ಮಂಗಳೂರು, ಮೇ 19: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಬಲಿತ ಅಭ್ಯರ್ಥಿಗಳು 368 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 67 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 100ಕ್ಕೂ ಅಕ ಸ್ಥಾನಗಳಲ್ಲಿ ಪಕ್ಷವು ನಿಕಟ ಸ್ಪರ್ಧೆ ನೀಡಿ ಎರಡನೆ ಸ್ಥಾನ ಪಡೆದಿದೆ. ದ.ಕ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 273 ಸ್ಥಾನಗಳಿಗೆ ಎಸ್‌ಡಿಪಿಐ ಸ್ಪರ್ ಸಿದ್ದು, ಅವುಗಳಲ್ಲಿ 41 ಸ್ಥಾನಗಳನ್ನು ಗೆದ್ದಿದೆ. ಹಲವು ಕಡೆ ತೀವ್ರ ಪೈಪೋಟಿ ನೀಡಿ ಅತ್ಯಲ್ಪ ಮತಗಳ ಅಂತರದಿಂದ 2ನೆ ಸ್ಥಾನವನ್ನು ಪಕ್ಷ ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ 31 ಸ್ಥಾನಗಳಿಗೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 13 ಸ್ಥಾನಗಳನ್ನು ಗೆದ್ದಿದೆ. 12 ಸ್ಥಾನಗಳಲ್ಲಿ ಅತ್ಯಂತ ನಿಕಟ ಪ್ರತಿಸ್ಪರ್ಧೆ ಒಡ್ಡಿದೆ ಎಂದು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸಿದ್ದ 31 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ತುಮಕೂರಿನಲ್ಲಿ 9 ಸ್ಥಾನಗಳಲ್ಲಿ 3 ಸ್ಥಾನ, ರಾಮನಗರ, ಹುಣಸೂರು ಹಾಗೂ ಹಾಸನಗಳಲ್ಲಿಯೂ ತಲಾ 1 ಸ್ಥಾನ ಗಳನ್ನು ಪಡೆದು ಖಾತೆ ಆರಂಭಿಸಿದೆ. ಕೊಡಗು ಜಿಲ್ಲೆಯ ಬೇಡಗೊಟ್ಟ ಪಂಚಾಯತ್ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಡಳಿತ ನಡೆಸುವ ಬಹುಮತ ಗಳಿಸಿದ್ದಾರೆ. ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ಪಂಚಾಯತ್ ಆಡಳಿತದಲ್ಲಿ ಬಹುಮತ ಹೊಂದಲು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ನಿರ್ಣಾಯಕರಾಗಿದ್ದಾರೆ ಎಂದು ಅಬ್ದುಲ್ ಮಜೀದ್ ತಿಳಿಸಿದರು.
25ರಂದು ಅಭಿನಂದನಾ ಸಮಾರಂಭ
ಗೆದ್ದ ಅಭ್ಯರ್ಥಿಗಳಿಗೆ ಹಾಗೂ ಕಾರ್ಯಕರ್ತರಿಗೆ ಎಸ್‌ಡಿಪಿಐ ವತಿಯಿಂದ ಮೇ 25ರಂದು ನಗರದ ಪುರಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಇದರಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ಮಜೀದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಸುರತ್ಕಲ್, ಜಿಲ್ಲಾಧ್ಯಕ್ಷ ಹನೀಫ್ ಖಾನ್ ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment