
ಲಂಡನ್, ಮೇ 28: ಅನಿವಾಸಿ ಭಾರತೀಯ ವೈದ್ಯರಾಗಿರುವ ಕರ್ನಾಟಕ ಮೂಲದ ಡಾ. ನೀರಜ್ ಪಾಟೀಲ್ ಬ್ರಿಟನ್‌ನ ಲ್ಯಾಂಬೆತ್ ನಗರಕ್ಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಸಕ್ತ ಇಲ್ಲಿನ ಸೈಂಟ್ ಥಾಮಸ್ ಆಸ್ಪತ್ರೆಯ ಗವರ್ನರ್ ಆಗಿರುವ ನೀರಜ್, ‘ಎ ಆ್ಯಂಡ್ ಇ’ ನ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಕಮಲಾಪುರದಲ್ಲಿ ಹುಟ್ಟಿ ಬೆಳೆದಿದ್ದ ನೀರಜ್ ಪಾಟೀಲ್, 1992ರಲ್ಲಿ ಗುಲ್ಬರ್ಗದ ಎಚ್.ಎಂ.ಆರ್. ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪೂರ್ಣಗೊಳಿಸಿದ್ದರು. ಬಳಿಕ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದ್ದರು.
ಇಂಗ್ಲೆಂಡ್‌ನಲ್ಲಿ 14 ವರ್ಷಗಳ ಕಾಲ ವಾಸ್ತವ್ಯ ಹೂಡಿರುವ ನೀರಜ್, ವಿಶ್ವದ ಮಾನ್ಯತೆ ಪಡೆದ ಇನ್ನೋರ್ವ ಭಾರತೀಯ ನಾಗಿದ್ದಾರೆ.ನೀರಜ್ ಕೌನ್ಸಿಲರ್ ಹಾಗೂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ನೀರಜ್ ಪಾಟೀಲ್‌ರಿಗೆ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ‘ಆರ್ಯಭಟ’ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ನೀರಜ್ ಪಾಟೀಲ್ ಕರ್ನಾಟಕದಲ್ಲಿ ರಾಜಕೀಯವಾಗಿ ಸಕ್ರಿಯವಾಗಿರುವ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
No comments:
Post a Comment