VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಎಷ್ಟು ಗಳಿಸಿದ್ರಿ ಅಂತ ಘೋಷಿಸಿ: ರಾಜಕಾರಣಿಗಳಿಗೆ ಸವಾಲ್!

ತಮ್ಮ ಸಂಪತ್ತಿನ ಕುರಿತು ಪ್ರಶ್ನೆ ಎತ್ತುತ್ತಿರುವ ರಾಜಕೀಯ ಮುಖಂಡರ ವಿರುದ್ಧ ತಿರುಗಿ ಬಿದ್ದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಾವು ರಾಜಕೀಯ ಸೇರುವ ಮೊದಲು ಮತ್ತು ನಂತರ ಎಷ್ಟು ಆಸ್ತಿ ಹೊಂದಿದ್ದಾರೆಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ಮಾಯಾವತಿಯವರು 88ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆಂಬ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಾಯಾ ಅವರ ಆಸ್ತಿಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿರುವ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಾಯಾವತಿ ಅವರು ತಮ್ಮ ನಾಮಪತ್ರದಲ್ಲಿ ಆದಾಯದ ವಿವರವನ್ನು ಘೋಷಿಸಿದ್ದರು. ಅದಕ್ಕೆ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮಾಯಾ ಆಸ್ತಿಯ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕೆಂದು ಒತ್ತಾಯಿಸಿ,ಪಟ್ಟು ಹಿಡಿದಿದ್ದವು.

ಈ ಕುರಿತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರಾ ಮಿಶ್ರಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ದೇಶದ ರಾಜಕಾರಣಿಗಳಲ್ಲಿ ಮಾಯಾವತಿಯೊಬ್ಬರೇ ತಮ್ಮ ಚಿರ ಮತ್ತು ಚರಾಸ್ತಿಯ ಸೇರಿದಂತೆ ಆದಾಯದ ಬಗ್ಗೆ ಪಾರದರ್ಶಕವಾಗಿ ವಿವರ ನೀಡಿದ ವ್ಯಕ್ತಿಯಾಗಿದ್ದಾರೆಂದು ಹೇಳಿದರು.

ಹಾಗಾಗಿ ಇತರ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಯಾವತಿ ಆದಾಯದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ, ಯಾಕೆಂದರೆ ಅವರು ರಾಜಕೀಯಕ್ಕೆ ಬರುವ ಮುನ್ನ ಮತ್ತು ನಂತರದ ಆದಾಯದ ವಿವರವನ್ನು ಸಂಪೂರ್ಣವಾಗಿ ಘೋಷಿಸಿದ್ದಾರೆ. ಹಾಗೆಯೇ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ರಾಜಕೀಯಕ್ಕೆ ಬರುವ ಮುನ್ನ ಮತ್ತು ನಂತರ ತಾವು ಗಳಿಸಿರುವ ಆದಾಯವನ್ನು ಘೋಷಿಸಲಿ ಎಂದು ಹೇಳಿದರು.

ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತು ಬದುಕುತ್ತಿದ್ದಾರೆ. ಆದರೆ ಅದರ ಮೇಲೆ ಕಲ್ಲೆಸುವ ಕೆಲಸ ಮಾಡಬಾರದು ಎಂದು ತಿರುಗೇಟು ನೀಡಿದ ಮಿಶ್ರಾ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ತಮ್ಮ ಆದಾಯದ ನಿಜಾಂಶವನ್ನು ಮುಚ್ಚಿಟ್ಟು ಇನ್ನೊಬ್ಬರ ಬಗ್ಗೆ ಆರೋಪ ಹಾಕಲು ಮಾತ್ರ ಬರುತ್ತದೆ. ಅವರು ತಾವು ಗಳಿಸಿರುವ ನಿಜ ಆದಾಯ ಎಷ್ಟೆಂಬುದನ್ನು ಘೋಷಿಸುವುದೇ ಇಲ್ಲ ಎಂದು ಆರೋಪಿಸಿದರು.

ಮುಲಾಯಂ ಸಿಂಗ್ ಸೈಕಲ್ ಹೊಡೆಯುತ್ತಿದ್ದರು ಈಗ ಅವರ ಆಸ್ತಿ ಎಷ್ಟು ಗೊತ್ತಾ?: :ಮಾಯಾವತಿ ಆದಾಯದ ಬಗ್ಗೆ ಆರೋಪ ಮಾಡುತ್ತಿರುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ರಾಜಕೀಯಕ್ಕೆ ಕಾಲಿಟ್ಟಾಗ ಕೇವಲ ಸೈಕಲ್‌ವೊಂದನ್ನು ಹೊಂದಿದ್ದರು ಮತ್ತು ಕೆಲವು ಎಕರೆ ಜಮೀನು ಹೊಂದಿದ್ದರು. ಆದರೆ ಈಗ ಮುಲಾಯಂ ಸಿಂಗ್ ಬಿಲಿಯನ್‌ಗಟ್ಟಲೇ ಆಸ್ತಿ ಹೊಂದಿದ್ದಾರೆ. ಅದು ಅವರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿಯೇ ಇದೆ ಎಂದು ಗಂಭೀರವಾಗಿ ಆರೋಪಿಸಿದರು.

ಕಪ್ಪು ಹಣದ ಮಾಹಿತಿಯೂ ಹೊರಬರಲಿ: ಅಕ್ರಮ ಸಂಪತ್ತು, ಆದಾಯದ ಕುರಿತು ಕಿಡಿಕಾರಿದ ಮಿಶ್ರಾ, ವಿದೇಶ ಬ್ಯಾಂಕ್‌ನಲ್ಲಿರುವ ಕಪ್ಪು ಹಣದ ಬಗ್ಗೆಯೂ ನ್ಯಾಷನಲ್ ಡೆಮೋಕ್ರಟಿಕ್ ಅಲೆಯನ್ಸ್ ಮತ್ತು ಆಡಳಿತಾರೂಢ ಯುಪಿಎ ಸರ್ಕಾರ ಯಾಕೆ ಮೌನವಹಿಸಿದೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ ಎಂದರು. ಅಲ್ಲದೇ ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ 50 ಮಂದಿ ಭಾರತೀಯರ ಹೆಸರನ್ನೂ ಯುಪಿಎ ಬಹಿರಂಗಪಡಿಸಲಿ ಎಂದು ಮಾಯಾವತಿ ಆಗ್ರಪಡಿಸಿದ್ದಾರೆಂದು ತಿಳಿಸಿದ ಮಿಶ್ರಾ, ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟವರ ಬಗ್ಗೆ ಜರ್ಮನ್ ಸರ್ಕಾರ ಕೆಲವು ಭಾರತೀಯರ ಹೆಸರನ್ನು ಭಾರತಕ್ಕೆ ನೀಡಿದೆ ಎಂದು ಹೇಳಿದರು.

No comments: