
ಮಂಗಳೂರು: ಕಳೆದ ಮೂರು ತಿಂಗಳುಗಳಿಂದ ಸುಳ್ಯ ಮಂಡಳ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟುಗಳನ್ನು ಶಮನಗೊಳಿಸುವ ಜವಾಬ್ದಾರಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವರಿಗೆ ವಹಿಸಲಾಗಿದ್ದು, ಅವರು ಈ ವಾರದಲ್ಲಿ ಸುಳ್ಯ ಬಿಜೆಪಿ ರಾಜಕಾರಣದ ಗೊಂದಲವನ್ನು ನಿವಾರಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಸುಳ್ಯ ಮಂಡಳ ಬಿಜೆಪಿಯ ಪ್ರಬಲ ನಾಯಕ ಚಂದ್ರ ಕೊಲ್ಚಾರ್ ರನ್ನು ಪಕ್ಷದಿಂದ ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಬಿಜೆಪಿ ಎರಡು ಗುಂಪಾಗಿ ವಿಂಗಡಿಸಲ್ಪಟ್ಟಿದೆ. ಚಂದ್ರ ಕೊಲ್ಚಾರ್ರ ಉಚ್ಛಾಟನೆ ಅಸಂವಿಧಾನಿಕ ಎನ್ನುವ ಗುಂಪು ಅವರ ರಕ್ಷಣೆಗೆ ನಿಂತಿದೆ. ಸುಳ್ಯ ಬಿಜೆಪಿಯಲ್ಲಿ ತಮ್ಮ ಹಿಡಿತ ಬಿಟ್ಟುಕೊಡಲೊಪ್ಪದ ಗುಂಪು ಚಂದ್ರರ ವಿಷಯದಲ್ಲಿ ರಾಜಿಗೆ ಸಿದ್ದವಾಗಿಲ್ಲ.
ಸಂಘದ ನಾಯಕ ಸೀತಾರಾಮ ಪಕ್ಷವನ್ನು ತನ್ನ ವಯಕ್ತಿಕ ಹಿತಾಸಕ್ತಿಗೆ ಬಳಸುತ್ತಿದ್ದಾರೆ. ಈ ಹಿಂದೆ ನಡೆಸಿದ ಸಮಾಜೋತ್ಸವ ಸೇರಿದಂತೆ ಸಾರ್ವ ಜನಿಕ ಕಾರ್ಯಕ್ರಮಗಳ ಹಣಕಾಸಿನ ಜವಾಬ್ದಾರಿ ಸೀತಾರಾಮರ ಸುಪರ್ದಿ ಯಲ್ಲಿತ್ತು . ಆದರೆ ಈವರೆಗೆ ಯಾವು ದರ ಲೆಕ್ಕಪತ್ರವನ್ನೂ ಅವರು ನೀಡಿಲ್ಲ ಎಂಬ ವಿಷಯದೊಂದಿಗೆ ಆರಂಭ ವಾದ ಗೊಂದಲ ಚಂದ್ರರ ಉಚ್ಛಾಟನೆ ಯವರೆಗೂ ಮುಂದುವರಿದಿದ್ದು, ಇಲ್ಲಿ ಬಿಜೆಪಿಯ ಅಸ್ತಿತ್ವವನ್ನು ಅಲುಗಾಡಿಸು ವ ಹಂತಕ್ಕೆ ತಲುಪಿದೆ. ಬಿಜೆಪಿಯ ಸುಳ್ಯ ಮಂಡಳದ ಅಧ್ಯಕ್ಷರಾಗಲು ಚಂದ್ರ ಕೊಲ್ಚಾರರು ಆಸಕ್ತರಾಗಿದ್ದರು . ಆದರೆ ಸೀತಾರಾಮರ ಆಯ್ಕೆ ಪ್ರಕ್ರಿಯೆಯಲ್ಲಿ ಜಿ.ಪಂ.ಸದಸ್ಯ ವೆಂಕಟ ದಂಬೆಕೋಡಿ ಅಧ್ಯಕ್ಷರಾದರು. ಬಿಜೆಪಿ ಸಂವಿಧಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ ಎಂಬುದು ಚಂದ್ರರ ಆರೋಪ. ಇದೇ ಕಾರಣಕ್ಕಾಗಿ ಸೀತಾರಾಮರ ಹಾಗೂ ಚಂದ್ರರ ಮಧ್ಯೆ ಭಾರೀ ಜಟಾಪಟಿಯು ನಡೆದಿತ್ತು. ಇಷ್ಟಾದ ಮೇಲೆಯೂ ಗೊಂದಲವನ್ನು ಸರಿಪಡಿಸಲು ಸ್ಥಳೀಯವಾಗಿ ಪ್ರಯತ್ನಿಸಲಾಗಿತಾ್ತದರೂ, ಪ್ರಯತ್ನ ಫಲ ಪಡೆಯುವ ಮೊದಲೇ ಚಂದ್ರರನ್ನು ಉಚ್ಛಾಟಿಸಲಾ ಗಿದೆ ಎಂದು ವೆಂಕಟ ದಂಬೆಕೋಡಿ ಪ್ರಕಟಣೆ ಹೊರಡಿಸಿದ್ದರು.
ಉಚ್ಛಾಟನೆಯ ಅಧಿಕಾರ ಇರುವುದು ರಾಜ್ಯ ಅಧ್ಯಕ್ಷರಿಗೆ ಮಾತ್ರ ಹಾಗಿರುವಾಗ ನನ್ನ ಉಚ್ಛಾಟನೆ ಮಾಡಲು ಇವರ್ಯಾರು ಎಂಬುದು ಚಂದ್ರರ ಪ್ರಶ್ನೆ. ಪಕ್ಷದಲ್ಲಿ ಉಂಟಾಗಿ ರುವ ಗೊಂದಲ ನಿವಾರಣೆಗೆ ಆಸಕ್ತರಾಗಿರುವ ಮನ್ಮಥ ಎರಡೂ ಗುಂಪಿನ ಮಧ್ಯೆ ಸಾಮರಸ್ಯ ಮೂಡಿಸುವ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದರಿಂದ ಈಗ ಗೊಂದಲ ನಿವಾರಣೆಯ ಜವಾಬ್ದಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಸಂಸದ ನಳಿನ್ಕುಮಾರ್ ಕಟೀಲ್ರ ಸುಪರ್ದಿಗೆ ಬಂದಿದೆ. ಮಾರ್ಚ್ 25ರ ವರೆಗೆ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಮಾರ್ಚ್ 25ರ ನಂತರ ನಳಿನರು ಸುಳ್ಯಕ್ಕೆ ಹೋಗಬಹುದು ಎನ್ನಲಾಗುತ್ತಿದೆ ಯಾದರೂ ಸುಳ್ಯದ ರಾಜಕೀಯ ನಾಯಕರು ಅಧಿವೇಶನದ ಮಧ್ಯದಲ್ಲಿಯೇ ಬಿಡುವು ಮಾಡಿಕೊಂಡು ನಳಿನ್ ಸುಳ್ಯಕ್ಕೆ ಬರಲಿದ್ದಾರೆ ಎನ್ನುತ್ತಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಸಮಾಲೋಚನಾ ಬೈಠಕ್ನಲ್ಲಿ ಕಾಂಗ್ರೆ ಸ್ನ ಬ್ಲಾಕ್ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ಇರುತ್ತದೆ. ಆದರೆ ಬಿಜೆಪಿಯ ರಾಷ್ಟ್ರ ಅಧ್ಯಕ್ಷರ ಆಯ್ಕೆಯೂ ಗೊಂದಲವಿಲ್ಲದೆ ಮುಗಿಯುತ್ತದೆ ಎಂದು ಹೆಮ್ಮೆಯಿಂದ ತಮ್ಮ ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ಹೇಳಿಕೊಂಡಿದ್ದರು.ಈಗ ಅವರೇ ಸುಳ್ಯ ಹಾಗೂ ಬೈಂದೂರು ಮಂಡಳಗಳಲ್ಲಿ ಉಂಟಾಗಿರುವ ಗೊಂದಲಗಳ ನಿವಾರಣೆಯ ಹೊಣೆ ಹೊತ್ತಿರುವುದು ವಿಪಯರ್ಾಸ.
ಏರುತ್ತಿದೆ ಬಿರು ಬಿಸಿಲು
ಮಂಗಳೂರು: ಮನೆಯಲ್ಲಿ ಇರಲಾಗಲ್ಲ ಹೊರಗೆ ಹೋಗುವ ಹಾಗೆ ಇಲ್ಲ . ಇದು ಸಧ್ಯ ಕರಾವಳಿ ವಾಸಿಗಳ ಪಾಡು ಇನ್ನು ಬೇಸಿಗೆ ಸರಿಯಾಗಿ ಆರಂಭವಾಗಿ ಆಗಲೆ ಈ ರೀತಿಯ ಪಾಡಾದರೆ ಇನ್ನು ಮುಂದಿನ ಮೂರು ತಿಂಗಳು ಕಳೆಯುವುದಾದರೂ ಹೇಗೆ? ಮಂಗಳೂರಿನಲ್ಲಿ ಗರಿಷ್ಠ ಉಷ್ಣ 35 ಡಿಗ್ರಿ ಸೆಲ್ಸಿಯಸ್ ದಾಟಿದೆ ಇದು ಇನ್ನು ಮೀರುವ ಮೊದಲು ಒಂದು ಮಳೆ ಆಗದಿದ್ದರೆ ಬದುಕು ದುಸ್ತರವಾಗಲಿದೆ.
ಬಿರು ಬಿಸಿಲಿನಿಂದ ಕೆಲಸವೂ ಮಾಡಲಾಗದ ವಿಶ್ರಾಂತಿಯೂ ಪಡೆಯಲಾಗದ ಸ್ಥಿತಿ ಒಂದೆಡೆ ಇದ್ದರೆ, ಆರೋಗ್ಯ ಸ್ಥಿತಿ ಹದೆಗೆಟ್ಟಿದ್ದು ಕ್ಲಿನಿಕ್ಗಳಲ್ಲಿ ನರ್ಸಿಂಗ್ ಹೋಂಗಳಲ್ಲಿ ರೋಗಿಗಳ ಸಾಲು ಸಾಲು. ಚಿಕ್ಕಮಕ್ಕಳ ಮೇಲಂತೂ ಈ ಬೇಸಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಹಿಂದೆಂದೂ ಕಾಣದ ಬಿಸಿಲ ಝಳವು ಈ ಬಾರಿ ಆವರಿಸಿದ್ದು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರುತ್ತಿರುವ ವರದಿಗಳು ಬರುತ್ತಿವೆ. ಮನುಷ್ಯರು ಮಾತ್ರವಲ್ಲ. ಜಾನುವಾರುಗಳ ಸ್ಥಿತಿಯೂ ಸರಿಯಾಗಿಲ್ಲ. ಮಾರ್ಚ್ ಅಂತ್ಯದ ನಂತರ ಬಿಸಿಲ ಬೆಗೆ ಹೆಚ್ಚಾಗುವುದು ಸಾಮಾನ್ಯ ಆದರೆ ಈ ಬಾರಿ ಮಾರ್ಚ್ ಮೊದಲ ವಾರವೇ ಸೂರ್ಯ ಪ್ರತಾಪ ಕಾಣುತ್ತಿದೆ.
ಬಾವಿ, ಕೆರೆಗಳು ಮಾತ್ರವಲ್ಲ ನದಿಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ಮಳೆಗಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದುದರಿಂದ ಸ್ವಲ್ಪವಾದರೂ ನೀರು ಕಾಣುವಂತಾಗಿದೆ. ಅದಿಲ್ಲದಿದ್ದರೆ ಇಷ್ಟೊತ್ತಿಗೆ ಬಾವಿ ಎಲ್ಲಾ ಬತ್ತಿ ಹೋಗಿರುತ್ತಿದ್ದವು. ಬಿಸಿಲ ಪ್ರಕೋಪ ನಮಗೆ ಮಾತ್ರ ಸೀಮಿತವಾಗಿಲ್ಲ. ಹತ್ತಿರದ ಕೇರಳವೂ ಇದರ ಪ್ರಭಾವಕ್ಕೊಳಗಾಗಿದೆ. ಉಷ್ಣಾಂಶದ ತೀವ್ರತೆಯ ಪ್ರಭಾವವನ್ನು ತಿಳಿಯಲು ತಜ್ಞರ ಸಮಿತಿಯನ್ನು ರಚಿಸಲು ಕೇರಳ ಸರಕಾರ ತೀರ್ಮಾನಿಸಿದೆ ಎಂದರೆ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.
