VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 15, 2010

ಹಿಂದೂ ಸಂಘಟನೆಯ ಬೀಚ್ವಾಚ್

ಮಂಗಳೂರು: ರಜಾದಿನಗಳಂದು ಮುಸ್ಸಂಜೆ ಹೊತ್ತು ಬೀಚ್ ವಿಹಾರಕ್ಕೆ ಬರುವ ಜನ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಲ್ಲಿ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ಸಂಜೆ ವೇಳೆ ಸುರತ್ಕಲ್ ಬೀಚ್ಗೆ ವಿಹಾರಕ್ಕೆ ಬಂದಿದ್ದ ಹಿಂದು ಕುಟುಂಬವೊಂದನ್ನು ಹಿಂದು ಸಂಘಟ ನೆಯೊಂದರ ಹೆಸರು ಹೇಳಿಕೊಂಡ ತಂಡವೊಂದು ತಡೆದು ನಿಲ್ಲಿಸಿ ಮಹಿಳೆಯರಿಗೆ ಅಶ್ಲೀಲವಾಗಿ ನಿಂದಿಸಿದ ಘಟನೆ ನಡೆದಿದೆ. ಇದನ್ನು ವಿಚಾರಿಸಿದ ಕುಟುಂಬದ ಹಿರಿಯರಿಗೆ ಸಂಘಟನೆಯ ಸದಸ್ಯರೆನ್ನಲಾದ ಮಂದಿ ಧಮ್ಕಿ ಹಾಕಿದರು ಎನ್ನಲಾಗಿದೆ.

ಕಾವೂರು ಮುಲ್ಲಕಾಡಿನ ಕುಟುಂಬವೊಂದು ನಿನ್ನೆ ಸಂಜೆ ತಡಂಬೈಲಿನ ಸದಾಶಿವ ಮಹಾಗಣಪತಿ ದೇವಸ್ಥಾ ನಕ್ಕೆಂದು ಬಂದಿದ್ದು ದೇವರ ದರ್ಶನದ ಬಳಿಕ ಇವರು ಸುರತ್ಕಲ್ ಬೀಚಿಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಇವರನ್ನು ತಡೆದು ನಿಲ್ಲಿಸಿದ ಹನ್ನೆರಡು ಜನರ ತಂಡವೊಂದು ಕುಟುಂಬದ ಮಹಿಳೆಯರ ಬಳಿ ಅಶ್ಲೀಲವಾಗಿ ಮಾತನಾಡಿ ದ್ದಲ್ಲದೆ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಅವರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ತಕ್ಷಣ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಾಸ್ತವವಾಗಿ ಕುಟುಂಬವನ್ನು ತಡೆಗಟ್ಟಿದವರು ನಿಜವಾಗಿಯೂ ಹಿಂದೂ ಸಂಘಟನೆಯ ಸದಸ್ಯರೇ ಅಥವಾ ಸಂಘಟನೆ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಯೇ ಎಂದು ತಿಳಿದು ಬಂದಿಲ್ಲ.

ಮೊನ್ನೆ ಪಿಲಿಕುಳದಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದ್ದು. ಪಿಲಿಕುಳಕ್ಕೆ ತಿರುಗಾಟಕ್ಕೆ ಬಂದಿದ್ದ ಕಾರಿನ ಚಕ್ರದ ಗಾಳಿ ತೆಗೆದ ಘಟನೆ ನಡೆದಿದೆ.

ಇದಕ್ಕೆ ಮೊದಲು ಪಿಳಿಕುಳಕ್ಕೆ ಬಂದಿದ್ದ ಮಂಜೇಶ್ವರದ ಮುಸ್ಲಿಂ ಜೋಡಿಯೊಂದರ ಮೇಲೆ ತಪ್ಪು ಕಲ್ಪನೆಯಿಂದ ಮುಸ್ಲಿಂ ಯುವಕರ ತಂಡ ಹಲ್ಲೆಗೆ ಮುಂದಾಗಿತ್ತು. ಓಡಿಹೋಗುವ ಭರದಲ್ಲಿ ಹುಡುಗನ ಬೈಕ್ ಅಪಘಾತಕ್ಕೀಡಾಗಿತ್ತು.

ಇಂತಹ ನೈತಿಕ ಪೊಲೀಸರಿಂದಾಗಿ ಇತ್ತೀಚಿನ ದಿನಗಳಲ್ಲಿ ಬೀಚ್ ಮತ್ತು ಇತರ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತರಾಗಿ ಬರಲು ಜನರು ಹಿಂಜರಿಯುತ್ತಿದ್ದು ಪೊಲೀಸರು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

No comments: