VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 8, 2010

ಬೆ೦ಗಳೂರು: ಮದ್ಯ ತಯಾರಿಕೆಯಲ್ಲಿ ಮಲ್ಯ ಕಂಪೆನಿ ವಿಶ್ವದಲ್ಲೇ ನಂ.2


ಬೆಂಗಳೂರು: 2009-10ನೇ ಸಾಲಿನಲ್ಲಿ 10 ಕೋಟಿ ಕೇಸ್ (ಕೇಸ್ ಅಂದರೆ ಒಂಬತ್ತು ಲೀಟರ್) ಮದ್ಯ ಮಾರಾಟ ಮಾಡಿದ ಹೆಗ್ಗಳಿಕೆ ಕಂಪೆನಿಗೆ ದಕ್ಕಿದೆ. ಮುಂದಿನ ವರ್ಷ ತಮ್ಮ ಕಂಪೆನಿ ಮೊದ ಲ ಸ್ಥಾನಕ್ಕೇರಲಿದೆ ಎಂದು ವಿಜಯ್ ಮಲ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ವಿಜಯ್ ಮಲ್ಯ ಅವರು ತಮ್ಮ ಕಂಪೆನಿಯ ಸಾಧನೆಗಳನ್ನು ಸುದ್ದಿಗಾರ ರಿಗೆ ವಿವರಿಸಿದರು.

ಕಳೆದ ವರ್ಷ ಆರ್ಥಿಕ ಹಿಂಜರಿತದ ನಡುವೆಯೂ ತಮ್ಮ ಕಂಪೆನಿ ಉತ್ತಮ ಸಾಧನೆ ತೋರಿದೆ ಎಂದು ಅವರು ಬೀಗಿದರು.

ಯುಬಿ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೊದಲ ಬಾರಿ 10 ಕೋಟಿ ಕೇಸ್‌ಗಳನ್ನು ಮಾರಾಟ ಮಾಡಲು ತೆಗೆದುಕೊಂಡಿದ್ದು 12 ವರ್ಷಗಳ ಕಾಲ. ಈಗ ಇಷ್ಟೇ ಪ್ರಮಾಣದ ಮದ್ಯ ಮಾರಾಟ ಮಾಡಲು ತಗುಲಿದ್ದು ಕೇವಲ 12 ತಿಂಗಳು ಎಂದು ಅವರು ನುಡಿದರು.

ಕಂಪೆನಿಯ ಬಿಯರ್ ವಿಭಾಗ ಯುನೈಟೆಡ್ ಬ್ರೆವರೀಸ್ ಸಹ ಇದೇ ಅವಧಿಯಲ್ಲಿ 10 ಕೋಟಿ ಕೇಸ್ ಬಿಯರ್ ಮಾರಾಟ ಮಾಡಿದೆ ಎಂದರು.

ಹಾಲು, ಚಹಾಪುಡಿಗಿಂತಲೂ ವೇಗದಲ್ಲಿ ಮಾರಾಟ: ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಿಭಾಗದಲ್ಲಿ ತಮ್ಮ ಮದ್ಯವು ಅಮೂಲ್ ಹಾಲಿಗಿಂತ ಹಾಗೂ ಟಾಟಾ ಟೀಗಿಂತ ವೇಗದಲ್ಲಿ ಮಾರಾಟವಾಗುತ್ತಿದೆ ಎನ್ನುವ ಕುತೂಹಲದ ಸಂಗತಿಗಳ ನ್ನು ತಿಳಿಸಿದರು.

ವೈನ್‌ನತ್ತ ಯುವತಿಯರ ಆಕರ್ಷಣೆ: ‘ನಮ್ಮ ಕಂಪೆನಿ ವಿಸ್ಕಿ, ವೋಡ್ಕಾ, ರಮ್, ಜಿನ್ ಹಾಗೂ ಬಿಯರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ವೈನ್ ತಯಾರಿಕೆಯತ್ತ ಅಷ್ಟಾಗಿ ಗಮನ ನೀಡಿರಲಿಲ್ಲ. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಮದ್ಯ ಸೇವಿಸುವುದನ್ನು ಸಹಜ ಪ್ರಕ್ರಿ ಯೆ ಎನ್ನುವಂತೆ ಸಮಾಜ ಸ್ವೀಕರಿಸುತ್ತಿದೆ. ಅದರಲ್ಲೂ ಈಗ ಯುವತಿಯರು ಯಾವುದೇ ಹಿಂಜರಿ ಕೆಯಿಲ್ಲದೇ ಮದ್ಯ ಸೇವಿಸುತ್ತಿದ್ದಾರೆ. ಹೆಚ್ಚಾಗಿ ಅವರು ವೈನ್ ಅನ್ನು ಇಷ್ಟಪಡುತ್ತಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದ್ದೇ ತಡ ವೈನ್ ತಯಾರಿಕೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದೇವೆ’ ಎಂದರು.

ಸರ್ಕಾರಗಳ ವಿರುದ್ಧ ಹರಿಹಾಯ್ದ ಮಲ್ಯ: ‘ಸರ್ಕಾರಗಳು ಮದ್ಯ ತಯಾರಕರ ಮೇಲೆ ಏಕೆ ವಕ್ರದೃಷ್ಟಿ ಬೀರುತ್ತವೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ. ರಾಜ್ಯಗಳು ಮದ್ಯ ನಿಷೇಧಿಸುವು ದರಿಂದ ಮದ್ಯದ ಮಾರಾಟ ನಿಲ್ಲುವುದಿಲ್ಲ. ಅಕ್ರಮವಾಗಿಯಾದರೂ ಇದು ನಡೆಯುತ್ತಿರುತ್ತದೆ. ಇದನ್ನು ನೀವು ಒಪ್ಪಿಕೊಳ್ಳಿ ಅಥವಾ ಬಿಡಿ’. (ಅವರು ಗುಜರಾತ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು)

‘ಇದರಿಂದ ಯಾರಿಗೂ ಲಾಭವಾಗದು. ಸರ್ಕಾರವು ಅಬಕಾರಿ ಹಾಗೂ ಇತರೆ ತೆರಿಗೆಗಳಿಂದ ವಂಚಿತವಾಗುತ್ತದೆ. ಇದರ ಬದಲು ಕಂಪೆನಿಗಳಿಗೆ ಮದ್ಯ ತಯಾರಿಸಲು ಅನುಮತಿ ನೀಡಿ, ಅದರಿಂದ ಸಂಗ್ರಹಿಸುವ ತೆರಿಗೆಯನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಬಳಸಲಿ’ ಎಂದರು.

ಮಲ್ಯ ಪುತ್ರನ ಮೂಲ ವೇತನ ರೂ 48 ಸಾವಿರ

ಮುಂಬೈ (ಪಿಟಿಐ): ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ ಮಲ್ಯ ಅವರು ಉದ್ಯೋಗಿಯಾಗಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪೆನಿಗೆ ಸೇರಿಕೊಂಡಿದ್ದಾರೆ. ಅವರ ಮೂಲ ವೇತನ ಎಷ್ಟು ಗೊತ್ತೇ? ತಿಂಗಳಿಗೆ ಮೂಲ ವೇತನ ರೂ 48,150. ಇತರ ಎಲ್ಲ ಭತ್ಯೆ ಗಳು ಸೇರಿದರೆ ಅವರ ಒಟ್ಟು ಸಂಬಳ ರೂ 1.67 ಲಕ್ಷ ಆಗಬಹುದು.

23 ವರ್ಷದ ಸಿದ್ದಾರ್ಥ ಅವರು ಉಪ-ಪ್ರಧಾನ ವ್ಯವಸ್ಥಾಪಕರಾಗಿ ಜೂನ್ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಂಪೆನಿಯು ಮುಂಬೈ ಷೇರು ಪೇಟೆ ವಿನಿಯಮ ಕೇಂದ್ರಕ್ಕೆ ತಿಳಿಸಿದೆ.

No comments: