VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

2010: ನೂರು ವರ್ಷಗಳಲ್ಲೇ ಅತ್ಯಂತ ಗರಿಷ್ಠ ತಾಪಮಾನ

ಹೊಸದಿಲ್ಲಿ,ಮೇ 19: ಕಳೆದ 100 ವರ್ಷಗಳಲ್ಲಿಯೇ ಈ ಬೇಸಿಗೆಯಲ್ಲಿ ಉತ್ತರ ಭಾರತದ ತಾಪಮಾನವು ಅತ್ಯಂತ ಗರಿಷ್ಠವಾಗಿದೆಯೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
2010ನೆ ಇಸವಿಯ ಮೊದಲ ನಾಲ್ಕು ತಿಂಗಳುಗಳಲ್ಲಿ ತಾಪಮಾನವು ಅತ್ಯಧಿಕವಾಗಿ ತ್ತೆಂದು ದಾಖಲೆಗಳಿಂದ ತಿಳಿದುಬಂದಿದೆ.

ಕಳೆದ ನೂರು ವರ್ಷಗಳಲ್ಲಿ ಉತ್ತರ ಭಾರತವು ಇಷ್ಟೊಂದು ತೀವ್ರತೆಯ ಬೇಸಿಗೆಯ ಝಳವನ್ನು ಕಂಡಿರಲಿಲ್ಲವೆಂದು ವಾತಾವರಣದ ಅಧ್ಯಯನ ಮಾಡುವ ಅಮೆರಿಕನ್ ಸಂಸ್ಥೆಯಾದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಎನ್‌ಓಎಎ) ತಿಳಿಸಿದೆ.

ರಾಜಧಾನಿ ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಬೇಸಿಗೆಯ ಬೇಗೆ ಹೀಗೆಯೇ ಮುಂದುವರಿದಲ್ಲಿ 2010 ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನದ ವರ್ಷವೆಂಬ ದಾಖಲೆ ಸೃಷ್ಟಿಯಾಗಲಿದೆ.
ಈ ವರ್ಷದ ಜನವರಿ-ಎಪ್ರಿಲ್ ಮಧ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸರಾಸರಿ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇದು 1980ರಿಂದೀಚೆಗೆ ದಾಖಲಾದ ಸರಾಸರಿ ತಾಪಮಾನಕ್ಕಿಂತ 0.69 ಡಿಗ್ರಿ ಅಧಿಕವಾಗಿದೆ.

ಈ ವರ್ಷದಲ್ಲಿ ಕೆನಡಾ, ಉತ್ತರ ಆಫ್ರಿಕ ಹಾಗೂ ದಕ್ಷಿಣ ಏಶ್ಯದ ಪ್ರದೇಶಗಳಲ್ಲಿ ಜಗತ್ತಿನ ಇತರ ಭಾಗಗಳಿಗಿಂತ ಅಧಿಕ ತಾಪಮಾನ ದಾಖಲಾಗಿದೆ.ಹರ್ಯಾಣದ ಕೆಲವು ಸ್ಥಳಗಳಲ್ಲಿ ಈ ರವಿವಾರದಂದು 47 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖ ಲಾಗಿದ್ದು, ಇದು ಅತ್ಯಂತ ಗರಿಷ್ಠವಾದು ದಾಗಿದೆ.ಉಷ್ಣ ಮಾರುತವು ಹವಾಮಾನ ಬದಲಾವಣೆಯ ಸ್ಪಷ್ಟ ಸೂಚನೆ ಯಾಗಿದೆ ಯೆಂದು ಎನ್‌ಓಎಎ ತನ್ನ ವರದಿಯಲ್ಲಿ ಹೇಳಿದೆ.

ಭೂಮಿಯ ಮೇಲ್ಮೈ ಬಿಸಿಯೇರುತ್ತಿರುವ ಪರಿಣಾಮವಾಗಿ ಜಗತ್ತಿನಲ್ಲಿ ಶೀಥಲ ವಾತಾವರಣಕ್ಕೆ ಕಾರಣವಾದ ಅರ್ಕಿಟಿಕ್ ಸಮುದ್ರದಲ್ಲಿರುವ ಮಂಜುಗಡ್ಡೆ ವೇಗವಾಗಿ ಕರಗುತ್ತಿದೆ ಎಂದು ಎನ್‌ಓಎಎ ವರದಿಯು ಹೇಳಿದೆ.

No comments: