ಹೊಸಬೆಟ್ಟು: ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಂಜೇಶ್ವರ, ಎ.20: ಬೆಲೆಯೇರಿಕೆ ಹಾಗೂ ರಾಜ್ಯ ಎಡರಂಗ ಸರಕಾರದ ದುರಾಡಳಿತದ ವಿರುದ್ಧ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಿತಿ ಆಶ್ರಯದಲ್ಲಿ ಹೊಸಬೆಟ್ಟು ಗ್ರಾಮ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಲಾಯಿತು.
ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಬಾಲಕಷ್ಣ ಮಾಸ್ಟರ್ ಓರ್ಕೊಡ್ಲು ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಪಿ.ಸೋಮಪ್ಪ, ಐ.ಆರ್. ಡಿ.ಪಿ ಇಬ್ರಾಹೀಂ,ಎಂ.ಜೆ ಕಿಣಿ, ಗುರುವಪ್ಪ ಮಂಜೇಶ್ವರ, ಹಮೀದ್ ಹೊಸಂಗಡಿ, ಮುಹಮ್ಮದ್ ಮಜಾಲ್, ಅಬ್ದುಲ್ಲಾ, ಗಂಗಾಧರ್ ವಿ.ಪ್ರಭಾಕರ್ ನಾಯ್ಕಾ ಮಾತನಾಡಿ ರಾಜ್ಯ ಸರಕಾರದ ಕಾರ್ಯ ವೈಖರಿಯನ್ನು ಟೀಕಿಸಿದರು. ಹರ್ಷಾದ್ ವರ್ಕಾಡಿ, ಸತ್ಯನ್ ಸಿ., ಉಮರ್ ಬೋರ್ಕಳ, ಎ.ಪ್ರಕಾಶ್ ನಾಯ್ಕ, ಎ.ಶಶಿಧರ್, ನಾಗೇಶ್ ಮಂಜೆಶ್ವರ, ಫ್ರಾನ್ಸಿಸ್ ಡಿಸೋಜ, ಇಕ್ಬಾಲ್ ಬಿಳಿಯಾರ್, ಶಾಫಿ, ಮೂಸ ಜಿ. ಮತ್ತಿತರರು ಭಾಗವಹಿಸಿದ್ದರು
No comments:
Post a Comment