ಸಮಾರಂಭ ಮುಗಿದ ಬಳಿಕ ಶಾಸಕರನ್ನು ಕಂಡು ಮಾತನಾಡುವ ಉದ್ದೇಶದಿಂದ ಮೂರು ಮಂದಿಯ ನಿಯೋಗ ಭಟ್ಟರ ಬಳಿಗೆ ತೆರಳಿತ್ತು.
ಉಡುಪಿ ಜಿಲ್ಲಾ ಎಸ್ಡಿಎಂಸಿ ಮತ್ತು ಸಿಎಸಿ ಸಾಧನಾ ಸಮಾವೇಶ ಸಂಚಲನಾ ಸಮಿತಿ ಮೂವರು ಪ್ರಮುಖರಿದ್ದ ಈ ನಿಯೋಗದ ಜೊತೆಗೆ ಅಂಬಲಪಾಡಿಯಲ್ಲಿ ಮಾತನಾಡಲೊಪ್ಪದ ಶಾಸಕರು ಕಿದಿಯೂರು ಶಾಲೆಯಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ನಾನು ಹೋಗುತ್ತಿದ್ದೇನೆ. ನೀವು ಅಲ್ಲಿಗೆ ಬನ್ನಿ ಅಲ್ಲಿ ಮಾತನಾಡೋಣ ಎಂದು ಹೇಳಿದ್ದರೆನ್ನಲಾಗಿದೆ.
ಕಾರ್ಕಳ ಮತ್ತು ಕುಂದಾಪುರ ದಿಂದ ಆಗಮಿಸಿದ ಎಸ್ಡಿಎಂಸಿ ಶಾಲಾಭಿ ವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಬ್ಬರ ಜೊತೆಗೆ ಎಸ್ಡಿಎಂಸಿ ಅಧ್ಯಕ್ಷರೂ ಆದ ಮಂಜುನಾಥ್ ಕೊಡಮಾರು, ಕಿದಿಯೂರು ಶಾಲೆಗೆ ಹೋಗಿ ಕಾದು ನಿಂತರೆ, ಕಾದು ನಿಂತದಷ್ಟೇ ಬಂತು. ಭಟ್ಟರು ಬರಲೇ ಇಲ್ಲ ಎಂದು ಹೇಳಲಾಗಿದೆ. ಕಿದಿಯೂರು ಶಾಲೆಯಲ್ಲಿ ನಡೆಯುತ್ತಿದ್ದ ಜನಸ್ಪಂದನಕ್ಕೆ ರಘುಪತಿ ಭಟ್ಟರಿಗೆ ಅಧಿಕೃತ ಆಹ್ವಾನ ಇರಲಿಲ್ಲ. ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಕಿದಿಯೂರು ಬರುವುದರಿಂದ ಲಾಲಾಜಿ ಮೆಂಡನ್ ಅವರನ್ನಷ್ಟೇ ಆಹ್ವಾನಿಸಲಾಗಿತ್ತು. ರಘುಪತಿ ಭಟ್ಟರು ಅಂಬಲಪಾಡಿಯಲ್ಲಿ ನಿಯೋಗಕ್ಕೆ ಕಿದಿಯೂರಿಗೆ ಹೊಗುವುದಾಗಿ ಸುಳ್ಳು ಹೇಳಿ ಬೇರೆ ಕಡೆಗೆ ಹೋಗಿ ಮೋಸ ಮಾಡಿದ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಎಸ್ಡಿಎಂಸಿ -ಸಿಎಸಿ ಸಾಧನಾ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಕೊಡವೂರು ಅವರು ಶಾಸಕ ಭಟ್ಟರ ವಿರುದ್ದ ಭಾಷಣದಲ್ಲಿ ತೀವ್ರವಾಗಿ ಹರಿಹಾಯ್ದುದ್ದರು. ಇದೇ ಕಾರಣಕ್ಕೆ ಭಟ್ಟರು ಎಸ್ಡಿಎಂಸಿ ಅಧ್ಯಕ್ಷರಿಗೆ ಸುಳ್ಳು ಹೇಳಿ ವಂಚಿಸಿ, ದ್ವೇಷ ಸಾಧಿಸಿದರೆಂದು ಶಂಕಿಸಲಾಗಿದೆ.
Mar 24, 2010
Subscribe to:
Post Comments (Atom)
No comments:
Post a Comment