VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಅಫ್ಝಲ್ ಕಡತ ಮತ್ತೆ ರಾಜ್ಯಪಾಲರ ಕಚೇರಿಗೆ

ಹೊಸದಿಲ್ಲಿ, ಮೇ 19: ಸಂಸತ್ತಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ದೋಷಿಯಾಗಿರುವ ಅಫ್ಝಲ್ ಗುರುವಿನ ಕ್ಷಮಾದಾನ ಮನವಿಯನ್ನು ಬುಧವಾರ ದಿಲ್ಲಿ ಸರಕಾರವು ‘ಕೆಲವು ಸಣ್ಣಪುಟ್ಟ ಸ್ಪಷ್ಟನೆ’ಯನ್ನು ನೀಡಿದ ನಂತರ ರಾಜ್ಯಪಾಲರ ಕಚೇರಿಗೆ ಮತ್ತೊಮ್ಮೆ ಕಳುಹಿಸಿದೆ.

ಅಫ್ಝಲ್ ಗುರುವಿಗೆ ಮರಣ ದಂಡನೆಯನ್ನು ನೀಡುವ ಕುರಿತು ದಿಲ್ಲಿ ಸರಕಾರ ಕಳುಹಿಸಿದ್ದ ದಾಖಲೆಯನ್ನು ಕೆಲವು ಸ್ಪಷ್ಟನೆಯನ್ನು ಕೋರಿ ಲೆಫ್ಟಿನೆಂಟ್ ಜನರಲ್ ತೆಜಿಂದರ್ ಖನ್ನಾ ಹಿಂದಕ್ಕೆ ಕಳುಹಿಸಿದ್ದು, ಮರಣ ದಂಡನೆಯನ್ನು ಕಾರ್ಯರೂಪಕ್ಕೆ ತರುವಾಗ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಪುನಃಪರಿಶೀಲಿಸುವಂತೆ ಸೂಚಿಸಿದೆ.

‘‘ಕೆಲವು ಸಣ್ಣಪುಟ್ಟ ಸ್ಪಷ್ಟನೆ ನೀಡಿ ದಾಖಲೆಯನ್ನು ನಾವು ಹಿಂದಕ್ಕೆ ಕಳುಹಿಸಿದ್ದೇವೆ. ಅವರು(ಲೆಫ್ಟಿನೆಂಟ್ ಜನರಲ್) ಕಚೇರಿ ನಮ್ಮಿಂದ ಕೆಲವು ಸ್ಪಷ್ಟನೆಯನ್ನು ಬಯಸಿದ್ದು, ಅದಕ್ಕೆ ನಾವು ಸ್ಪಂದಿಸಿದ್ದೇವೆ’’ ಎಂದು ದಿಲ್ಲಿ ಸರಕಾರದ ಉನ್ನತ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ.

‘‘ಸಂವಿಧಾನದ 72ನೆ ಅನುಚ್ಛೇದದ ಪ್ರಕಾರ, ಕ್ಷಮಾದಾನ ಪತ್ರದ ಮೇಲೆ ನಾವು (ರಾಜ್ಯಸರಕಾರ) ಕಟ್ಟಾಜ್ಞೆಯನ್ನು ನೀಡುವಂತಿಲ್ಲ. ಅದರಲ್ಲೂ ದಿಲ್ಲಿ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರ ಕೂಡ ಹೊಂದಿಲ್ಲ’’ ಎಂದು ತಿಳಿಸಿದೆ.

ನಗರ ಸರಕಾರವು ಕೇಂದ್ರ ಗೃಹ ಸಚಿವಾಲಯದ ಜೊತೆ ಪ್ರತ್ಯೇಕ ಸಂವಹನದಲ್ಲಿ, ದಾಖಲೆಯು ‘ತೀವ್ರ ಪರಿಶೀಲನೆ’ಯಲ್ಲಿದೆ ಎಂದು ಈ ಮೊದಲೆ ತಿಳಿಸಿದೆ ಎಂದು ಹೇಳಿದೆ. ಇದು ಕೇಂದ್ರ ಸರಕಾರದ 16ನೆ ಜ್ಞಾಪಕ ಪತ್ರಕ್ಕೆ ಪ್ರತಿಕ್ರಿಯೆಯಾಗಿದೆ.

ಲೆಫ್ಟಿನೆಂಟ್ ಜನರಲ್ ಕಚೇರಿಯು ಮಂಗಳವಾರ ದಾಖಲೆಯನ್ನು ದಿಲ್ಲಿ ಸರಕಾರಕ್ಕೆ ಹಿಂದಕ್ಕೆ ಕಳುಹಿಸಿದ್ದು, ವಿಷಯವು ಸ್ಪಷ್ಟವಾಗಿಲ್ಲದ್ದರಿಂದ ಸ್ಪಷ್ಟೀಕ ರಣವನ್ನು ನೀಡುವಂತೆ ಸೂಚಿಸಿತು. ಇದು ಸೂಕ್ಷ್ಮ ವಿಷಯವಾಗಿರುವು ದರಿಂದ ದಿಲ್ಲಿ ಸರಕಾರ ಮತ್ತು ಲೆಫ್ಟಿನೆಂಟ್ ಜನರಲ್ ಕಚೇರಿಯು ಸ್ಪಷ್ಟೀಕರಣದ ಸ್ವರೂಪವನ್ನು ಹೊರಗೆಡಹಲು ನಿರಾಕರಿಸಿದೆ.

ಕೇಂದ್ರ ಗೃಹ ಸಚಿವಾಲಯವು ವಿಷಯದ ಕುರಿತು ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿ ನೀಡಿರುವ 16ನೆ ಜ್ಞಾಪಕ ಪತ್ರದ ನಂತರ ನಗರ ಸರಕಾರವು ದಾಖಲೆಯನ್ನು ಲೆ. ಜನರಲ್‌ಗೆ ಸೋಮವಾರ ಕಳುಹಿಸಿದೆ.

No comments: