VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 15, 2010

ಮ೦ಗಳೂರು: ಭವಿಷ್ಯದ ಎಂಜಿನಿಯರ್‌ಗಳ ಕೇಂದ್ರ ಅನಿವಾಸಿ ಉದ್ಯಮಿ ಡಾ.ಪಿ.ಎ. ಇಬ್ರಾಹೀಂರಿಂದ ಸ್ಥಾಪಿಸಲ್ಪಟ್ಟ ಪಿ.ಎ. ಕಾಲೇಜು


ಮಂಗಳೂರು, ಮೇ 14: ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ದ.ಕ. ಜಿಲ್ಲೆಯ ಪ್ರಸಿದ್ಧ ಪಿ.ಎ.ಎಂಜಿನಿಯರಿಂಗ್ ಕಾಲೇಜು ಅನಿವಾಸಿ ಉದ್ಯಮಿ ಡಾ.ಪಿ.ಎ. ಇಬ್ರಾಹೀಂರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ.
ವೌಲ್ಯಗಳಿಗೆ ಬದ್ಧವಾಗಿರುವುದರೊಂದಿಗೆ ನಿರ್ದಿಷ್ಟ ಗುರಿಯನ್ನು ಹೊಂದಲು, ತಜ್ಞ ಶಿಕ್ಷಕರ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪಿ.ಎ.ಎಂಜಿನಿಯರಿಂಗ್ ಕಾಲೇಜು ಪ್ರಯತ್ನಿಸುತ್ತಿದೆ.
ವಿಶ್ವ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸ ಎಂಜಿನಿಯರನ್ನು ಈ ಸಂಸ್ಥೆ ಸಷ್ಟಿಸುತ್ತಿದೆ. ಪಿ.ಎ. ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನ ಸಮೀಪ ವಿರುವ ಐಟಿ-ವಿಶೇಷ ಆರ್ಥಿಕ ವಲಯದಲ್ಲಿ ಐಟಿ ದಿಗ್ಗಜ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್‌ಗಳು ತಮ್ಮ ‘ಸಂಶೋಧನೆ ಮತ್ತು ಅಭಿವದ್ಧಿ’ (ಆರ್‌ಡಿ) ಘಟಕವನ್ನು ಶೀಘ್ರದಲ್ಲಿ ಸ್ಥಾಪಿಸಲಿವೆ.
ಇನ್ಫೋಸಿಸ್‌ನ ಅಭಿವದ್ಧಿ ಘಟಕವಾದ ಎನ್‌ಇಟಿಎಚ್‌ಆರ್‌ಎ (ಘೆಉಏ್ಕಅ)ದ ಪ್ರಥಮ ಬ್ಯಾಚ್‌ ನ ಉದ್ಯೋಗಿಗಳು ಈಗಾಗಲೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಶೋಧನಾ ಶಿಕ್ಷಣ ಮತ್ತು ನಿರ್ವ ಹಣೆ ಹಾಗೂ ಉತ್ಕೃಷ್ಟ ತಾಂತ್ರಿಕತೆಯ ವಿಕಸನ ಕೇಂದ್ರ ವೊಂದನ್ನು ಪಿ.ಎ. ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ. ತಾಂತ್ರಿಕ ಮತ್ತು ಎಂಜಿನಿಯ ರಿಂಗ್ ಶಿಕ್ಷಣವನ್ನು ಹಳ್ಳಿಗಳಿಗೆ ಮತ್ತು ನಗರಗಳಿಗೆ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಆ ಮೂಲಕ ಮಾನವ ಸಂಪನ್ಮೂಲದ ವಿಸ್ತರಣೆಯ ಅಭಿಲಾಷೆಯನ್ನೂ ಹೊಂದಿದೆ.
ನೈತಿಕ ವೌಲ್ಯಗಳೊಂದಿಗೆ ಸ್ಪರ್ಧಾತ್ಮಕ ತಾಂತ್ರಿಕತೆಯುಳ್ಳ ಎಂಜಿನಿಯರ್ ರನ್ನು ಸಷ್ಟಿಸುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಕ್ಯಾಂಪಸ್ ಅದಕ್ಕೆ ಪೂರಕವಾದ ಕಲಿಕಾ ವಾತಾವರಣ ಹೊಂದಿದೆ.
ಪಿ.ಎ. ಎಂಜಿನಿಯರಿಂಗ್ ಕಾಲೇಜು ಹೊಸದಿಲ್ಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಾಲಜಿ ಎಜು ಕೇಷನ್ (ಎಐಸಿಯಿಇ)ನ ಮಾನ್ಯತೆ ಪಡೆದಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಿಕಲ್ ಯುನಿವರ್ಸಿಟಿ (ವಿಟಿಯು) ಯಲ್ಲಿ ನೋಂದಾಯಿಸಿಕೊಂಡಿದ್ದು, ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿದೆ.
ಸಂಸ್ಥೆಯು, ಹೊಸದಿಲ್ಲಿಯ ನ್ಯಾಷನಲ್ ಬೋರ್ಡ್ ಆಫ್ ಆಕ್ರಿಡಿಯೇಶನ್ (ಎನ್‌ಬಿಎ)ನಿಂದ ವಿಶ್ವಾ ಸಾರ್ಹತೆ ಪಡೆದಿದ್ದು, ದ.ಕ. ಜಿಲ್ಲೆಯಲ್ಲಿ ಪ್ರಥಮ ಆಕ್ರಿಡಿಯೇಶನ್ ಪಡೆದ ಎಂಜಿನಿಯರಿಂಗ್ ವಿದ್ಯಾ ಕೇಂದ್ರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಗುಣಮಟ್ಟದ ಶಿಕ್ಷಣ ಕಾಯ್ದುಕೊಂಡಿದ್ದಕ್ಕಾಗಿ ಐಎಸ್‌ಒ 9001-2000 ಪ್ರಮಾಣಪತ್ರ ಪಡೆದುಕೊಂಡಿದೆ.
ನಾಲ್ಕು ವರ್ಷ(8 ಸೆಮಿಸ್ಟರ್)ಗಳ ಬಿಇ (ಬ್ಯಾಚುಲರ್ ಆಫ್ ಎಂಜಿನಿಯರಿಂಗ್) ಪದವಿ, ಕಂಪ್ಯೂ ಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಇನ್ಫಾರ್ಮೇಶನ್ ಸೈನ್ಸ್ ಆ್ಯಂಡ್ ಎಂಜಿನಿ ಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಟೆಲಿ ಕಮ್ಯುನಿಕೇಷನ್ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಬಯೊಟೆಕ್ನಾಲಜಿ ಆ್ಯಂಡ್ ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ಗಳು ಇಲ್ಲಿ ಲಭ್ಯವಿವೆ.
ವಿವಿಗಳಿಂದ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳೂ ಇಲ್ಲಿವೆ. ಪಿಎಚ್‌ಡಿ ಮತ್ತು ಎಂಎಸ್ಸಿ (ಎಂಜಿನಿಯರ್) ಪದವಿ ಯೊಂದಿಗೆ ಕೆಮಿಸ್ಟ್ರಿ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ಸಂಶೋಧನಾ ಸೌಲಭ್ಯಗಳೂ ಇಲ್ಲಿವೆ.
ಇನ್ನಿತರ ಸೌಲಭ್ಯಗಳು:
ವಿಶಾಲವಾದ ಗ್ರಂಥಾಲಯ, ಭಾಷಾ ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ, ಇಂಟರ್‌ನೆಟ್ ಸೌಲಭ್ಯ, ಬಸ್‌ಗಳನ್ನೊಳಗೊಂಡ ಸಾರಿಗೆ ವ್ಯವಸ್ಥೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಗಳು ಇಲ್ಲಿವೆ. ಕ್ರಿಯಾತ್ಮಕ ಕಲಿಕೆಗಾಗಿ ಕೈಗಾರಿಕೆಗಳಿಗೆ ಭೇಟಿ ನೀಡುವ ಸೌಲಭ್ಯ, ಜಿಮ್, ಆಸ್ಪತ್ರೆ ಸೌಲಭ್ಯಗಳೂ ಪಿ.ಎ. ಎಂಜಿನಿಯರಿಂಗ್ ಕಾಲೇಜು ಕ್ಯಾ೦ಪಸ್ ಹೊಂದಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

No comments: