VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 24, 2010

ಆಸೀಸ್‌ ವಿರುದ್ಧಕಿವಿಸ್ಗೆಹತ್ತು ವಿಕೆಟ್ ಭರ್ಜರಿ ಜಯ

ವೆಲ್ಲಿಂಗ್ಟನ್:ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡವು ಹತ್ತು ವಿಕೆಟುಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.
369/6 ಎಂಬಲ್ಲಿದ್ದ ಅಂತಿಮ ದಿನದಾಟ ಮುಂದುವರಿಸಿದ ಕಿವೀಸ್, ಬ್ರೆಡಂ ಮೆಕಲಮ್ ಬಾರಿಸಿದ ಶತಕದ (104) ಹೊರತಾಗಿಯೂ 134.5 ಓವರುಗಳಲ್ಲಿ 407 ರನ್ನುಗಳಿಗೆ ಆಲೌಟಾಗಿತ್ತು. ಈ ಮೂಲಕ ಪ್ರವಾಸಿಗರ ಗೆಲುವಿಗೆ 106 ರನ್ ನಿಗದಿಪಡಿಸಿತು.
ನಂತರ ಆರಂಭಿಕ ಪಿಲಿಪ್ ಹ್ಯೂಜ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಪಂಟರ್ ಬಳಗ 23 ಓವರುಗಳಲ್ಲಿ ಗೆಲುವಿನ ಗುರಿ ತಲುಪಿತು. ಈ ಮೂಲಕ ಹತ್ತು ವಿಕೆಟುಗಳ ಸುಲಭ ಜಯ ದಾಖಲಿಸಿತು. ಕೇವಲ 75 ಎಸೆತಗಳನ್ನು ಎದುರಿಸಿದ ಹ್ಯೂಜ್ 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 86 ರನ್ ಗಳಿಸಿದರು.

ಈ ಮೊದಲು ದಿನದಾಟ ಆರಂಭಿಸಿದ ಕಿವೀಸ್ ನಿನ್ನೆಯ ಮೊತ್ತಕ್ಕೆ 38 ರನ್ ಪೇರಿಸುವುದರೆಡೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು. 187 ಎಸೆತಗಳನ್ನು ಎದುರಿಸಿದ ಮೆಕಲಮ್ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 104 ರನ್ ಗಳಿಸಿದರು. ದಿಟ್ಟ ಹೋರಾಟ ನಡೆಸಿದ ಡ್ಯಾರೆಲ್ ಟಫಿ ಕೂಡಾ ಅಜೇಯ 47 ರನ್ ಗಳಿಸಿದರು.
ಇದಕ್ಕೂ ಮೊದಲು ಆಸೀಸ್‌ನ 459 ರನ್ನುಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 157 ರನ್ನುಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ್ದ ಮೈಕಲ್ ಕ್ಲಾರ್ಕ್ (168) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸರಣಿಯ ಅಂತಿಮ ಪಂದ್ಯ ಮಾರ್ಚ್ 27 ಶನಿವಾರದಂದು ಹ್ಯಾಮಿಂಲ್ಟನ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್ ಪಟ್ಟಿ:ಆಸ್ಟ್ರೇಲಿಯಾ 459 ಮತ್ತು 106/0 ;ನ್ಯೂಜಿಲೆಂಡ್ 157 ಮತ್ತು 407

No comments: