VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 24, 2010

ಪುಣೆ ತಂಡಕ್ಕೆ ಸಚಿನ್ ಗೆ ಮೊದಲ ಆದ್ಯತೆ : ಸಹಾರ



wd
ನವದೆಹಲಿ:ಐಪಿಎಲ್ ತಂಡವೊಂದನ್ನು ಖರೀದಿಸಿರುವ ಸಹರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್‌ರವರು ನೂತನ ಪುಣೆ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕತ್ವ ವಹಿಸುವ ಬಗ್ಗೆ ಬಯಕೆ ವ್ಯಕ್ತಪಡಿಸಿದ್ದಾರೆ.



ಒಂದು ವೇಳೆ ಸಚಿನ್ ಲಭ್ಯರಿದ್ದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದವರು ಹೇಳಿದ್ದಾರೆ. ಭಾನುವಾರ ನಡೆದಿದ್ದ ಐಪಿಎಲ್ ನೂತನ ತಂಡಗಳ ಹರಾಜಿನಲ್ಲಿ ಸಹರಾ ಸಮೂಹವು 1,700 ಕೋಟಿ ರೂಪಾಯಿಗಳಿಗೆ ಪುಣೆ ತಂಡವನ್ನು ಖರೀದಿಸಿತ್ತು.

ಸಚಿನ್ ಪ್ರಸಕ್ತ ಐಪಿಎಲ್‌ನಲ್ಲಿ ನೀತಾ ಮತ್ತು ಮುಖೇಶ್ ಅಂಬಾನಿ ಮಾಲಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆಟಗಾರರ ಜೊತೆಗಿನ ಐಪಿಎಲ್ ತಂಡಗಳ ಒಪ್ಪಂದವು ಪ್ರಸಕ್ತ ಆವೃತ್ತಿಯ ನಂತರ ಕೊನೆಗೊಳ್ಳಲಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಆಟಗಾರರ ಹರಾಜು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಆದರೆ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಹಕ್ಕನ್ನು ಫ್ರಾಂಚೈಸಿಗಳು ಹೊಂದಿವೆ.

ಅದೇ ವೇಳೆ ತಮ್ಮ ತಂಡದ ಪ್ರಚಾರಕ್ಕಾಗಿ ಬಾಲಿವುಡ್‌ನತ್ತವೂ ಸುಬ್ರತೊ ಆಕರ್ಷಿತರಾಗಿದ್ದಾರೆ. ಇದಕ್ಕಾಗಿ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಕುಟುಂಬದ ನೆರವು ಪಡೆಯುವ ಇರಾದೆ ವ್ಯಕ್ತಪಡಿಸಿದ್ದಾರೆ.
ಇಂದಿನ ಯುಗದಲ್ಲಿ ಗ್ಲಾಮರ್ ಅತಿ ಪ್ರಾಮುಖ್ಯವೆನಿಸಿದೆ. ಇದನ್ನೂ ಯಾರೂ ನಿರಾಕರಿಸುತ್ತಿಲ್ಲ. ಆದ್ದರಿಂದ ಕ್ರಿಕೆಟ್‌ಗೆ ಗ್ಲಾಮರ್ ಎಂಟ್ರಿಯಾಗಬೇಕಾಗಿದೆ. ಇದರಿಂದ ಶಾರೂಕ್ ಖಾನ್, ಪ್ರೀತಿ ಜಿಂಟಾ ಹಾಗೂ ಶಿಲ್ಪಾ ಶೆಟ್ಟಿಯವರು ಹೊಂದಿರುವ ಫ್ರಾಂಚೈಸಿಗಳಿಗೆ ಸಡ್ಡು ಹೊಡೆಯಲು ಸಾಧ್ಯ ಎಂಬುದು ಸುಬ್ರತೊ ಮಾತು.

ಈ ವಿಷಯಕ್ಕೆ ಬಿಗ್ ಬಿ ಜೊತೆ ಮಾತಾಡಿಲ್ಲ. ಆದರೆ ಶೀಫ್ರದಲ್ಲೇ ಮಾತುಕತೆ ನಡೆಸಲಿದ್ದೇನೆ ಎಂದವರು ವಿವರಿಸಿದರು.
ಮೊದಲ ಸುತ್ತಿನ ಐಪಿಎಲ್‌ ತಂಡಗಳ ಹರಾಜಿನಲ್ಲಿ ಪಾಲ್ಗೊಳ್ಳದೇ ಇದ್ದುದಕ್ಕೆ ಕಾರಣ ವ್ಯಕ್ತಪಡಿಸಿದ ಅವರು, 'ನಾವು ಬಿಸಿಸಿಐ ರಾಷ್ಟ್ರೀಯ ತಂಡದ ಪ್ರಾಯೋಜಕತ್ವ ವಹಿಸಿದ್ದೆವು. ಆದ್ದರಿಂದ ನಮ್ಮ ಲೋಗೋವನ್ನು ಕ್ಲಬ್ ಮಟ್ಟದಲ್ಲಿ ಬಳಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಆದರೆ ಇದೀಗ ಪರಿಸ್ಥಿತಿಯೇ ಸಂಪೂರ್ಣ ಬದಲಾಗಿ ಬಿಟ್ಟಿದೆ' ಎಂದವರು ಹೇಳಿದರು.

No comments: