ಮಾಲೆಗಾಂವ್,ಮೇ 29: ಮಾಲೆಗಾಂವ್ ಜಿಲ್ಲೆಯ ದಿವೊಘಾಟ್ ಗ್ರಾಮದಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ವಿಫಲ ಯತ್ನ ನಡೆಸಿದ ದುಷ್ಕರ್ಮಿಯೊಬ್ಬ ಆಕೆಯನ್ನು ಜೀವಂತವಾಗಿ ದಹಿಸಿದ ಬರ್ಬರ ಘಟನೆ ಮಹಾರಾಷ್ಟ್ರದ ಮಾಲೆಗಾಂವ್ ಜಿಲ್ಲೆಯ ದೆವೊಘಾಟ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗಂಭೀರಸುಟ್ಟ ಗಾಯಗಳಾದ ಬಾಲಕಿ ಆನಂತರ ಆಸ್ಪತ್ರೆಯಲ್ಲಿ ಅಸುನೀಗಿದಳೆಂದು ಪೊಲೀಸರು ತಿಳಿಸಿದ್ದಾರೆ.16ರ ಹರೆಯದ ಪೂನಂ ಪಾಘರ್ ಒಬ್ಬಂಟಿಯಾಗಿದ್ದಾಗ ಮನೆಯೊಳಗೆ ನುಗ್ಗಿದ ಆರೋಪಿ ಸಾಮಾಧಾನ್ ಖೈರ್ನಾರ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು.
ಆದರೆ ಬಾಲಕಿಯು ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಾಗ ಕ್ರುದ್ಧನಾದ ಆತ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ’’ ಎಂದು ಮಾಲೆಗಾಂವ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಶೇಖರ ಚೌಗುಲೆ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು, ಗಂಭೀರ ಸುಟ್ಟಗಾಯಗಳಾದ ಪೂನಂಳನ್ನು ಆಸ್ಪತ್ರೆಗೆ ದಾಖಲಿಸಿದರು. ಆಕೆಯ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಳೆಂದು ಚೌಗುಲೆ ಹೇಳಿದರು. ಆರೋಪಿ ಖೈರ್ನಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಖೈರ್ನಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 307( ಕೊಲೆ ಯತ್ನ),354 (ಶೀಲಹರಣದ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಸ್ವರೂಪದ ಬಲಪ್ರಯೋಗ) ಹಾಗೂ 451 (ಜೈಲು ಶಿಕ್ಷೆಗೆ ಅರ್ಹವಾದಂತಹ ಅಪರಾಧವನ್ನು ಎಸಗಲು ಮನೆಯೊಳಗೆ ಅತಿಕ್ರಮ ಪ್ರವೇಶ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
May 30, 2010
Subscribe to:
Post Comments (Atom)
No comments:
Post a Comment