VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಗೋಹತ್ಯೆ ನಿಷೇಧಕ್ಕೆ ಒಮ್ಮತಾಭಿಪ್ರಾಯ: ಮುಮ್ತಾಝ್ ಅಲಿ ಖಾನ್

ಬೆಂಗಳೂರು, ಮೇ 19: ಗೋಹತ್ಯೆ ನಿಷೇಧಕ್ಕೆ ಭಾರತೀಯ ಸಮಾಜದಲ್ಲಿ ಒಮ್ಮತಾಭಿಪ್ರಾಯ ಮೂಡಿದೆ ಎಂದು ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ.ಮುಮ್ತಾಝ್ ಅಲಿಖಾನ್ ಪ್ರತಿಪಾದಿಸಿದ್ದಾರೆ.

ನಗರದ ಮಿಥಿಕ್ ಸೊಸೈಟಿಯಲ್ಲಿ ಸಪ್ನ ಬುಕ್ ಹೌಸ್ ಹಮ್ಮಿಕೊಂಡಿದ್ದ ಅವರ ‘ಪುಣ್ಯ ಕೋಟಿ: ಧರ್ಮ, ಕಾನೂನು ಮತ್ತು ಸಮಾಜ’ ಕತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳಲ್ಲೂ ಗೋಹತ್ಯೆ ನಿಷೇಧದ ಉಲ್ಲೇಖವಿದೆ.

ಹೈದರ್ ಅಲಿಖಾನ್, ಟಿಪ್ಪು ಸುಲ್ತಾನ್‌ರ ಆಳ್ವಿಕೆಯಲ್ಲಿ ಗೋಹತ್ಯೆ ಮಾಡುವವರ ಕೈ ಕತ್ತರಿಸುವಂತೆ ಆದೇಶ ಹೊರಡಿಸಲಾಗಿತ್ತು. ಅಲ್ಲದೆ, ದೇಶದ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದೇವ್‌ಬಂದ್ ಸಹ ಗೋಹತ್ಯೆ ನಿಷೇಧದ ಕುರಿತು ಫತ್ವಾ ಹೊರಡಿಸಿದೆ ಎಂದು ಮುಮ್ತಾಝ್ ಅಲಿ ಖಾನ್ ತಿಳಿಸಿದರು.

ಸ್ವತಂತ್ರ ಭಾರತದಲ್ಲಿ ಹುಲಿಯ ಬದಲಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಗುರುತಿಸಿದ್ದರೆ, ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದ ಅವರು, ಈ ಗೋಹತ್ಯೆಯನ್ನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿ ಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ರಾಮಾಜೋಯಿಸ ಮಾತನಾಡಿ, ಅಸ್ಪೃಶತೆ ಹಾಗೂ ಗೋಹತ್ಯೆ ಭಾರತೀಯ ಸಮಾಜದಲ್ಲಿನ ದೊಡ್ಡ ಕಳಂಕಗಳು. ಆದ್ದರಿಂದ, ಸಂವಿಧಾನ ಬದ್ಧವಾದ ಗೋಹತ್ಯೆ ನಿಷೇಧ ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ ನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಲ್ಲಿ ಸಾವಿರಾರು ಕೋಟಿ ರೂ. ವೌಲ್ಯದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗಿದೆ. ಆದರೆ, ಈವರೆಗೆ ಗಲಭೆಗೆ ಪ್ರಮುಖ ಕಾರಣಗಳನ್ನು ಗುರುತಿಸುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಅವರು ದೂರಿದರು.

ಬೇಲಿಮಠದ ಶಿವರುದ್ರ ಸ್ವಾಮಿ ಕತಿಯನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್‌ನ ಮುಖ್ಯಸ್ಥ ನಿತಿನ್ ಷಾ, ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್.ಎನ್.ಶಾಸ್ತ್ರಿ ಉಪಸ್ಥಿತರಿದ್ದರು.

No comments: