VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 28, 2010

ಜಮ್ಮು ಕಾಶ್ಮೀರದಲ್ಲಿ ಶೇ.2 ಮಂದಿಗೆ ಮಾತ್ರ ಪಾಕಿಸ್ತಾನೀಯರಾಗುವಾಸೆ!

ಜಮ್ಮು ಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ನಿಜಕ್ಕೂ ಪಾಕಿಸ್ತಾನವನ್ನು ಬಯಸುವ ಮಂದಿ ಎಷ್ಟಿರಬಹುದು ಎಂಬ ಪ್ರಶ್ನೆಗೆ ಇದೀಗ ಉತ್ತರ ಲಭಿಸಿದೆ. ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಇದರ ವರದಿಯ ಪ್ರಕಾರ, ಶೇ.98 ಮಂದಿ ತಾವು ಭಾರತೀಯರೇ ಆಗಬೇಕೆಂದು ಬಯಸಿದರೆ, ಕೇವಲ ಶೇ.2ರಷ್ಟು ಮಂದಿ ಮಾತ್ರ ತಾವು ಪಾಕಿಸ್ತಾನವನ್ನು ಬಯಸುವುದಾಗಿ ಹೇಳಿಕೊಂಡಿದ್ದಾರೆ.

ಜಮ್ಮು ಕಾಶ್ಮೀರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿ ಲಂಡನ್‌ನ ತಿಂಕ್ ಟ್ಯಾಂಕ್ ಚಾಥಮ್ ಹೌಸ್ ಸಂಸ್ಥೆ ಸಮೀಕ್ಷೆ ನಡೆಸಿದೆ. ಶೇ.2ರಷ್ಟು ಮಂದಿ ಪಾಕಿಸ್ತಾನ ಪರ ಅಭಿರುಚಿಯುಳ್ಳವರು ಹೆಚ್ಚಾಗಿ ಕಂಡುಬರುವುದು ಶ್ರೀನಗರ ಹಾಗೂ ಬುಡ್ಗಾಂ ಜಿಲ್ಲೆಗಳಲ್ಲಿ ಮಾತ್ರ. ಉಳಿದೆಲ್ಲಾ ಜಿಲ್ಲೆಗಳಲ್ಲಿ ಭಾರತೀಯತ್ವದೆಡೆಗೇ ಒಲವನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ.

ಸಮೀಕ್ಷೆ ನಡೆಸಿದ ರಾಬರ್ಟ್ ಬ್ರಾಡ್‌ರಾಕ್ 2009ರ ಸೆಪ್ಟೆಂಬರ್‌ನಿಂದ ಅಕ್ಟೋಬರ್ ತಿಂಗಳ ನಡುವಿನಲ್ಲಿ 3,774 ಮಂದಿಯನ್ನು ಸಂದರ್ಶನ ನಡೆಸಿದ್ದು, ಈ ಪೈಕಿ ಶೇ.44ರಷ್ಟು ಮಂದಿ ಪಾಕಿಸ್ತಾನ ಪರ ಸ್ವಾತಂತ್ರ್ಯ ಸಿಕ್ಕಿಬಿಡಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.43 ಮಂದಿ ಭಾರತ ಪರ ಸ್ವಾತಂತ್ರ್ಯ ಲಭಿಸಲಿ ಎಂದು ಅಭಿಪ್ರಾಯಿಸಿದ್ದಾರೆ.

37 ಪುಟಗಳ ವರದಿಯನ್ನು ಈ ಸಮೀಕ್ಷೆ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ, ಇಡೀ ಕಾಶ್ಮೀರ ಭಾರತಕ್ಕೆ ಸೇರಬೇಕೋ ಅಥವಾ ಪಾಕಿಸ್ತೋನಕ್ಕೋ ಎಂಬ ಪ್ರಶ್ನೆ ಕೇಳಿದಾಗ ಬಹುತೇಕ ಜನರಲ್ಲಿ, ಈ ಸಂದಿಗ್ಧತೆಗೊಂದು ಅಂತಿಮ ನಿರ್ಣಯ ಬಂದರೆ ಸಾಕು ಎಂಬಂತಿತ್ತು. ಸ್ವಾತಂತ್ರ ಎಂಬುದು ಪರಿಹಾರವಲ್ಲವಾದರೂ, ಈ ಕಣಿವೆ ಪ್ರದೇಶದಲ್ಲಿ ಶೇ.75ರಿಂದ 95ರಷ್ಟು ಮಂದಿ ತಮಗೆ ಅಂತಿಮ ನಿರ್ಣಯ ಹೊರಬಿದ್ದರೆ ಸಾಕು ಎಂಬ ಆಸೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಜಮ್ಮುಕಾಶ್ಮೀರದಲ್ಲಿ ಶೇ.20 ಮಂದಿ ಉಗ್ರವಾದಿಗಳ ಅಟ್ಟಹಾಸ ಕೊಂಚ ಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ನೀಡಬಹುದು ಎಂದು ಅಭಿಪ್ರಾಯಪಟ್ಟರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶೇ.37ರಷ್ಟು ಮಂದಿ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಎಂದು ಹೇಳಿದ್ದಾರೆ.

ಆದರೆ ಜನರ ಈ ಮನಸ್ಥಿತಿ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. 2008 ಹಾಗೂ 2009ನೇ ಸಾಲಿನ ಲೋಕಸಭಾ ಚುನಾವಣೆಗಳಲ್ಲಿ ಈ ಬದಲಾವಣೆ ಕಾಣಬಹುದಾಗಿದೆ. ಆದರೂ, ಚುನಾವಣಾ ಫಲಿತಾಂಶಗಳು ಅಂದುಕೊಂಡ ರೀತಿಯಲ್ಲಿ ಬರಲಿಲ್ಲವಾದರೂ, ಇತ್ತೀಚೆಗೆ ಈ ಚುನಾವಣೆಗಳಾದ ನಂತರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಕಂಡಿದೆ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಡುತ್ತಾರೆ.

No comments: