ಮದುವೆ ಸೀಸನ್‌ನಿಂದಾಗಿ ಸ್ಟಾಕಿಸ್ಟುಗಳು ಮತ್ತು ಆಭರಣ ವ್ಯಾಪಾರಿಗಳಿಂದ ಭರ್ಜರಿ ಖರೀದಿಯಿಂದ ಉತ್ತೇಜನ ಪಡೆದ ಚಿನ್ನದ ದರವು ಶನಿವಾರ ಬುಲಿಯನ್ ಮಾರುಕಟ್ಟೆಯಲ್ಲಿ ಗ್ರಾಂಗೆ 115 ರೂ. ಮೇಲಕ್ಕೇರಿ, ಹತ್ತು ಗ್ರಾಂಗೆ 18.790 ರೂ. ತಲುಪಿತು.
ವಿದೇಶೀ ಮಾರುಕಟ್ಟೆಯಲ್ಲಿ ಔನ್ಸ್‌ಗೆ 2.30 ಡಾಲರ್ ಹೆಚ್ಚಿಸಿಕೊಂಡ ಚಿನ್ನವು 1214.30 ಡಾಲರ್‌ಗೆ ಏರಿತು.
ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ಚಿನ್ನದ ದರವು ತಲಾ 115 ರೂ. ಏರಿಕೆ ಕಂಡು ಹತ್ತು ಗ್ರಾಂಗೆ ಅನುಕ್ರಮವಾಗಿ 18,790 ರೂ. ಮತ್ತು 18,640 ರೂ.ಗೆ ಏರಿತು. ಸವರಿನ್ ಚಿನ್ನದ ದರವು ಕೂಡ 50 ರೂ. ಏರಿಕೆ ಕಂಡು ಎಂಟು ಗ್ರಾಂಗೆ 14,600 ರೂ. ತಲುಪಿತು.
ಮದುವೆ ಸೀಸನ್‌ನಿಂದಾಗಿ ತೀವ್ರ ಮೇಲಕ್ಕೇರಿದ್ದ ಚಿನ್ನದ ದರವು ಬುಧವಾರ ಹತ್ತು ಗ್ರಾಂಗೆ 18,810 ರೂ. ತಲುಪಿತ್ತು.
Subscribe to:
Post Comments (Atom)
No comments:
Post a Comment