ಮಂಗಳೂರು: ಭೂಗತ ಪಾತಕಿಯೋರ್ವನ ಆಜ್ಞಾನುಸಾರ ನಗರದ ಇಬ್ಬರು ರೌಡಿಗಳ ಕೊಲೆಗೆ ಸ್ಕೆಚ್ ರೂಪಿಸಿದ ಐವರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯೊಂದರ ಅನ್ವಯ ತುರ್ತು ಕಾರ್ಯಾಚರಣೆ ನಡೆಸಿದ ಡಿಸಿಐಬಿ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸರು ಮೊನ್ನೆ ಸಂಜೆ ವೇಳೆ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಪೊಲೀಸರು ನಿರಾಕರಿಸಿದ್ದು ಬಂಧಿತರನ್ನು ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಬಂಧಿತರು ನಗರದ ಇಬ್ಬರು ರೌಡಿ ಗಳ ಹತ್ಯೆಗೆ ಸಂಚು ರೂಪಿಸಿದ್ದರು. ಇವರಿಗೆ ಭೂಗತ ಲೋಕದ ಡಾನ್ ಒಬ್ಬ ಆರ್ಥಿಕ ನೆರವನ್ನು ನೀಡುತ್ತಿದ್ದು ಆತನ ಆಜ್ಞೆಯನುಸಾರ ಈ ಮರ್ಡರ್ ಸ್ಕೆಚ್ ರೂಪುಗೊಂಡಿತ್ತು. ಬೇರೊಂದು ಪ್ರಕರಣವನ್ನು ಭೇದಿಸುವ ಧಾವಂತದಲ್ಲಿದ್ದ ಡಿಸಿಐಬಿ ಪೊಲೀಸರಿಗೆ ಈ ಮರ್ಡರ್ ಪ್ಲಾನ್ನ ಖಚಿತ ಮಾಹಿತಿ ದೊರೆತಿದ್ದು, ಇದರ ಆಧಾರದಲ್ಲಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದರ ಹಿಂದೆ ಮತ್ತೆ ಆರು ಮಂದಿಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಇದ್ದರೂ ಅದಿನ್ನೂ ಖಚಿತಗೊಂಡಿಲ್ಲ.
ಈ ಬಗ್ಗೆ ಡಿಸಿಐಬಿ ಇನ್ಸ್ಪೆಕ್ಟರ್ರಿಂದ ಮಾಹಿತಿ ಪಡೆಯಲು ಕರೆ ಮಾಡಿದರೆ ಅವರು ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ. ಡಿಸಿಐಬಿಯ ಇತರ ಸಿಬ್ಬಂದಿಗಳು ಮಾಹಿತಿ ನಿರಾಕರಿಸುತ್ತಿದ್ದು ಈ ವಿಚಾರವನ್ನು ಗೌಪ್ಯ ವಾಗಿಡಲಾಗಿದೆ.
ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸುವ ಸಾಧ್ಯತೆ ಇದೆ.
Mar 15, 2010
Subscribe to:
Post Comments (Atom)
No comments:
Post a Comment