'ಕಾಶ್ಮೀರಿ ನಿವಾಸಿಗಳೇ ಭದ್ರತಾ ಪಡೆ ಅಥವಾ ಪೊಲೀಸ್ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿವುದನ್ನು ನಿಲ್ಲಿಸಿ, ಇಲ್ಲದಿದ್ರೆ ಸಾವಿನ ಶಿಕ್ಷೆ ಎದುರಿಸಿ' ಎಂದು ಪಾಕಿಸ್ತಾನ್ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಇ ತೊಯ್ಬಾ ಕಾಶ್ಮೀರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದೆ.
ಇಲ್ಲಿನ ದೋಡಾ ಜಿಲ್ಲೆಯಲ್ಲಿ ಅಂಟಿಸಿರುವ ಪೋಸ್ಟ್‌ರ್‌ಗಳಲ್ಲಿ ಲಷ್ಕರ್ ಸಂಘಟನೆ ಕಾಶ್ಮೀರಿಗಳಿಗೆ ಈ ಹೊಸ ಎಚ್ಚರಿಕೆ ನೀಡಿದ್ದು, ಯಾರೇ ಸ್ಥಳೀಯರಾಗಲಿ ಅರೆಸೇನಾ ಪಡೆಗಳಲ್ಲಾಗಲಿ ಅಥವಾ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದರೆ ಅಂತಹವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದೆ.
ಅಲ್ಲದೇ, ಯಾರು ಅರೆಸೇನಾ ಪಡೆ ಅಥವಾ ಪೊಲೀಸ್ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೋ ಅಂತಹವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಲ್ಲದಿದ್ರೆ ಅದರ ಪರಿಣಾಣ ಎದುರಿಸಿ ಎಂಬುದಾಗಿ ಸ್ಥಳೀಯ ನಿವಾಸಿಗಳಿಗೆ ಪೋಸ್ಟ್‌ರ್‌ನಲ್ಲಿ ಗಂಭೀರ ಎಚ್ಚರಿಕೆ ನೀಡಿದೆ.
ಮುಂದಿನ ದಿನಗಳಲ್ಲಿ ಸ್ಪೆಶಲ್ ಪೊಲೀಸ್ ಕಚೇರಿಯ ಮೇಲೆ ದಾಳಿ ನಡೆಸುವ ಗುರಿಯನ್ನು ಹೊಂದಿರುವುದಾಗಿ ಲಷ್ಕರ್ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ. ಆ ನಿಟ್ಟಿನಲ್ಲಿ ಕಾಶ್ಮೀರಿಗಳು ಭದ್ರತಾ ಪಡೆ ಅಥವಾ ಪೊಲೀಸ್ ಇಲಾಖೆಗೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದೆ!
ಪ್ರಸಕ್ತ ಸಾಲಿನ ಜನವರಿ ತಿಂಗಳಿನಲ್ಲಿ ದೋಡಾ ಜಿಲ್ಲೆಯಲ್ಲಿ ಸುಮಾರು ಎಂಟು ಮಂದಿ ಕಮಾಂಡರ್‌ಗಳನ್ನು ಲಷ್ಕರ್ ಇ ತೊಯ್ಬಾ ಸಂಘಟನೆಯಿಂದ ಕಿತ್ತುಹಾಕಿದೆ. ಇದೀಗ ವಜಾಗೊಂಡಿರುವ ಉನ್ನತ ಕಮಾಂಡರ್‌ಗಳೇ ಕಾಶ್ಮೀರಿ ನಿವಾಸಿಗಳನ್ನು ಗುರಿಯಾಗಿಟ್ಟುಕೊಂಡು ಹೊಸ ಬೆದರಿಕೆಯ ತಂತ್ರವನ್ನು ಹೂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment