VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಉಲ್ಟಾ ಹೊಡೆದ ಚವಾಣ್,ಬಚ್ಚನ್ ಜತೆ ವೇದಿಕೆ ಹಂಚಿಕೊಳ್ಳಲ್ಲ!


ಬಾಂದ್ರಾ-ವರ್ಲಿ ಸೀ ಲಿಂಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮೇರುನಟ ಬಿಗ್ ಬಿಯನ್ನು ಸ್ವತ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಆಹ್ವಾನಿಸಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ನಂತರ ಇದೀಗ ಪುಣೆಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಾವು ಮೆಗಾಸ್ಟಾರ್ ಬಚ್ಚನ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.

ಭಾನುವಾರ ನಡೆಯಲಿರುವ ಮರಾಠಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಚವಾಣ್ ಮತ್ತು ಬಚ್ಚನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸೀ ಲಿಂಕ್ ವಿವಾದ ಹುಟ್ಟಿಕೊಂಡ ನಂತರ, ತಮ್ಮ ನಿಲುವು ಬದಲಾಯಿಸಿಕೊಂಡಿರುವ ಚವಾಣ್, ಬಚ್ಚನ್ ಆಗಮನ ಸಂದರ್ಭದ ಸಮಯದ ಕಾರ್ಯಕ್ರಮ ಬದಲಾಯಿಸಿ, ಇಂದಿನ (ಶನಿವಾರ) ಕಾರ್ಯಕ್ರಮಕ್ಕೆ ತಾವು ಹಾಜರಾಗುವುದಾಗಿ ತಿಳಿಸಿದ್ದಾರೆಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಸತೀಶ್ ದೇಸಾಯಿ ವಿವರಿಸಿದ್ದಾರೆ.

ಆದರೆ ಅಮಿತಾಭ್ ಬಚ್ಚನ್ ಅವರು ನಿಗದಿತ ಕಾರ್ಯಕ್ರಮದ ವೇಳಾಪಟ್ಟಿಯಂತೆ ಸಮಾರಂಭಕ್ಕೆ ಹಾಜರಾಗಲಿದ್ದಾರೆ. ಅವರ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಭಾನುವಾರದ ಬಚ್ಚನ್ ಹಾಜರಾಗುವ ಕಾರ್ಯಕ್ರಮದ ಬದಲಾಗಿ, ಶನಿವಾರವೇ ಸಮ್ಮೇಳನಕ್ಕೆ ಆಗಮಿಸಿದ ಚವಾಣ್, ಪುಸ್ತಕ ಪ್ರದರ್ಶನದ ಮಳಿಗೆಗೆ ಭೇಟಿ ನೀಡಿರುವುದಾಗಿ ದೇಸಾಯಿ ಹೇಳಿದರು.

No comments: