VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಗಂಗೂಲಿ, ತಿವಾರಿ ಬ್ಯಾಟಿಂಗ್ ಅಬ್ಬರ: ಪಂಜಾಬ್‌ಗೆ ಸೋಲು



ಸೌರವ್ ಗಂಗೂಲಿ(50, 40ಎಸೆತ, 6ಬೌಂಡರಿ, 1ಸಿಕ್ಸ್) ಹಾಗೂ ಮನೋಜ್ ತಿವಾರಿ(75ರನ್, 47ಎಸೆತ, 8ಬೌಂಡರಿ, 2ಸಿಕ್ಸರ್)ಯ ಅಬ್ಬರ ಬ್ಯಾಟಿಂಗ್‌ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಎದುರಾಳಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 39ರನ್‌ಗಳಿಂದ ಗೆಲುವು ಪಡೆದಿದೆ.

ಶನಿವಾರ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ ಒಡ್ಡಿದ 184ರನ್ ಗುರಿಯನ್ನು ಬೆನ್ನಟ್ಟಿದ್ದ ಕಿಂಗ್ಸ್ ಪಂಜಾಬ್ 20ಓವರ್‌ಗಳಲ್ಲಿ 6ವಿಕೆಟ್ ನಷ್ಟಕ್ಕೆ 144ರನ್ ಗಳಿಸಿ ಸೋಲನ್ನನುಭವಿಸಿದೆ. ಅಜಿತ್ ಅಗರ್ಕರ್ ಮತ್ತು ಶೇನ್ ಬಾಂಡ್ ಅವರ ಮಾರಕ ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ತತ್ತರವಾಗಿತ್ತು.

ಕಿಂಗ್ಸ್ ಪಂಜಾಬ್ ತಂಡದ ಇರ್ಫಾನ್ ಪಠಾಣ್ (22)ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆಂಬ ನೀರಿಕ್ಷೆಯ ನಡುವೆಯೂ ಬಾಂಡ್ ಬೌಲಿಂಗ್ ದಾಳಿಗೆ ಕೊನೆಯ ವಿಕೆಟ್ ಉರುಳುವ ಮೂಲಕ ಸೋಲಿಗೆ ಶರಣಾಯಿತು.

ನೈಟ್ ರೈಡರ್ಸ್ ನಾಯಕ ಗಂಗೂರಿ ಹಾಗೂ ಕ್ರಿಸ್ ಗೇಲ್ ನಡುವಣ ಮೊದಲ ವಿಕೆಟ್ ಜೊತೆಯಾಟ ಕೇವಲ 28ರನ್‌ಗಳಿಗೆ ಕೊನೆಯಾಗಿತ್ತು. ಶಲಭ್ ಶ್ರೀವಾಸ್ತವ್ ವೇಗದ ಬೌಲಿಂಗ್‌ಗೆ ಗೇಲ್ ಶೀಘ್ರವೇ ಫೇವಿಲಿಯನ್‌ಗೆ ಮರಳಿದ್ದರು. ನಂತರ ತಿವಾರಿ ಹಾಗೂ ಗಂಗೂಲಿ ಅಬ್ಬರದ ಆಟ ತಂಡಕ್ಕೆ ಹೆಚ್ಚಿನ ಬಲ ನೀಡಿತ್ತು.

ಕೋಲ್ಕತಾ ನೈಟ್ ರೈಡರ್ಸ್ 20ಓವರ್‌ಗಳಲ್ಲಿ 5ವಿಕೆಟ್ ನಷ್ಟಕ್ಕೆ 183

ಕ್ರಿಸ್ ಗೇಲ್-14,ಗಂಗೂಲಿ-50, ಮನ್‌ದೀಪ್ ಸಿಂಗ್-04, ಮನೋಜ್ ತಿವಾರಿ ಔಟಾಗದೆ-75, ಡೇವಡ್ ಹಸ್ಸಿ-03, ಆಂಜೆಲೋ ಮ್ಯಾಥ್ಯೂನ್-19, ವೃದ್ಧಿಮಾನ್-00, ಇತರೆ-18.

ಕಿಂಗ್ಸ್ ಇಲೆವೆನ್ ಪಂಜಾಬ್ 20ಓವರ್‌ಗಳಲ್ಲಿ 6ವಿಕೆಟ್ ನಷ್ಟಕ್ಕೆ 144
ಬೋಪಾರ-00, ಯುವರಾಜ್ ಸಿಂಗ್-24, ಮನ್ವಿಂದರ್ -22, ಕುಮಾರ ಸಂಗಕ್ಕಾರ-30, ಜಯವರ್ಧನೆ-16, ಇರ್ಫಾನ್ ಪಠಾಣ್-22, ಕರಣ್ ಗೊಯೆಲ್ ಔಟಾಗದೆ-07, ಇತರೆ-06.

No comments: