ಮಂಗಳೂರು, ಮೇ ೧೪: ಪಾಸ್‌ಪೋರ್ಟ್ ವಿತರಣಾ ವ್ಯವಸ್ಥೆಯ ಕಾರ್ಯ ಕ್ಷಮತೆ ಹೆಚ್ಚಳಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯ ನೂತನ ಉಪಕ್ರಮಗಳನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೇ ೨೦ ರಿಂದ ಹೊಸ ನಮೂನೆಯ ಪಾಸ್ ಪೋರ್ಟ್ ಅರ್ಜಿಯಲ್ಲಿ ಭರ್ತಿ ಮಾಡ ಬೇಕಾಗುತ್ತದೆ. ಈ ಅರ್ಜಿ ನಮೂನೆಗಳು (೧೦ ರೂ.) ಪಾಸ್‌ಪೋರ್ಟ್ ಕಚೇರಿ, ಪಾಸ್‌ಪೋರ್ಟ್ ಸೇವಾಕೇಂದ್ರ, ಡಿ.ಪಿ.ಸಿ., ಎಸ್.ಪಿ.ಸಿ. ಮತ್ತು ಬೆಂಗಳೂರು ವನ್ ಕೇಂದ್ರಗಳಲ್ಲಿ ದೊರೆಯುವುವು.
ಅಂಚೆ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಸೂಚಿತ ಕೇಂದ್ರಗಳನ್ನೇ ಸಂಪರ್ಕಿಸ ಬೇಕಾಗುತ್ತದೆ.
-ಮಂಗಳೂರು ಸೇವಾ ಕೇಂದ್ರ ಸ್ಥಳಾಂತರ: ಮಂಗಳೂರಿನಲ್ಲಿ ಈಗ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಾಸ್‌ಪೋರ್ಟ್ ಸೇವಾಕೇಂದ್ರ ಶೀಘ್ರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ವಿಳಾಸ: ಪಾಸ್‌ಪೋರ್ಟ್ ಸೇವಾಕೇಂದ್ರ, ಸಂಖ್ಯೆ ೨೫/೧ಎ, ಪ್ರಕಾಶ್‌ಬೀಡಿ ಕಂಪೌಂಡ್, ಕೊಡಿಯಾಲಬೈಲ್, ಮಂಗಳೂರು-೩. ಪರಿಸರದ ಜಿಲ್ಲೆಗಳ ಜನತೆ ಇಲ್ಲಿಂದಲೇ ಕ್ಷಿಪ್ರವಾಗಿ ಪಾಸ್‌ಪೋರ್ಟ್ ಸಂಬಂಧಿತ ಸೇವೆಯನ್ನು ಪಡೆಯಬಹುದಾಗಿದೆ.
ಗುಲ್ಬರ್ಗಾದಲ್ಲಿ: ಶೀಘ್ರ ಗುಲ್ಬರ್ಗ ದಲ್ಲಿ ಕೂಡಾ ಕಿರು ಸ್ವರೂಪದ (ಮಿನಿ) ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾಗಲಿದೆ.
ಪಾಸ್‌ಪೋರ್ಟ್ ಸೇವಾಕೇಂದ್ರಗಳ ವಿವರ www.passportindia.gov.in ಮತ್ತು ಶುಲ್ಕರಹಿತ ದೂರ ವಾಣಿ: 1800 - 258 - 1800.
Subscribe to:
Post Comments (Atom)
No comments:
Post a Comment