VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 15, 2010

ಏಮಾಜೆ ಕೊಂಕಣ್ ಗ್ಯಾಸ್ ಘಟಕ ಸ್ಥಳಾಂತರಕ್ಕೆ ಒಗ್ಗೂಡಿದ ಗ್ರಾಮಸ್ಥರು.ಸಮಾಲೋಚನಾ ಸಭೆಯಲ್ಲಿ ಹೋರಾಟಕ್ಕೆ ನಿರ್ಧಾರ


ವಿಟ್ಲ: ಜನವಸತಿ ಪ್ರದೇಶದಲ್ಲಿ ಅನಿಲಸ್ಥಾವರ ಸ್ಥಾಪನೆಗೆ ಅನುಮತಿ ನೀಡಿರುವುದರಿಂದ ಈ ಪ್ರದೇಶದ ಜನ ಸಾವು ಬದುಕಿನ ಮಧ್ಯೆ ಇರುವಂ ತಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಇಲ್ಲಿನ ಕೊಂಕಣ್ ಅನಿಲ ಸ್ಥಾವರದಲ್ಲಿ ಅನಿಲಸೋರಿಕೆ ನಡೆದು ನಾವು ಜೀವಂತವಾಗಿ ಉಳಿದಿರುವುದೇ ಅದೃಷ್ಟ. ಅಗ್ನಿ ಪ್ರಳಯದ ಕರಿ ನೆರಳಿನಲ್ಲಿ ಬದುಕಬೇಕಾದ ಅನಿವಾರ್ಯತೆಯಲ್ಲಿ ನಾವಿಂದು ಇರುವುದರಿಂದ ಭವಿಷ್ಯತ್ತಿ ನಲ್ಲಿ ನಾವು ನಿರಾಳವಾಗಿ ಬದುಕು ಳಿಯಲು ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅನಿಲ ಸ್ಥಾವರವನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರಗೊಳಿಸಲು ಗ್ರಾಮಸ್ಥರು ಇನ್ನಾದರೂ ಎಚ್ಚೆತ್ತುಕೊಂಡು ಒಗ್ಗೂಡಿ ಹೋರಾಟ ನಡೆಸಬೇಕೆಂದು ಖ್ಯಾತ ವೈದ್ಯ ಡಾ.ರಾಮಕೃಷ್ಣ ಭಟ್ ಕರೆ ನೀಡಿದರು.
ಅವರು ಅನಿಲ ಸೋರಿಕೆಯಿಂದ ಪರಿಸರ ವಾಸಿಗಳಿಗೆ ಎದುರಾಗಬಹು ದಾದ ಅನಾಹುತವನ್ನು ತಪ್ಪಿಸಲು ಶನಿವಾರ ಏಮಾಜೆಯಲ್ಲಿ ನಡೆದ ನೆಟ್ಲಮೂಡ್ನೂರು ಮತ್ತು ಇಡ್ಕಿದು ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಜನರಿಗೆ ಜಾಗೃತಿ ಮೂಡಿಸಿದರು. ಈಗಾಗಲೇ ಇಲ್ಲಿ 20 ಟನ್ ಅನಿಲ ಸೋರಿಕೆಯಾಗಿದ್ದು, ಪರಿಸರದೆಲ್ಲೆಡೆ ವ್ಯಾಪಿಸಿ ಪರಿಸರ ಮಾಲಿನ್ಯವಾಗಿದೆ. ಅದರ ಸೇವನೆ ಯಿಂದ ಆರೋಗ್ಯದ ಮೇಲೂ ದುಷ್ಪರಿ ಣಾಮ ಬೀಳಲಿದೆ. ಇಲ್ಲಿ 40 ಮೆಟ್ರಿಕ್ ಟನ್ ಸಾಮಾಥ್ರ್ಯದ ಮೂರು ಬುಲೆಟ್ಗಳ ಪೈಕಿ 1ರಲ್ಲಿ ಗೇಟ್ವಾಲ್ವ್ ತುಂಡಾದ ಪರಿಣಾಮ ಸೋರಿಕೆ ಉಂಟಾಗಿದ್ದು, ಇನ್ನೆರಡು ಬುಲೆಟ್ಗ ಳಿಗೆ ಅನಿಲ ತುಂಬಿಸಿದ್ದು, ಶಿಥಿಲ ಗೊಂಡ ಈ ಬುಲೆಟ್ಗಳಲ್ಲಿ ಸೋರಿಕೆಯಾಗುತ್ತಿದೆ . ಆದರೆ ಈ ಬಗ್ಗೆ ಘಟಕ ಮೌನವಹಿಸಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಆತಂಕಕಾರಿ ವಿಚಾರವೊಂದನ್ನು ಬಹಿರಂಗಗೊಳಿಸಿದರು.
ಗ್ರಾಮಸ್ಥರಾದ ನಿವೃತ್ತ ಆರೋ ಗ್ಯಾಧಿಕಾರಿ ಭುಜಂಗರವರು ಮಾತನಾಡಿ ಕಳೆದ 13 ವರ್ಷಗಳಿಂದ ಇಲ್ಲಿ ಅನಿಲ ಸ್ಥಾವರವೊಂದು ಕಾರ್ಯಾಚರಿಸುತ್ತಿದ್ದರೂ ನಾವು ಸಾವಿನ ನೆರಳಲ್ಲಿಯೇ ಬದುಕುತ್ತಿದ್ದೇವೆ ಎಂಬ ವಿಚಾರ ಕಳೆದ 15 ದಿನಗಳ ಹಿಂದೆ ಸಂಭವಿಸಿದ ಅನಾಹುತದಿಂದ ದೃಢಪಟ್ಟಿದೆ. ಗ್ರಾಮವೇ ಬೆಂಕಿಗಾಹುತಿಯಾಗುವ ಬಹುದೊಡ್ಡ ದುರಂತ ನಡೆಯಬಹುದಾದ ಘಟನೆಯಿಂದ ಸ್ಥಾವರ ಇನ್ನೂ ಎಚ್ಚರಗೊಂಡತ್ತಿಲ್ಲ. ಸುತ್ತುಮುತ್ತಲಿನ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಮನೆಗಳಿಗೆ ಕಂಪೆನಿ ಖಡ್ಡಾಯವಾಗಿ ಜೀವವಿಮೆ ಮಾಡಿಸಬೇಕು. ತುರ್ತು ಅಗ್ನಿಶಾಮಕ ವ್ಯವಸ್ಥೆಯನ್ನು ಕಂಪೆನಿ ಅಳವಡಿಸಿಕೊಳ್ಳಬೇಕು, ಪರಿಣತ ಮೆಕ್ಯಾನಿಕ್ಗಳನ್ನು ನಿಯುಕ್ತಿಗೊಳಿಸಬೇಕು, ತುರ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಖಡ್ಡಾಯವಾಗಿ ಇರಿಸಿಕೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕಂಪೆನಿಗೆ ಅಸಾಧ್ಯವಾಗುವುದಾದರೆ . ಇಲ್ಲಿ ನಡೆಯುತ್ತಿರುವ ಸ್ಥಾವರವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ನೀಲಯ್ಯ ಏಮಾಜೆ, ಸಂಜೀವ, ಶಿವರಾಮಯ್ಯ, ಅಬೂಬಕ್ಕರ್ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿ ಪರಿಸರಕ್ಕೆ ಪ್ರಳಯಸ್ವರೂಪವಾಗಿರುವ ಯಾವುದೇ ಘಟಕವನ್ನು ಇಲ್ಲಿ ಇರಲು ಬಿಡುವುದಿಲ್ಲ ಎಂದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ರಮಣಿ, ವಿಠಲ ಭಟ್, ಮಿತ್ತೂರು ಸಿರಾಜುಲ್ ಹುದಾ ಮಸೀದಿ ಉಪಾಧ್ಯಕ್ಷ ಉಮ್ಮರ್ ಹಾಜಿ. ದೇಜಪ್ಪ ಪೂಜಾರಿ, ಡೆನ್ನಿಸ್ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘಟಿಸಿದ ಹಾಯ್ ಪುತ್ತೂರು ಪತ್ರಿಕೆ ಸಂಪಾದಕ ಹಮೀದ್ ಕಂದಕ್ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಎರಡೂ ಗ್ರಾಮಗಳ ಗ್ರಾಮಸ್ಥರ ಸಂಕಷ್ಟಗಳನ್ನು ನಿವಾರಿಸಲು ಗ್ರಾಮ ಹಿತರಕ್ಷಣಾ ವೇದಿಕೆ ಎಂಬ ಹೋರಾಟ ಸಮಿತಿಯನ್ನು ರಚಿಸುವುದಾಗಿ ಮತ್ತು ಆ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಯ್ದುಕೊಳ್ಳುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಸ್ಥಾವರದ ವಿರುದ್ಧ ವೇದಿಕೆ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ತಿಳಿಸಿದರು.

No comments: