ಕಳವಾಗಿದ್ದ ವಿಗ್ರಹ ಪತ್ತೆ
ಮಂಜೇಶ್ವರ, ಎ.20: ಏರಿಯಾಲ್ ಕೋರ ವೈಲು ದುರ್ಗಾ ಪರಮೇಶ್ವರಿ ಕ್ಷೇತ್ರದಿಂದ ಒಂದು ವಾರಗಳ ಹಿಂದೆ ಕಳವು ಗೈಯ್ಯಲ್ಪಟ್ಟ ಮೂರು ವಿಗ್ರಹಗಳಲ್ಲಿ ಒಂದು ವಿಗ್ರಹವು ಪ್ಲಾಸ್ಟಿಕ್ ಚೀಲವೊಂದರಲ್ಲಿ ಕಟ್ಟಿ ಉಪೇಕ್ಷಿಸಿದ ರೀತಿಯಲ್ಲಿ ಪತ್ತೆಯಾಗಿದೆ.
ಮಂಗಳವಾರ ಸಂಜೆ 3 ಗಂಟೆ ಸುಮಾರಿಗೆ ಅಡುಕ್ಕತ್ತಬೈಲು ರೈಲ್ವೇ ಹಳಿ ಸಮೀಪದ ಖಾಸಗಿ ವ್ಯಕ್ತಿಯೋರ್ವರ ಹಿತ್ತಲಿನಲ್ಲಿ ದುರ್ಗಾಪರಮೇಶ್ವರಿ ದೇವಿಯ ಪಂಚಲೋಹ ವಿಗ್ರಹ ಪತ್ತೆಯಾಗಿದೆ.
ಕ್ಷೇತ್ರದಿಂದ 20 ಮೀಟರ್ ದೂರವಿರುವ ಈ ಸ್ಥಳದಲ್ಲಿ ಬಾವಿಯ ಕಾಮಗಾರಿಗಾಗಿ ಇಳಿಸಿಟ್ಟ ಕೆಂಪು ಕಲ್ಲಿನ ಎಡೆಯಲ್ಲಿ ಉಪೇಕ್ಷಿಸಲಾಗಿತ್ತು. ವಿಗ್ರಹದ ತಲೆ ಭಾಗವು ಸಣ್ಣ ಮಟ್ಟದ ಬಿರುಕು ಬಿಟ್ಟ ರೀತಿಯಲ್ಲಿದೆ. ವಿಗ್ರಹ ಪತ್ತೆಯಾದ ವಿಷಯ ತಿಳಿದು ಡಿವೈಎಸ್ಪಿ ಪಿ.ಬಿಜೋಯಿ ಡಿವೈಎಸ್ಪಿ ಪಿ.ಬಿಜೋಯಿ, ಎಸ್‌ಐ ಬಾಬು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ
No comments:
Post a Comment