VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 16, 2010

ಶಿಕ್ಷಣ ಜಗತ್ತಿನಲ್ಲಿ ಹೊಸ ಬದಲಾವಣೆಗಳಾಗುತ್ತಿದೆ: ಪತ್ರಕರ್ತ ಶಂಶೀರ್,ಬುಡೋಳಿ



ಬಂಟ್ವಾಳ, ಮೇ ೧೫: ದೇಶದಲ್ಲಿಂದು ಶೈಕ್ಷಣಿಕ ಜಗತ್ತಿನಲ್ಲಿ ಅಮೂಲಾಗ್ರವಾದ ಬದಲಾವಣೆಗಳಾಗಿದ್ದು, ವಿದ್ಯಾರ್ಥಿಗಳಿಗೆ ತಮಗೆ ಬೇಕಾದಂತಹ ಇಷ್ಟದ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಲು ಇಂದು ಅವಕಾಶಗಳು ವಿಪುಲವಾಗಿದೆ ಎಂದು ಪತ್ರಕರ್ತ, ವಾರ್ತಾಭಾರತಿ ದೈನಿಕದ ಉಪಸಂಪಾದಕ ಶಂಶೀರ್, ಬುಡೋಳಿ ಹೇಳಿದರು.
ಅವರು ಇಂದು ಸುನ್ನೀ ಸ್ಟುಡೆಂಟ್ ಫೆಡರೇಶನ್ ಮಾಣಿ ವಲಯ ಸಂಘ ಸ್ಫೂರ್ತಿ ಅಭಿಯಾನದ ಪ್ರಯುಕ್ತ ನಡೆದ ವಿದ್ಯಾರ್ಥಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪತ್ರಿಕೆಗಳು ಇವತ್ತು ಯಾವ ರೀತಿ ಶೈಕ್ಷಣಿಕ ಜಗತ್ತಿನಲ್ಲಿ ಬದಲಾವಣೆಗಳಾಗುತ್ತಿದೆ ಎಂಬುದರ ಕುರಿತು ವಿಸ್ತಾರವಾದಂತಹ ಮಾಹಿತಿಗಳನ್ನು ನೀಡುತ್ತಿದೆ. ಮಾತ್ರವಲ್ಲ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವತಿಯಿಂದ ಸಿಗುವ ವಿದ್ಯಾರ್ಥಿ ವೇತನಗಳು, ಶೈಕ್ಷಣಿಕ ಸಾಲ ಸೌಲಭ್ಯಗಳ ಕುರಿತು ಮಾಹಿತಿಗಳನ್ನು ನೀಡುತ್ತಿದೆ. ಶೈಕ್ಷಣಿಕ ಸಮಯದಲ್ಲಿ ಪತ್ರಿಕೆಗಳ ಸಹಾಯವನ್ನು ವಿದ್ಯಾರ್ಥಿಗಳು ಪಡೆಯಬೇಕು. ಮಾಧ್ಯಮ, ಕಾನೂನು, ಶಿಕ್ಷಣ, ಪೊಲೀಸ್ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೊರತೆ ಇದೆ ಎಂದು ಅವರು ಹೇಳಿದರು.
ಅತಿಥಿ ಉಪನ್ಯಾಸ ನೀಡಿದ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಉಪನ್ಯಾಸಕ ಇಕ್ಬಾಲ್ ಮಾಸ್ಟರ್ ಮಾತನಾಡಿ , ವಿದ್ಯಾರ್ಥಿಗಳು ಯಾತಕ್ಕಾಗಿ ಓದುತ್ತಿದ್ದೇನೆಂಬುದನ್ನು ಅರಿತುಕೊಳ್ಳಬೇಕು.ಹಾಗೆಯೇ ನಿರ್ದಿಷ್ಟವಾದ ಗುರಿ ಇದ್ದರೆ ಮಾತ್ರ ಶಿಕ್ಷಣದಲ್ಲಿ ಅಭೂತಪೂರ್ವವಾದುದನ್ನು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು. ಸಮಾಜಕ್ಕೆ ಪೂರಕವಾಗುವ ನೆಲೆಯಲ್ಲಿ, ತನ್ನಿಂದ ಸಮಾಜಕ್ಕಾಗಿ ಒಳಿತಾಗಬೇಕೆಂಬ ಗುರಿ ವಿದ್ಯಾರ್ಥಿಗಿರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಣಿ ಉಸ್ತಾದ್, ಇಬ್ರಾಹಿಂ ಸ‌ಅದಿ, ಅಶ್ರಫ್ ಸಖಾಫಿ ಕಕ್ಕಿಂಜೆ, ಶರೀಫ್ ಸಖಾಫಿ ಮಾಣಿ ಉಪಸ್ಥಿತರಿದ್ದರು.

No comments: