VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 28, 2010

‘ಬಲವಂತ ಇಲ್ಲ; ಎಲ್ಲವೂ ನನ್ನಿಚ್ಛೆಯಂತೆ ನಡೆದಿದೆ’: ಹೈಕೋರ್ಟ್ ಮುಂದೆ ಯುವತಿಯ ಹೇಳಿಕೆ; ಅಂತರ್‌ಧರ್ಮೀಯ ವಿವಾಹ ಪ್ರಕರಣ ಸುಖಾಂತ್ಯ

ಬೆಂಗಳೂರು, ಮೇ.೨೭: ‘ಬಲವಂತದ ಮದುವೆ ನಡೆದಿಲ್ಲ, ಮತಾಂತರಕ್ಕೆ ಯಾರೂ ಒತ್ತಾಯಪಡಿಸಿಲ್ಲ. ಸ್ವತಃ ನಾನೇ ಇಷ್ಟ ಪಟ್ಟು ಸಮೀರ್ ಖಾನ್‌ನನ್ನು ಮದುವೆಯಾಗಿದ್ದೇನೆ. ಎಲ್ಲವೂ ನಮ್ಮಿಬ್ಬರ ಇಷ್ಟ ಮತ್ತು ಒಪ್ಪಿಗೆಯಂತೆ ನಡೆದಿದೆ ಎಂದು ಯುವತಿ ಸಾರಾ ಖಾನ್ (ನೀತು) ಹೈಕೋರ್ಟ್ ಮುಂದೆ ಹೇಳಿಕೆ ನೀಡಿದ ಹಿನೆಲೆಯಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಮತ್ತು ‘ಲವ್ ಜಿಹಾದ್’ ಹಣೆಪಟ್ಟಿಗೆ ಗುರಿಯಾಗಿದ್ದ ಅಂತರ್‌ಧರ್ಮೀಯ ವಿವಾಹ ಪ್ರಕರಣವಿಂದು ಸುಖಾಂತ್ಯ ಕಂಡಿದೆ.

ಯುವತಿ ನೀತು ಅಲಿಯಾಸ್ ಸಾರಾ ಖಾನ್ ತಂದೆ ರಾಮ್‌ಲಾಲ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪ್‌ಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎಲ್. ಮಂಜುನಾಥ್ ಹಾಗೂ ನ್ಯಾ. ಎ.ಎಸ್. ಬೋಪಣ್ಣ ಅವರಿದ್ದ ವಿಭಾUಯ ಪೀಠದ ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ. ಹೇಳಿಕೆಯನ್ನು ಆಲಿಸಿದ ನ್ಯಾಯಮೂರ್ತಿಗಳು, ಯುವತಿ ವಯಸ್ಕಳಾಗಿದ್ದು, ತನ್ನ ಜೀವನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಆಕೆಗೆ ಇದೆ ಎಂದು ಅಭಿಪ್ರಾಯಪಟ್ಟು, ಸಾರಾ ಖಾನ್‌ಳನ್ನು ಆಕೆಯ ಪತಿ ಸಮೀರ್ ಖಾನ್ ಜೊತೆ ತೆರಳಲು ಅನುಮತಿ ನೀಡಿದರು.

ಪ್ರಕರಣದ ಹಿನ್ನೆಲೆ: ನನ್ನ ಮಗಳು ನೀತು (೨೦) (ಈಗ ಸಾರಾ ಖಾನ್ ಎಂದು ಹೆಸರು ಬದಲಾಯಿಸಲಾಗಿದೆ) ಫ್ರೇಜರ್ ಟೌನ್‌ನ ಕ್ರಿಶ್ಚಿಯನ್ ಕಾಲೇಜ್ ಫಾರ್ ವುಮೆನ್‌ನಲ್ಲಿ ಬಿ.ಎ. ಓದುತ್ತಿದ್ದಾಳೆ. ಮೇ ೩ ರಂದು ರಾತ್ರಿ ೯ ಗಂಟೆಗೆ ಮನೆಯ ಹತ್ತಿರದ ಅಂಗಡಿಗೆ ಹೋಗಿ ಬರುವುದಾಗಿ ಹೋದ ನೀತು ಮರಳಿ ಬಂದಿಲ್ಲ. ತಮ್ಮ ಮಗಳನ್ನು ಸಮೀರ್ ಖಾನ್ ಅಪಹರಿಸಿ ಮತಾಂತರಗೊಳಿಸಿದ್ದಾನೆ. ಈ ಬಗ್ಗೆ ಆತನ ತಂದೆ ಮಹಮೂದ್ ಅಬ್ಬಾಸ್‌ನನ್ನು ಕೇಳಿದಾಗ ಮೊದಲು ನಿರಾಕರಿಸಿದ ಆತ ನಂತರ ಮಗಳನ್ನು ನಮ್ಮ ವಶಕ್ಕೆ ಒಪ್ಪಿಸುವ ಭರವಸೆ ನೀಡಿ ಈವರೆಗೆ ಏನೂ ಮಾಡಿಲ್ಲ. ಈ ಬಗ್ಗೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗವಾರದ ಬಟ್ಟೆ ವ್ಯಾಪಾರಿ ಮಾರ‍್ವಾಡಿ ಜನಾಂಗದ ರಾಮ್‌ಲಾಲ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಮೇ ೨೪ರಂದು ಯುವತಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಯುವತಿ ತಮಿಳುನಾಡಿನ ಡೆಂಕಣಕೋಟೆಯಲ್ಲಿ ಸಿಕ್ಕಳು ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದರು. ನನ್ನ ತಂದೆ ತಾಯಿಗಳು ಅಶೋಕ್ ಎಂಬ ಯುವಕನ ಜೊತೆಗೆ ನನ್ನ ವಿವಾಹ ನಿಶ್ಚಯ ಮಾಡಿದ್ದರು. ಅದು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ನಾನು ಪ್ರೀತಿಸಿದವನ ಜೊತೆಗೆ ನಾನು ವಿವಾಹವಾಗಿದ್ದೇನೆ ಎಂದು ಯುವತಿ ಹೈಕೋರ್ಟ್ ಮುಂದೆ ಹೇಳಿಕೆ ನೀಡಿದಳು.

ಇಸ್ಲಾಮ್ ಧರ್ಮದ ಮೂಲತತ್ವಗಳಾದ ಕಲಿಮಾ, ಸಲಾತ್ ಹಾಗೂ ಝಕಾತ್‌ನಿಂದ ಪ್ರಭಾವಿತಳಾಗಿ ಅದನ್ನು ಅರ್ಥೈಸಿಕೊಂಡು ಇದೇ ಮೇ ೧೭ಕ್ಕೆ ಸ್ವ ಇಚ್ಚೆಯಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡೆ. ಮೇ.೧೯ಕ್ಕೆ ಹೂಸೂರಿನಲ್ಲಿ ನಮ್ಮಿಬ್ಬರ ಮದುವೆ ನಡೆಯಿತು ಎಂದು ಯುವತಿ ಸಾರಾ ಖಾನ್ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದ್ದಳು.

ನೀನು ಮತಾರಗೊಂಡ ಮತ್ತು ಹೆಸರು ಬದಲಾಯಿಸಿಕೊಂಡ ಬಗ್ಗೆ ಪತ್ರಿಕೆಗಳಲ್ಲಿ ಯಾಕೆ ಪ್ರಕಟಿಸಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ ಯುವತಿ ಬಳಿ ಉತ್ತರವಿರಲಿಲ್ಲ. ಅದೇ ರೀತಿ ಕಲಿಮಾ, ಸಲಾತ್ ಹಾಗೂ ಝಕಾತ್ ಅರ್ಥ ಹೇಳುವಂತೆ ನ್ಯಾಯಮೂರ್ತಿಗಳು ಯುವತಿ ಸಾರಾಳನ್ನು ಕೇಳಿದಾಗ ಆಕೆ ಉತ್ತರ ನೀಡಲು ವಿಫಲಳಾದಳು. ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಸಲಾಗಿದೆ. ನೀತುಗೆ ಇದರ ಬಗ್ಗೆ ತಿಳಿದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಈ ಪ್ರಕರಣದ ಬಗ್ಗೆ ಇನ್ನೂ ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆವರೆಗೆ ಯುವತಿಯನ್ನು ಪೊಲೀಸ್ ರೀಮಾಂಡ್ ಹೋಂಗೆ ಒಪ್ಪಿಸುವಂತೆ ಆದೇಶ ನೀಡಿದ್ದರು.

‘ಕಟ್ಟುಕಥೆ’ ಕಟ್ಟಿದವರಿಗೆ ನ್ಯಾಯಾಲಯ ಉತ್ತರ ನೀಡಿದೆ: ಸಮೀರ್

ನನ್ನ ನಡವಳಿಕೆಯಿಂದ ನಮ್ಮಿಬ್ಬರ ಪಾಲಕರ ಮನಸ್ಸಿಗೆ ನೋವುಂಟಾಗಿರಬಹುದು.

ಆದರೆ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರಿಬ್ಬರ ಬಗ್ಗೆ ನನಗೆ ಆಪಾರ ಗೌರವ ಇದೆ. ಮುಂದೆ ಯಾವತ್ತೂ ಅವರ ಮನಸ್ಸಿಗೆ ನೋವಾಗ ದಂತೆ ನಡೆದುಕೊಳ್ಳುತ್ತೇವೆ. ನಮ್ಮಿಬ್ಬರ ವಿವಾಹದ ಬಗ್ಗೆ ‘ಕಥೆ ಕಟ್ಟಿದವರಿಗೆ’ ನ್ಯಾಯಾಲಯದ ಮೂಲಕ ಉತ್ತರ ಸಿಕ್ಕಿದೆ. ಖಾಸಗಿ ವಿಷಯವನ್ನು ವೈಭಕರಿಸಲಾಯಿತು ಇದರಿಂದ ಮನಸ್ಸಿಗೆ ನೋವಾಗಿದೆ. ಆದರೂ, ನಾನು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ. ನನ್ನ ಪತ್ನಿ ಸಾರಾಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇನೆ. ನಮ್ಮಿ ಬ್ಬರ ಮುಂದಿನ ಜೀವನ ದಿಂದ ಸಾರಾ ಪಾಲಕರು ನಮ್ಮಿಬ್ಬರನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಮೀರ್ ಖಾನ್ ಹೇಳಿದ್ದಾರೆ.

ಮತಾಂತರ ಆಗಿದ್ದೇನೆ: ಸಾರಾ

ನಾವಿಬ್ಬರು ಶಾಲಾ ದಿನಗಳಿಂದಲೂ ಪರಸ್ಪರ ಸ್ನೇಹಿತರಾಗಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ.

ಇದಕ್ಕೆ ನನ್ನ ಪಾಲಕರ ವಿರೋಧವಿತ್ತು. ಅವರು ನನ್ನ ಮದುವೆ ಅಶೋಕ್ ಎಂಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಆದ್ದರಿಂದ ನಾನು ನನ್ನ ಬದುಕಿನ ನೆಮ್ಮದಿ ಕಾಣಲು ಮನಸಾರೆ ಪ್ರೀತಿಸಿದ ಸಮೀರ್ ಖಾನ್ ಜೊತೆಗೆ ಮದುವೆ ಆಗಿದ್ದೇನೆ. ಆತನ ಧರ್ಮಕ್ಕನುಗುಣವಾಗಿ ಮತಾಂತರಗೊಂಡಿದ್ದೇನೆ. ಇದರಲ್ಲಿ ಯಾವ ಬಲವಂತವೂ ಇಲ್ಲ. ಈಗ ನಾನು ನೆಮ್ಮದಿಯಿಂದ ಇದ್ದೇನೆ.

ನನ್ನ ತಂದೆ-ತಾಯಿ ಮತ್ತು ಕುಟುಂಬದ ಇತರ ಸದಸ್ಯರ ಬಗ್ಗೆ ಅಪಾರ ಗೌರವವಿದೆ. ನನ್ನ ನಿರ್ಧಾರಕ್ಕೆ ಅವರು ಇಂದಲ್ಲ ನಾಳೆ ಮನ್ನಣೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಾರಾ ಖಾನ್ ತಿಳಿಸಿದ್ದಾರೆ.

No comments: