VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ವಿದ್ಯಾರ್ಥಿಯ ಅಪಹರಣ: ವೃತ್ತಿಪರ ತಂಡದ ಕೃತ್ಯ

ಉಪ್ಪಿನಂಗಡಿ : ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯನ್ನು ಮಂಗಳೂರು ಮೂಲದ ತಂಡವೊಂದು ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಇಲ್ಲಿಯ ಇಂದ್ರಪ್ರಸ್ಥ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿ ಕೆಮ್ಮಾರ ಬೂಲುಂಬುಡ ನಿವಾಸಿ ಎಂ.ಎ ರಜ್ವಾಕ್-ಜಮೀಲ ದಂಪತಿಗಳ ಪುತ್ರನಾಗಿರುವ ಸಿರಾಜುದ್ಧೀನ್ ಎಂಬ ಬಾಲಕ ಶಾಲೆಗೆ ತೆರಳಿದ್ದ ವೇಳೆಯಲ್ಲಿ ಉಪ್ಪಿನಂಗಡಿ ಬಸ್ಸು ನಿಲ್ದಾಣದಿಂದ ಬಾಲಕನನ್ನು ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಅಪಹರಿಸಿದ್ದಾರೆ ಎಂದು ಅಪಹರಣಕಾರರ ಕೈಯಿಂದ ಪಾರಾಗಿ ಬಂದ ಬಾಲಕ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾನೆ.

ಬಾಲಕ ಸಿರಾಜುದ್ಧೀನ್ ಎಂದಿನಂತೆ ಶಾಲೆಯ ಪಕ್ಕವೇ ಇರುವ ಟ್ಯೂಷನ್ ತರಗತಿಗೆ ಹೋಗಿ ಮತ್ತೆ ಶಾಲೆಗೆ ಹೋಗುವ ಸಮಯದಲ್ಲಿ ಬಸ್ ನಿಲ್ದಾಣದಲ್ಲಿದ್ದ ಬಾಲಕ ನನ್ನು ಶಾಲೆಗೆ ಬಿಡುತ್ತೇವೆಂದು ಕರೆದುಕೊಂಡು ಹೋದ ತಂಡ ರಾಷ್ಟ್ರೀಯ ಹೆದ್ದಾರಿಗೆ ಆಗಿ ಮಂಗಳೂರಿನತ್ತ ತೆರಳಿತು. ವಾಹನ ಕೊಣಾಜೆ ದಾರಿಯಾಗಿ ಹೋಗುತ್ತಿದ್ದಾಗ ಅಪ ಹರಣಕಾರರು ಸಿಗರೇಟಿಗೆಂದು ಗೂಡಂಗಡಿ ಬಳಿ ವಾಹನ ನಿಲ್ಲಿಸಿದಾಗ ಸಿರಾಜುದ್ದೀನ್ ವಾಹನದಿಂದ ಹಾರಿ ಓಡಿಹೋಗಿದ್ದಾನೆ. ಸ್ವಲ್ಪ ಮುಂದೆ ಬಸ್ಸೊಂದು ನಿಂತಿದ್ದು ಉಳ್ಳಾಲ, ಉಳ್ಳಾಲ ಎಂದು ಅದರ ನಿವರ್ಾಹಕ ಕೂಗು ತ್ತಿದ್ದ. ಉಳ್ಳಾಲದಲ್ಲಿ ತನ್ನ ಗೆಳೆಯನೊಬ್ಬ ಇದ್ದ ಕಾರಣದಿಂದ ಧೈರ್ಯದಿಂದ ಬಸ್ಸು ಹತ್ತಿದೆ ಎಂದು ಅಪಹರಣಕ್ಕೊಳಗಾದ ಬಾಲಕ ಸಿರಾಜುದ್ದೀನ್ ತಿಳಿಸಿದ್ದಾನೆ. ಬಸ್ಸಿಳಿದು ಉಳ್ಳಾಲದಲ್ಲಿ ಕಲಿಯುತ್ತಿರುವ ತನ್ನ ಮನೆಯ ಹತ್ತಿರದ ರಹಿಮಾನ್ ಎಂಬಾತನಲ್ಲಿ ಅಪಹರಣದ ಘಟನೆಯನ್ನು ವಿವರಿಸಿದ್ದಾನೆ. ಆನಂತರ ರಹಿಮಾನ್ ಮನೆಯವರು ಸಿರಾಜುದ್ದೀನ್ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ.

ಮನೆಯ ಫೋನ್ ನಂಬರ್ ಕೇಳಿದ ಅಪಹರಣಕಾರರ ತಂಡ

ವಿದ್ಯಾರ್ಥಿಯನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದ ತಂಡ ಬಾಲಕನಲ್ಲಿ ಮನೆಯ ಫೋನ್ ನಂಬರ್ ಕೇಳಿದ್ದು ಬಾಲಕ ತಂದೆಯ ಮೊಬೈಲ್ ನಂಬರ್ ನೀಡದೆ ಸ್ಥಿರ ದೂರವಾಣಿಗೆ ಫೋನ್ ಮಾಡಿ ಎಂದು ನಂಬ್ರ ಕೂಡಾ ಕೊಟ್ಟಿದ್ದೇನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಅಲ್ಲಲ್ಲಿ ವಿದ್ಯಾರ್ಥಿಗಳ ಅಪಹರಣಕ್ಕೆ ಸಂಚು

ಕೆಲವು ತಿಂಗಳುಗಳ ಹಿಂದೆ ನೆಲ್ಯಾಡಿಯ ಶಾಲಾ ವಿದ್ಯಾರ್ಥಿಯೋರ್ವನನ್ನು ಅಪಹರಣಕ್ಕೆ ಯತ್ನಿಸಿದ್ದು ತದ ನಂತರ ರಾಮಕುಂಜದ ವಿದ್ಯಾರ್ಥಿಯ ಅಪಹರಣಕ್ಕೂ ಯತ್ನ ನಡೆದಿದೆ. ಪೊಲೀಸರು ಈ ಎಲ್ಲಾ ಪ್ರಕರಣಗಳನ್ನು ನಿರ್ಲಕ್ಷಿಸಿದ್ದೇ ಮತ್ತೆ ಈ ಕೃತ್ಯ ಪುನರಾವರ್ತನೆಯಾಗಲು ಕಾರಣವಾಗಿದೆ.

No comments: