
ಮುಂಬೈ, ಮೇ.30: ಜೆಟ್ ಏರ್ ವೇಸ್ ನ ಗಗನ ಸಖಿಯ ಮೆಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ ಜೆಟ್ ಏರ್ ವೇಸ್ ನ ಸಹ ಪೈಲಟ್ ವರುಣ್ ಅಗರವಾಲ್ ಎಂಬುವವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ವರುಣ್(27) ಮದುವೆಯಾಗುವ ಸೋಗು ಹಾಕಿ, 22 ವರ್ಷದ ಗಗನಸಖಿ ಸಲೋನಿ ಅವರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಇಬ್ಬರೂ ಲಿನ್ ಇನ್ ಸಂಬಂಧದಂತೆ ಒಟ್ಟಿಗೆ ವಾಸಿಸುತ್ತಿದ್ದರು. 2009 ರ ಮೇನಿಂದ ಸಲೋನಿ ಮೇಲೆ ಅನೇಕ ಬಾರಿ ಅತ್ಯಾಚಾರ ಎಸೆಗಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸೆಕ್ಷನ್ 376(ರೇಪ್) , 420(ವಂಚನೆ) ಅಲ್ಲದೆ ಸೆಕ್ಷನ್ 323ಹಾಗೂ 506 ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಮುಂಬೈನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಆಶಾ ಕೊರ್ಕೆ ಹೇಳಿದ್ದಾರೆ.
ರೇಪ್ ಕೇಸ್ ಹಿಸ್ಟರಿ: ಉತ್ತಾರಾಂಚಲ ಮೂಲದವರ ವರುಣ್ ಹಾಗೂ ಸಲೋನಿ ಜೆಟ್ ಏರ್ ವೇಸ್ ನಲ್ಲಿ ಸಹೋದ್ಯೋಗಿಗಳಾಗಿದ್ದಾರೆ.2008 ರಿಂದ ಸಲೋನಿ ಬೆನ್ನ ಹಿಂದೆ ಬಿದ್ದ ವರುಣ್, ಕೊನೆಗೂ ಆಕೆಯನ್ನು ಒಲಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ಒಂದೇ ಊರಿನವ, ಒಂದೇ ಕಡೆ ಉದ್ಯೋಗವಾದ್ದರಿಂದ ಸಲೋನಿ ಕೂಡ ಆತನಿಗೆ ಮನಸೋಲುತ್ತಾಳೆ.
ವರುಣ್ ಮದುವೆ ಭರವಸೆ ನೀಡಿದ ಖುಷಿಯಲ್ಲಿ ಮುಂಬೈನಲ್ಲಿ ಒಟ್ಟಿಗೆ ವಾಸಿಸತೊಡಗುತ್ತಾರೆ. ಆದರೆ, ಸಲೋನಿಗೆ ದೈಹಿಕವಾಗಿ, ಮಾನಸಿಕವಾಗಿ ವರುಣ್ ಹಿಂಸೆ ಕೊಡಲಾರಂಭಿಸುತ್ತಾನೆ. ಮನೆ ಬಿಟ್ಟು ಹೋಗು ಇಲ್ಲದಿದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡುತ್ತಾನೆ. ಕೊನೆಗೂ ಸಲೋನಿಯ ತಾಳ್ಮೆ ಕಟ್ಟೆ ಒಡೆದು, ಅವನ ಹಿಂಸೆಗೆ ತಡೆ ಒಡ್ಡಲು ನಿರ್ಧರಿಸುತ್ತಾಳೆ. ಮೇ.10 ರಂದು ಪೊಲೀಸರಿಗೆ ದೂರು ನೀಡುತ್ತಾಳೆ. ಸದ್ಯ ಪುವೈ ಪೊಲೀಸ್ ಠಾಣೆ ವರುಣ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದೆ.
No comments:
Post a Comment