VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 27, 2010

ಲವ್ ಡ್ರೈವಿಂಗ್
ಡ್ರೈವಿಂಗ್ ಸ್ಕೂಲ್ ಚಾಲಕನೊಂದಿಗೆ ಮಹಿಳೆ ಪರಾರಿ
ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದ ಆಶ್ರಯ ಕಾಲನಿಯಿಂದ ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ, ಡ್ರೈವಿಂಗ್ ಕಲಿಸುತ್ತಿದ್ದ ಚಾಲಕನೋರ್ವನ ಜೊತೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಆಶ್ರಯ ಕಾಲನಿಯ ನಿವಾಸಿ ಉಮ್ಮರ್ ಫಾರೂಕ್ ರವರ ಪತ್ನಿ ಆಸ್ಯಮ್ಮ (28) ಕಾಣೆಯಾಗಿರುವ ಮಹಿಳೆ. ಕಳೆದ ಫೆಬ್ರವರಿ 20ರಂದು ಆಸ್ಯಮ್ಮ ತನ್ನಿಬ್ಬರು ಮಕ್ಕಳನ್ನು ಈಶ್ವರಮಂಗಲ ದಲ್ಲಿರುವ ತನ್ನ ತವರು ಮನೆಯಲ್ಲಿ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಈಶ್ವರಮಂಗಲದ ಆಸ್ಯಮ್ಮನ ನಾಪತ್ತೆ ಪ್ರಕರಣ ನಿಗೂಢತೆ ಸೃಷ್ಟಿಸಿತ್ತು.
ಪುತ್ತೂರು ಸಂತ ಫಿಲೋಮಿನಾ ಕಾಲೇಜು ಬಳಿಯ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಖಾದರ್ ಎಂಬಾತನ ಜೊತೆ ಆಕೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ವಾಹನ ಚಾಲನೆ ಕಲಿಸುತ್ತಿದ್ದ ಖಾದರ್ ಯಾನೆ ಬ್ರೋಕರ್ ಖಾದರ್ ಮತ್ತು ಆಸ್ಯಮ್ಮ ನಡುವೆ ಸ್ನೇಹ ಸಂಬಂಧ ಇತ್ತೆಂದೂ, ಆತ ಆಕೆಯನ್ನು ಬಲೆಗೆ ಹಾಕಿಕೊಂಡು ಪರಾರಿ ಯಾಗಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಅವರನ್ನು ಪತ್ತೆ ಹಚ್ಚಲು ಈ ತನಕ ಸಾಧ್ಯವಾಗಿಲ್ಲ. ಖಾದರ್ ಈ ಹಿಂದೆ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಯುವತಿ ಯೊಬ್ಬಳನ್ನು ಬಲೆಗೆ ಹಾಕಲು ಯತ್ನಿಸಿ ಸ್ಥಳೀಯರಿಂದ ಒದೆ ತಿಂದನೆಂಬ ಆರೋಪವಿದೆ.
-jayakirana

No comments: