ಹಿಂಸೆಯಲ್ಲಿ ತೊಡಗಿರುವ ಮಾವೊವಾದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕೇಂದ್ರ ಸರಕಾರ ವನ್ನು ಆಗ್ರಹಿಸಿದ್ದಾರೆ.
ನಿರಪರಾಗಳನ್ನು ಕೊಲ್ಲುವುದನ್ನು ಬೆಂಬಲಿ ಸಲು ಸಾಧ್ಯವಿಲ್ಲ. ಮಾವೊವಾದಿಗಳು ಬಡವರ ಪರ ಕೆಲಸ ಮಾಡುವವರಾಗಿದ್ದರೆ ಸತ್ಯಾಗ್ರಹ ನಡೆಸಲಿ. ಅದನ್ನು ಬಿಟ್ಟು ಅಮಾಯಕರನ್ನು
ಕೊಲ್ಲುವುದು ಖಂಡನೀಯ. ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಸಂಪೂರ್ಣ ಅಕಾರ ನೀಡಬೇಕು ಎಂದು ಪೂಜಾರಿ ಆಗ್ರಹಿಸಿದರು.
ಉಡುಪಿ, ಮೇ 28: ಮಂಗಳೂರು ವಿಮಾನ ನಿಲ್ದಾಣದಲ್ಲಿ ಈಗಿರುವ 8,000 ಅಡಿ ಉದ್ದದ ರನ್‌ವೇಯನ್ನು ಮತ್ತೆ 1,000 ಅಡಿಯಷ್ಟು ವಿಸ್ತರಿಸಬೇಕೆಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಮಾನ ನಿಲ್ದಾಣದಲ್ಲಿ ಅಪಘಾತ ತಡೆಯುವ ಸಾಮರ್ಥ್ಯವಿರುವ ಎರೆಸ್ಟರ್ ಸಿಸ್ಟಮ್‌ನ್ನು ಅಗತ್ಯವಾಗಿ ನಿರ್ಮಿಸಬೇಕು ಎಂದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಸಿಗಲಿರುವ ಅಂತಾರಾಷ್ಟ್ರೀಯ ಮಾನ್ಯತೆ ರದ್ದುಗೊಳಿಸಬೇಕೆಂಬ ಒತ್ತಾಯ ಸರಿಯಲ್ಲ. ಇದು ಮಂಗಳೂರಿನ ಅಭಿವೃದ್ಧಿಗೆ ಹಿನ್ನಡೆಯಾ ಗಿ ಪರಿಣಮಿಸಬಹುದು ಎಂದು ಪೂಜಾರಿ ಅಭಿಪ್ರಾಯಪಟ್ಟರು.
ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಧನ ದೊರಕಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ. ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಮೃತರ ಕುಟುಂಬಕ್ಕೆ 1.65ಲಕ್ಷ ಡಾಲರ್(75-76 ಲಕ್ಷ ರೂ.) ಪರಿಹಾರ ನೀಡಬೇಕು. ಅದರ ಒಂದು ಭಾಗವಾಗಿ ಮಧ್ಯಂತರ ಪರಿಹಾರವಾಗಿ ವಿಮಾನಯಾನ ಇಲಾಖೆಯು 10ಲಕ್ಷ ರೂ. ಘೋಷಣೆ ಮಾಡಿದೆ. ಮುಂದೆ ಮೃತರ ಆದಾಯ, ಸಂಬಳ, ಕುಟುಂಬದ ಹಿನ್ನೆಲೆಯನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತದೆ. ಹಾಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳೂ ತಲಾ 2 ಲಕ್ಷ ರೂ. ಪರಿಹಾರ ಧನವನ್ನು ಘೋಷಿಸಿವೆ ಎಂದು ಅವರು ತಿಳಿಸಿದರು.
ವಿಮಾನ ಅಪಘಾತಕ್ಕೆ ನಾಗಾರ್ಜುನ ಸ್ಥಾವರ ಕಾರಣ ಎಂಬುದು ಸುಳ್ಳು. ಹಾಗೆ ಆರೋಪಿಸುವವರು ಮುಂಬೈ ವಿಮಾನ ನಿಲ್ದಾಣವನ್ನೊಮ್ಮೆ ಹೋಗಿ ನೋಡಲಿ. ಅಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಹಲವು ಕೈಗಾರಿಕೆಗಳಿವೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎ.ಗೂರ್, ದ.ಕ.ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಯ್ದಿನ್ ಬಾವಾ, ಮಂಜುನಾಥ ಉದ್ಯಾವರ, ದಿವಾಕರ ಕುಂದರ್, ಅರುಣ್ ಕುವೆಲ್ಲ್ಲೊ, ಹರೀಶ್ ಕಿಣಿ ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment