ಮುಂಬೈ, ಮೇ 29: 159 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಎರಡು ಬಾರಿ ಹಾರಾಟವನ್ನು ಮುಂದೂಡಿ, ಕೊನೆಗೆ 9 ಗಂಟೆ ತಡವಾಗಿ ಇಂದು ಬೆಳಗ್ಗೆ ಹೊರಟಿದೆ.
ವಿಮಾನ ವಿಳಂಬವಾಗಿ ಹೊರಟ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾದುದಕ್ಕೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ ಎಂದು ಏರ್ ಇಂಡಿಯಾ ವಕ್ತಾರ ಹೇಳಿದ್ದಾರೆ.
ಎರಡು ಸಲ ವಿಮಾನ ಹಾರಾಟದ ಸಮಯವನ್ನು ಮುಂದೂಡಲಾಯಿತು. ಒಮ್ಮೆ ತಾಂತ್ರಿಕ ತೊಂದರೆಯಿಂದ ಮುಂದೂಡಿದರೆ, ಮತ್ತೊಮ್ಮೆ ವೈಮಾನಿಕ ಸಿಬ್ಬಂದಿಗಳು ತಮ್ಮ ಕರ್ತವ್ಯ ಅವಧಿ ಮುಕ್ತಾಯಗೊಳಿಸಿದ್ದರಿಂದ ಹಾರಾಟದ ಸಮಯವನ್ನು ಮರುನಿಗದಿ ಪಡಿಸ ಲಾಯಿತು ಎಂದು ಅವರು ಹೇಳಿದರು.
‘ಮೇ 28ರಂದು ಮುಂಬೈಯಿಂದ ಚೆನ್ನೈಗೆ ತೆರಳಬೇಕಾಗಿದ್ದ 1 ್ಡ 206 ಸಂಖ್ಯೆಯ ಏರ್ ಇಂಡಿಯಾ ವಿಮಾನ ವಿಳಂಬವಾಗಿ ತೆರಳಿ ಪ್ರಯಾ ಣಿಕರಿಗೆ ತೊಂದರೆಯಾದ್ದರಿಂದ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ವಿಮಾನ ತಾಂತ್ರಿಕ ಕಾರಣಗಳಿಂದ 9ಗಂಟೆಗೆ ಹೊರಟಿದೆ ಎಂದು’ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.
ವೈಮಾನಿಕ ಸಿಬ್ಬಂದಿಗಳ ಕರ್ತವ್ಯ ಅವಧಿ ಮುಗಿದ ಕಾರಣ ಹೊಸ ಸಿಬ್ಬಂದಿ ಗಳನ್ನು ನಿಯೋಜಿಸಿ ಅನುಕೂಲ ಕಲ್ಪಿಸ ಲಾಯಿತು ಎಂದು ಅವರು ತಿಳಿಸಿದ್ದಾರೆ.
ಏರ್ ಇಂಡಿಯಾಕ್ಕೆ ಸೇರಿದ ವಿಮಾ ನದಲ್ಲಿ ತೊಂದರೆ ಉಂಟಾಗುತ್ತಿರುವುದು ಒಂದೇ ದಿನದಲ್ಲಿ ಇದು ಎರಡನೇ ಬಾರಿ ಯಾಗಿದೆ. ಈ ಮೊದಲು ಕ್ಯಾಲಿಕೆಟ್ ನಿಂದ ಚೆನ್ನೈಗೆ ಹೊರಟಿದ್ದ 84 ಪ್ರಯಾಣಿಕರಿದ್ದ ವಿಮಾನ ತಾಂತ್ರಿಕ ಕಾರಣದಿಂದಾಗಿ ಬದಲಾಯಿಸಲಾಗಿತ್ತು.
May 30, 2010
Subscribe to:
Post Comments (Atom)
No comments:
Post a Comment