VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 20, 2010

ಗುಹೆಯೊಳಗಿದ್ದ ಸ್ವಾಮಿಯ ಕೂದಲು, ಗಡ್ಡ ಮಾಯ!?


ಮಂಗಳೂರು: ಸ್ವಾಮಿಗಳ ಮೇಲಿನ ನಂಬಿಕೆ ಕಳಕೊಳ್ಳುತ್ತಿರುವಂ ತಹ ದಿನಗಳಲ್ಲಿ ಬೆಳಗಾವಿಯಲ್ಲೊಬ್ಬ ಸ್ವಾಮಿ ನೀರಿದ್ದ ಗುಹೆಯೊಳಗೆ ಎರಡು ತಿಂಗಳು ಕಳೆದು ಮರಳು ವಾಗ ಆತನ ಗಡ್ಡ ಫುಲ್‌ ಶೇವ್‌ ಮಾಡಿದ ಸ್ಥಿತಿಯಲ್ಲಿದ್ದು, ಆತನ ಚಡ್ಡಿ ಬಣ್ಣ ಕೂಡ ಬದಲಾಗಿರುವುದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.

ಬೆಳಗಾಗಿಯ ಅಥಣಿ ತಾಲೂ ಕಿನ ಜುಂಜುರವಾಡ ಧರ್ಮಪೀಠ ಮಠದ ಶಿವಯೋಗಿ ಸ್ವಾಮಿ (ಸಂಪೂರ್ಣ ಗಡ್ಡ ಮತ್ತು ಕೂದಲು ಇತ್ತು)ಯನ್ನು ಜನವರಿ 10ರಂದು ಕೈಕಾಲು ಸಂಪೂರ್ಣವಾಗಿ ಕಟ್ಟಿ ನೀರು ತುಂಬಿದ್ದ ಗುಹೆಯೊಳಗೆ ಬಿಡಲಾಗಿತ್ತು. ಬಳಿಕ ಗುಹೆಯನ್ನು ಕಲ್ಲಿನಿಂದ ಭದ್ರವಾಗಿ ಮುಚ್ಚಲಾಗಿತ್ತು. ಅಲ್ಲಿ ಅನ್ನಾಹಾರಗಳೆನ್ನೆಲ್ಲ ತ್ಯಜಿಸಿದ್ದ ಸ್ವಾಮಿ 65 ದಿನಗಳ ಬಳಿಕ ಮರಳಿ ದಾಗ ಅವರ ಕೂದಲು ಕಟ್ಟಿಂಗ್‌ ಮಾಡಲಾಗಿತ್ತು ಮತ್ತು ಗಡ್ಡ ಕ್ಲೀನ್‌ ಶೇವ್‌ ಮಾಡಲಾಗಿತ್ತು. ಇದು ಅಲ್ಲಿ ನೆರೆದಿದ್ದ ಭಕ್ತರಲ್ಲಿ ಕೆಲವು ಸಂಶಯ ಗಳನ್ನು ಹುಟ್ಟುಹಾಕಿದೆ.

ಇಷ್ಟೇ ಅಲ್ಲದೆ ಪ್ರಜ್ಞಾಹೀನ ಸ್ಥಿತಿ ಯಲ್ಲಿದ್ದ ಈ ಸ್ವಾಮಿಯನ್ನು ಮೇಲ ಕ್ಕೆತ್ತಿದ ಬಳಿಕ ಮಠದಲ್ಲಿ ತಂದು ಮಲಗಿ ಸಿದಾಗ ಅಲ್ಲಿಗೆ ಬಂದ ಗೋವು ಸ್ವಾಮಿ ಯನ್ನು ಸ್ಪರ್ಶಿಸಿದ ಕೂಡಲೇ ಆತ ತಕ್ಷಣ ಎದ್ದು ಕುಳಿತದ್ದು ಮತ್ತಷ್ಟು ಸಂಶಯಗಳನ್ನು ಸೃಷ್ಟಿಸಿದೆ. ಸ್ವಾಮಿ ಮೇಲೆ ಬಂದಾಗ ಮತ್ತೊಂದು ವಿಸ್ಮಯ ಸಂಭವಿಸಿದ್ದು, ಸ್ವಾಮಿ ಗುಹೆ ಯೊಳಗೆ ಇಳಿಯುವಾಗ ಹಾಕಿದ್ದ ನೀಲಿ ಚಡ್ಡಿ ಕೆಂಪು ಚಡ್ಡಿಯಾಗಿ ಪರಿವರ್ತನೆಯಾಗಿದೆ. ಕೆಲವು ತಜ್ಞರು ಸ್ವಾಮಿ ಕೇವಲ ನಾಟವಾಡುತ್ತಿದ್ದಾ ರೆಂದು ಹೇಳಿದರೆ, ಮತ್ತೆ ಕೆಲವರು ತಪಸ್ಸಿನಿಂದಾಗಿ ಸ್ವಾಮಿಯ ತಲೆ ಕೂದಲು ಮತ್ತು ಗಡ್ಡ ಶೇವ್‌ ಆಗಿದೆ ಎನ್ನುತ್ತಾರೆ. ಆದರೆ ಸ್ವಾಮಿಯ ಗಡ್ಡ ಮತ್ತು ತಲೆಕೂದಲು ಕ್ಷೌರಿಕ ತೆಗೆದಂತೆ ಇರುವುದು ಎಲ್ಲರಲ್ಲಿ ಅನುಮಾನವ ನ್ನುಂಟು ಮಾಡಿದೆ. 65 ದಿನ ನೀರಿನಲ್ಲಿ ಇದ್ದು, ಯಾವುದೇ ಅನ್ನಾಹಾರ ಇಲ್ಲ ದಿದ್ದರೆ ಸ್ವಾಮಿ ದೇಹ ನಿಶಕ್ತಿಯಿಂದ ಬಳಲಬೇಕಾಗಿತ್ತು. ಆದರೆ ಅಂತಹ ಯಾವುದೇ ಲಕ್ಷಣಗಳು ಕಾಣದಿರು ವುದು ಜನರನ್ನು ಸ್ವಾಮಿ `ಕುರಿಗಳ ನ್ನಾಗಿ ಮಾಡಿದರು ಎನ್ನುತ್ತಾರೆ. ಚಡ್ಡಿ ಬಣ್ಣ ಬದಲಾಯಿ ಸಿದ ಬಗ್ಗೆ ಸ್ವಾಮಿ ಯಲ್ಲಿ ಕೇಳಿದಾಗ, ಇದೆಲ್ಲ ತಪಸ್ಸಿನಿಂದ ಸಾಧ್ಯವೆನ್ನುತ್ತಾನೆ. ಇದೆಲ್ಲ ತಪಸ್ಸಿನಿಂದ ಸಾಧ್ಯವೇ? ಅಥವಾ ಕಪಟ ನಾಟಕವೇ? ಎನ್ನುವ ಹಲವಾರು ಪ್ರಶ್ನೆಗಳು ಜನರನ್ನು ಈಗಲೂ ಕಾಡುತ್ತಿದೆ.

No comments: