
ರಾಯ್ ಪುರ್, ಏ. 6 : ಛತ್ತೀಸ್ ಗಢ್ ದ ದಂತೇವಾಡ ಜಿಲ್ಲೆಯ ಮುಕ್ರಾನಾ ದಟ್ಟಾರಣ್ಯದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಭೀಕರ ನರಮೇಧ ನಡೆಸಿದ್ದು ಸುಮಾರು 73 ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಇದೊಂದು ಅತ್ಯಂತ ಹೇಯ ಕೆಲಸ ಎಂದು ಛತ್ತೀಸ್ ಗಢ ಪೊಲೀಸ್ ಮಹಾನಿರ್ದೇಶಕ ಆರ್ ಕೆ ಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಕಾಲಕ್ಕೆ ಸಾವಿರಾರು ಸಂಖ್ಯೆ ಶಸ್ತ್ರಸಜ್ಜಿತ ಮಾವೋವಾದಿಗಳು ನಡೆಸಿದ ಭೀಕರ ನರಮೇಧಕ್ಕೆ ಕಮಾಂಡೆಂಟ್, ಸಹಾಯಕ ಕಮಾಂಡೆಂಟ್ ಸೇರಿ 72ಸಿಆರ್ ಪಿಎಫ್ ಹಾಗೂ ಒಬ್ಬ ಜಿಲ್ಲಾ ಪೊಲೀಸ್ ಸಾವನ್ನಪ್ಪಿದ್ದಾರೆ ಸಿಆರ್ ಪಿಎಫ್ ನಿರ್ದೇಶಕ ವಿಕ್ರಂ ಶ್ರೀವಾಸ್ತವ ತಿಳಿಸಿದ್ದಾರೆ.
80 ಮಂದಿ ಸಿಆರ್ ಪಿಎಫ್ ಪಡೆಯ ಮೇಲೆ ದಾಳಿ ನಡೆದಿದ್ದು, ಸಾವನ್ನಪ್ಪಿರುವ ಎಲ್ಲ ಯೋಧರು ಕಳೇಬರವನ್ನು ಹೊರಕ್ಕೆ ತೆಗೆಯಲಾಗಿದೆ. ಗಾಯಗೊಂಡ 8 ಮಂದಿ ಸಿಆರ್ ಪಿಎಫ್ ಯೋಧರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾವೋವಾದಿಗಳ ಹಾವಳಿ ಕಡಿವಾಣ ಹಾಕುವ ಸಲುವಾಗಿ ಸಿಆರ್ ಪಿಎಫ್ ಪಡೆಯನ್ನು ಮುಕ್ರಾನಾ ದಟ್ಟಾರಣ್ಯದಲ್ಲಿ ನಿಯೋಜಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಪಿ ಚಿದಂಬರಂ, ಇದು ಅತ್ಯಂತ ಕರಾಳ ದಿನ. ಮಾವೋವಾದಿಗಳು ಇಡುತ್ತಿರುವ ಹೆಜ್ಜೆ ಖಂಡನಾರ್ಹವಾಗಿದೆ. 73 ಮಂದಿ ಯೋಧರ ಸಾವು ನನ್ನನ್ನು ಅಧೀರಗೊಳಿಸಿದೆ. ಮಾವೋವಾದಿಗಳ ಕೃತ್ಯ ದುರದೃಷ್ಟಕರ ಅವರು ಸಿಡಿಮಿಡಿಗೊಂಡರು.
ನಕ್ಸಲರು ದೇಶದ ಶತ್ರುಗಳು: ಚಿದಂಬರಂ

ಚೆನ್ನೈ, ಏ.6: ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು ಬುಡಸಮೇತ ಕಿತ್ತುಹಾಕುವುದಾಗಿ ಘೋಷಿಸಿದ್ದಾರೆ.
ನಕ್ಸಲ್ ಎಂಬುದು ದೇಶಕ್ಕೆ ಅಂಟಿರುವ ಮೊದಲ ಶತ್ರುವಾಗಿದೆ, ಕಳೆದ 12 ವರ್ಷಗಳಲ್ಲಿ ಇದನ್ನು ಮಟ್ಟಹಾಕುವಲ್ಲಿ ಸೂಕ್ತ ಕ್ರಮ ಕೈಗೊಂಡಿರಲಿಲ್ಲ ,ಹೀಗಾಗಿ ದೇಶದ ಪಾಲಿಗೆ ನಕ್ಸಲ್ ಸಮಸ್ಯೆ ದೊಡ್ಡ ಶಾಪವಾಗಿ ಪರಿಣಮಿಸಿದೆ ಎಂದು ದೂರಿದರು. ದೇಶದ ರಕ್ಷಣಾ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನಿಗದಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ಚಿದು, ಪಾಕಿಸ್ತಾನ ಹಾಗೂ ಚೀನಾ ಭಾರತವನ್ನು ಶತ್ರುರಾಷ್ಟ್ರವನ್ನಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದರು.
ಪಾಕ್ ಮೊದಲಿನಿಂದಲೂ ಭಯೋತ್ಪಾದಕರಿಗೆ ತರಬೇತಿ ನೀಡಿ, ನಂತರ ಅವರನ್ನು ಭಾರತಕ್ಕೆ ಕಳುಹಿಸುತ್ತಿದೆ, ಹೀಗೆ ಬಂದ ಭಯೋತ್ಪಾದಕರು ದೇಶದಲ್ಲಿನ ಹಿಂದೂ ಹಾಗೂ ಮುಸಲ್ಮಾನರ ಸಂಬಂಧ ಹಾಳು ಮಾಡುತ್ತಿದೆ ಎಂದು ದೂರಿದರು. ಪಾಕಿಸ್ತಾನ ಭಯೋತ್ಪಾದನೆಯನ್ನು ಕೈಬಿಟ್ಟು,
ಮಾತುಕತೆಗೆ ಮುಂದಾದಲ್ಲಿ ಭಾರತ ನೆರೆ ರಾಷ್ಟ್ರದ ಜತೆ ಸೌಹಾರ್ದ ಸಂಬಂಧ ಮುಂದುವರಿಸಲು ತಯಾರಿದೆ ಎಂದು ಸ್ಪಷ್ಟಪಡಿಸಿದರು.
No comments:
Post a Comment