ಈ ವರ್ಷದ ಬೇಸಿಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಗಲಿನಲ್ಲಿ ಓದಲು ಆಗುವುದಿಲ್ಲ. ರಾತ್ರಿ ಕರೆಂಟ್ ಇರುವುದಿಲ್ಲ ಎನ್ನುವ ಕಷ್ಟದ ಸ್ಥಿತಿಯಲ್ಲೂ ವಿದ್ಯಾರ್ಥಿಗಳು ಓದಿನಲ್ಲಿ ನಿರತರಾಗಿದ್ದಾರೆ. ವಿದ್ಯಾರ್ಥಿಗಳ ದುಃಸ್ಥಿತಿಯನ್ನು ಕೇರಳ ಸರಕಾರ ಅರ್ಥಮಾಡಿಕೊಂಡಂತಿದೆ.
ಮುಂದಿನ ವರ್ಷದಿಂದ ಫೆಬ್ರವರಿ ಅಂತ್ಯದೊಳಗೆ ಎಲ್ಲ ಪರೀಕ್ಷೆಗಳನ್ನು ಮುಗಿಸಲು ಕೇರಳ ಸರಕಾರ ಚಿಂತನೆ ನಡೆಸಿದೆ. ಮಾರ್ಚ್ನಲ್ಲಿ ಬಿಸಿಲ ಧಗೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಓದಿನ ಮೇಲೆ ಅಡ್ಡಪರಿಣಾಮ ಬೀರುವುದು ಮಾತ್ರವಲ್ಲ, ಉರಿಬಿಸಿಲಿನಲ್ಲಿ ದೂರದೂರದ ಊರುಗಳಿಂದ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಇದರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಈ ವಿಷಯ ಕರ್ನಾಟಕದ ಮಂತ್ರಿ ಮಾಗಧರಿಗೂ ಅರ್ಧವಾದರೆ ಒಳ್ಳೆಯದಿತ್ತು.
ರಾಷ್ಟ್ರನಾಯಕಿಯಾಗಲು ಶೋಭಾ ನಕಾರ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳಲು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ನಿರಾಕರಿ ಸಿದ್ದಾರೆ.
ಸದ್ಯಕ್ಕೆ ರಾಜ್ಯ ರಾಜಕೀಯದಲ್ಲೇ ಮುಂದುವರಿಯುವ ಇಚ್ಛೆಯಿದ್ದು. ಕೇಂದ್ರ ಆಡಳಿತಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಲವೇ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲು ಈ ಹಿಂದೆ ಸಮ್ಮತಿಸಿದ್ದರು. ಆದರೆ ಹಠಾತ್ತನೆ ತಮ್ಮ ನಿರ್ಧಾರ ಬದಲಾಯಿಸಿರುವ ಅವರು ತಾವು ಕೇಂದ್ರ ರಾಜಕೀಯಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಶಿಫಾರಸು ಮಾಡದಿರುವಂತೆ ಮನವಿ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಹುತೇಕ ಮುಖ್ಯಮಂತ್ರಿಯವರೂ ಸಮ್ಮತಿಸಿದ್ದಾರೆ. ಆದರೆ ರಾಜ್ಯಘಟಕ ಯಾವುದೇ ನಿರ್ಣಯ ಕೈಗೊಂಡಿಲ್ಲ. ಬಹುತೇಕ ಮತ್ತೆ ಯಡಿಯೂರಪ್ಪ ಸಂಪುಟದಲ್ಲಿ ಮುಂದು ವರಿಯಬೇಕೆಂಬ ಇಚ್ಛೆ ಶೋಭಾ ಅವರದ್ದಾಗಿದೆ.
ಒಂದು ವೇಳೆ ಅವರ ನಿಲುವು ಅಚಲವಾದಲ್ಲಿ ಮತ್ತೆ ಯಡಿಯೂರಪ್ಪರ ಸಂಪುಟ ಸೇರುವುದು ಖಚಿತ. ಬಳ್ಳಾರಿ ಗಣಿರೆಡ್ಡಿ ಸಚಿವರು ಶೋಭಾ ಅವರ ವಿರುದ್ಧ ತಳೆದಿದ್ದ ನಿಲುವು ಬದಲಾವಣೆ ಯಾಗಿರುವ ಹಿನ್ನಲೆಯಲ್ಲಿ ಈ ನಿಧರ್ಾರ ಕೈಗೊಂಡಿದ್ದಾರೆಂದು ಹೇಳಲಾಗಿದೆ.
No comments:
Post a Comment