VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ಮತಾಂತರಕ್ಕೆ ಯತ್ನಿಸಿದ ಪಾದ್ರಿಗೆ ನ್ಯಾಯಾಂಗ ಬಂಧನ

ಸುಳ್ಯ: ಜಟ್ಟಿಪಳ್ಳದ ಬಾಡಿಗೆ ಮನೆಯಲ್ಲಿದ್ದ ಕುಟುಂಬಗಳನ್ನು ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಪಾದ್ರಿ ವೆಲ್ಸಲನ್‌ಗೆ ನ್ಯಾಯಾಂಗ ಬಂಧನವಿಧಿಸಲಾಗಿದೆೆ. ಜಟ್ಟಿ ಪಳ್ಳ ಬೋರುಗುಡ್ಡೆಯಲ್ಲಿ ವಾಸವಾಗಿದ್ದ ಆರೋಪಿತ ಪಾದ್ರಿ ಬಾಡಿಗೆ ಮನೆಯಲ್ಲಿದ್ದ ಇತರ ಕುಟುಂಬಗಳಿಗೆ ತಮ್ಮ ಧರ್ಮದ ಪ್ರಕಾರ ನಡೆಯುತ್ತಿದ್ದ ಬಲಿಪೂಜೆಗೆ ಬರಲು ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಜೋರಾಗಿ ಬೊಬ್ಬೆ ಹಾಕಿ ತಮ್ಮ ಧರ್ಮದ ಭಜನೆಮಾಡುತ್ತಿದ್ದ ಪಾದ್ರಿ ದಂಪತಿಗಳು, ಹತ್ತಿರದ ಮನೆಯವರಿಗೆ ಹಲವು ರೀತಿಯ ಪ್ರಲೋಭನೆ ಒಡ್ಡುತ್ತಿದ್ದರು.

ಕಾಯಿಲೆ ಇದ್ದವರಿಗೆ ಕಾಯಿಲೆ ವಾಸಿಮಾಡುತ್ತೇವೆ, ಕಷ್ಟ ಇದ್ದವರಿಗೆ ಹಣ ಕೊಡುತ್ತೇವೆ ಎಂದು ನಂಬಿಸಲು ಯತ್ನಿಸುತ್ತಿದ್ದರು ಪಕ್ಕದಲ್ಲೇ ವಾಸವಾಗಿದ್ದ ಧಾರವಾಡ ಮೂಲದ ಸಂಗಣ್ಣ ಎಂಬ ದಂಪತಿಯನ್ನೂ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದರೆನ್ನಲಾಗಿದೆ. ಸನಿಹದಲ್ಲಿಯೇ ವಾಸವಾಗಿದ್ದ ಟೀಚರ್‌ ಚಂದ್ರವತಿ ಎಂಬವರಿಗೂ ಮತಾಂತರಕ್ಕೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಈ ವಿಚಾರಕೆಲ ಹಿಂದೂ ಸಂಘಟನೆಗಳ ಕಿವಿಗೆ ಬಿದ್ದು ಪಾದ್ರಿ ಮನೆ ಮುಂದೆ ಜನ ಸೇರಲಾರಂಭಿಸಿದರು. ವಿಷಯ ತಿಳಿದ ಸುಳ್ಯ ಪೊಲೀಸರು ಧಾವಿಸಿ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಚಂದ್ರಮತಿಯವರ ದೂರಿನನ್ವಯ ಕೇಸು ದಾಖಲಿಸಿಕೊಂಡ ಪಾದ್ರಿ ಹಾಗೂ ಹಿಂದೂ ಕುಟುಂಬಗಳನ್ನು ಪ್ರತ್ಯೇಕ ಪ್ರತ್ಯೇಕ ವಿಚಾರಣೆ ನಡೆಸಿ ಪಾದ್ರಿಯವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಿನ್ನೆ ಕೋರ್ಟಿಗೆ ಹಾಜರು ಪಡಿಸಿದರು. ನ್ಯಾಯಾಲಯ ಪಾದ್ರಿಯವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ

No comments: