
ಸುಳ್ಯ, ಮಾ.೨೬: ಕೇಂದ್ರದ ಯುಪಿಎ ಸರಕಾರವು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಸಿರುವುದನ್ನು ಖಂಡಿಸಿ ಶುಕ್ರವಾರ ಸುಳ್ಯದಲ್ಲಿ ಬಿಜೆಪಿ ಸುಳ್ಯ ಮಂಡಲ ಮೋರ್ಚಾ ಮತ್ತು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಯಿತು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿ.ಪಂ.ಸದಸ್ಯ ಸತೀಶ್ ನಾಕ್ ಸೇರಿ ದಂತೆ ಅನೇಕ ಜನಪ್ರತಿನಿಧಿಗಳು, ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಸೈಕಲ್ ಸವಾರಿ ನಡೆಸಿ ಪ್ರತಿಭಟಿಸಿದರು.
ಶಾಸಕ ಎಸ್.ಅಂಗಾರ, ವೆಂಕಟ್ ದಂಬೆಕೋಡಿ, ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಪುಲಸ್ಯ ರೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಮತ್ತಿತರರು ಮಾತನಾಡಿ, ಯುಪಿಎ ಸರಕಾರವು ಬಡತನ ನಿರ್ಮೂಲನೆಯ ಬದಲು ಬಡವರನ್ನು ನಿರ್ಮೂಲನೆ ಮಾಡಲು ಹೊರಟಿದೆ ಎಂದು ವ್ಯಂಗವಾಡಿದರು.
ಯುವ ಮೋರ್ಚಾ ಅಧ್ಯಕ್ಷ ಕೇಶವ ಭಟ್ ಮುಳಿಯ, ಕಾರ್ಯದರ್ಶಿ ಸುಧಾಕರ, ಮಹಿಳಾ ಮೋರ್ಚಾದ ಅಧ್ಯಕ್ಷ ರವಿಕಲಾ, ಕಾರ್ಯದರ್ಶಿ ಗುಣವತಿ, ಪಕ್ಷದ ನಾಯಕರಾದ ಪಿ.ಕೆ.ಉಮೇಶ್, ಉಮೇಶ್ ವಾಗ್ಲೆ, ಎನ್.ಎಸ್.ಸುವರ್ಣಿನಿ, ಸುರೇಶ್ ಕಣೆಮರಡ್ಕ, ಪ್ರಕಾಶ್ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ವೆಂಕಟ್ ವಳಲಂಬೆ, ಕೃಪಾಶಂಕರ ತುದಿಯಡ್ಕ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಆರಿಫ್ ಎಂಜಿನಿಯರ್ ಭಾಗವಹಿಸಿದ್ದರು.
ಮಕ್ಕಳ ಸೈಕಲ್ ಮೇಲೆ ದೊಡ್ಡವರ ಸವಾರಿ!
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಯನ್ನು ಸಾಂಕೇತಿಸುವ ಸಲುವಾಗಿ ಬಿಜೆಪಿಯ ಈ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಬಳಕೆ ಯಾದದ್ದು ಮಾತ್ರ ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ನೀಡಿದ ಬೈಸಿಕಲ್‌ಗಳು!
ಸುಮಾರು ಇಪ್ಪತ್ತ ರಷ್ಟಿದ್ದ ಬೈಸಿಕಲ್‌ಗಳ ಪೈಕಿ ಮುಕ್ಕಾಲು ಪಾಲು ವಿದ್ಯಾರ್ಥಿಗಳದ್ದೇ ಆಗಿತ್ತು. ಅವುಗಳಿಗೆ ಬಿಜೆಪಿ ಧ್ವಜ ಕಟ್ಟಿ ನಾಯಕರು, ಕಾರ್ಯಕರ್ತರು ಅದರಲ್ಲೇ ಸವಾರಿ ಮಾಡಿ ಬೆಲೆಯೇರಿಕೆ ವಿರುದ್ಧ ತಮ್ಮ ಆಕ್ರೋಶ ತೋಡಿಕೊಂಡರು.
ಕಾನೂನು ಪ್ರಕಾರ ವಿದ್ಯಾರ್ಥಿಗಳ ಸೈಕಲ್ ಗಳನ್ನು ಬೇರೆ ಯಾರೂ ಬಳಸುವಂಲ್ಲ. ಆದರೆ ಇಲ್ಲಿ ಈ ಕಾನೂನು ಅನ್ವಯವಾಗಿಲ್ಲ.
No comments:
Post a Comment