ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 160 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈಯಿಂದ ಮಂಗಳೂರಿಗೆ ಇಂದು ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಆದರೆ ವಿಮಾನ ದುರಂತದಲ್ಲಿ ಬದುಕುಳಿದವರ ಪ್ರಕಾರ, ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಟೈರ್‌ಗಳು ಸ್ಫೋಟಗೊಂಡ ಶಬ್ದ ಕೇಳಿ ಬಂದಿತ್ತು ಎಂದು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ 6 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಗೃಹ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, ವಿಮಾನ ದುಂರತದಲ್ಲಿ 160 ಮಂದಿ ಸಾವನ್ನಪ್ಪಿದ್ದು, ವಿಮಾನ ನಿಲ್ದಾಣದಿಂದ 10 ಕಿ.ಮಿ. ದೂರದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ವಿಮಾನ ಅಪಘಾತ ಸಂಭವಿಸಿದ ಸ್ಥಳದಲ್ಲಿ ಸಮರೋಪಾದಿಯಲ್ಲಿ ತುರ್ತು ಸೇವೆಗಳನ್ನು ಆರಂಭಿಸಲಾಗಿದ್ದು, ವೈದ್ಯರ ತಂಡ ರವಾನಿಸಲಾಗಿದೆ.ಕನಿಷ್ಠ 25 ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿಮಾನ ಅಪಘಾತದಲ್ಲಿ 160 ಮಂದಿ ಪ್ರಯಾಣಿಕರು ಮೃತರಾಗಿದ್ದು, ವಿಮಾನ ದುರಂತದಿಂದ ಆಘಾತವಾಗಿದೆ ಮೃತರಾದ ಕುಟುಂಬಗಳಿಗೆ ಶೋಕ ವ್ಯಕ್ತಪಡಿಸಲು ಮಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 0824 - 2220422,011-25656196 ದೂರವಾಣಿ ಕರೆಗಳನ್ನು ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment