
ಬೀಜಿಂಗ್: ಉಭಯ ರಾಷ್ಟ್ರಗಳ ಪ್ರಧಾನಿಗಳ ನಡುವಿನ ಹಾಟ್‌ಲೈನ್(ಫೋನ್‌ಲೈನ್) ಸ್ಥಾಪಿಸುವ ಒಪ್ಪಂದಕ್ಕೆ ಚೀನಾ ಮತ್ತು ಭಾರತ ಬುಧವಾರ ಅಂಕಿತ ಹಾಕಿವೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವೃದ್ಧಿಯ ಹಿನ್ನೆಲೆಯಲ್ಲಿ ಈ ಹಾಟ್‌ಲೈನ್ ಸ್ಥಾಪನೆಗೆ ಚೀನಾ ಪ್ರವಾಸದಲ್ಲಿರುವ ಭಾರತ ದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಚೀನಾ ವಿದೇಶಾಂಗ ಸಚಿವ ಯಾಂಗ್ ಜಿಯಾಚಿ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಪ್ರಕಾರ ಚೀನಾ ಮತ್ತು ಭಾರತದ ಪ್ರಧಾನಿಗಳ ಕಾರ್ಯಾಲಯಗಳು ಇನ್ನು ನೇರವಾಗಿ ಫೋನ್ ಸಂಪರ್ಕಕ್ಕೆ ಒದಗಲಿವೆ.
ಭಾರತದ ಪ್ರಧಾನಿ ಸಿಂಗ್ ಮತ್ತು ಚೀನಾದ ಪ್ರಧಾನಿ ವೆನ್ ಜಿಯಾಬೋ ಅವರು ತಮಗೆ ಬೇಕೆನಿ ಸಿದಾಗ ಪರಸ್ಪರ ಮಾತನಾಡಿಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ರಾಷ್ಟ್ರಗಳೊಂದಿಗೆ ಇಂಥ ಹಾಟ್‌ಲೈನ್ ಸ್ಥಾಪನೆಗೆ ಭಾರತ ಮುಂದಾಗಿರುವುದು ಇದೇ ಮೊದಲನೆ ಬಾರಿಯಾಗಿದೆ. ಚೀನಾ ವಿದೇಶಾಂಗ ಸಚಿವ ಯಾಂಗ್ ಜಿಯಾಚಿ ಅವರ ಜತೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಎಸ್.ಎಂ.ಕೃಷ್ಣ, `ಉಭಯ ರಾಷ್ಟ್ರಗಳ ನಡುವಿನ ಹಾಟ್‌ಲೈನ್ ಸ್ಥಾಪನೆ ಎರಡೂ ರಾಷ್ಟ್ರಗಳ ನಿಕಟವರ್ತಿಗೆ ಸಾಕ್ಷಿಯಾಗಿದೆ' ಎಂದು ಹೇಳಿದರು.
ಹಿಂದಿ ಚೀನಿ ಭಾಯಿ ಭಾಯಿ- ಮಾಧ್ಯಮಗಳು: ಹಿಂದಿನ ಕಹಿ ಘಟನೆಗಳನ್ನು ಮರೆತು ಭಾರತ ಮತ್ತು ಚೀನಾ ಈ ವಿಶ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಮುಂದಾಗಬೇಕು ಎಂದು ಚೀನಾದ ಬಹುತೇಕ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಚೀನಾ ಡೇಲಿ ತನ್ನ ಇಂಗ್ಲಿಷ್ ಆವೃತ್ತಿ ಯ ಸಂಪಾದಕೀಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, `ವಿಶ್ವ ಬೆಳೆಯುತ್ತಿರುವಂತೆ ಭಾರತ ಮತ್ತು ಚೀನಾಗಳು ಪ್ರಮುಖ ಪಾತ್ರ ನಿರ್ವಹಿಸಬೇಕು' ಎಂದು ಹೇಳಿದೆ.
ಕಳ್ಳತನ ಆಪಾದನೆ ಹೊತ್ತಿರುವ ಭಾರತೀಯರ ಭೇಟಿಯಾದ ಕೃಷ್ಣ: ವಜ್ರ ಕಳ್ಳ ಸಾಗಣೆ ಆರೋಪ ಹೊತ್ತಿರುವ ಭಾರತೀಯ ಮೂಲದ ೨೧ ಜನರ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಕೃಷ್ಣ, ಈ ವಿಷಯವನ್ನು ಚೀನಾ ಜತೆಗಿನ ಮಾತುಕತೆ ವೇಳೆ ಪ್ರಸ್ತಾಪಿಸುವುದಾಗಿ ಭರವ ಸೆ ನೀಡಿದ್ದಾರೆ. ಚೀನಾದ ಉನ್ನತ ನಾಯಕತ್ವ ಜತೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಯತ್ನ ಮಾಡುವೆ ಎಂದು ಅವರು ತಿಳಿಸಿದ್ದಾರೆ.
No comments:
Post a Comment