VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಗುಜರಾತ್ ಗಲಭೆಗೆ ಮುನ್ನ ನಡೆದಿತ್ತು ರಹಸ್ಯ ಸಭೆ !

ಅಹ್ಮದಾಬಾದ್,ಮೇ 19: ನ್ಯಾಯ ಮತ್ತು ಶಾಂತಿಗಾಗಿನ ನಾಗರಿಕ (ಸಿಜೆಪಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಟೀಸ್ತಾ ಸೆಟಲ್ವಾಡ್ ಇತ್ತೀಚೆಗೆ ಗುಜರಾತ್ನ ಐಪಿಎಸ್ ಅಧಿಕಾರಿ ರಾಹುಲ್ ಶರ್ಮಾ ಸಿದ್ಧಪಡಿಸಿದ ದೂರವಾಣಿ ಕರೆ ದಾಖಲೆಗಳನ್ನು ಹಾಗೂ ಸಂಪಾದಕರ ಸಂಘ ಹಾಗೂ ಮಾನವತೆಯ ವಿರುದ್ಧ ಅಪರಾಧಗಳ ಕುರಿತ ಪ್ರಜ್ಞಾವಂತ ಪೌರರ ಮಂಡಳಿಯು ಸಿದ್ಧಪಡಿಸಿದ ವರದಿಗಳನ್ನು 2002ರ ಗುಜರಾತ್ ಗಲಭೆಯ ಬಗ್ಗೆ ವಿಚಾರಣೆ ನಡೆಸುತ್ತಿರುವ ನಾನಾವತಿ-ಮೆಹ್ತಾ ಆಯೋಗದ ಮುಂದೆ ಸಲ್ಲಿಸಿದ್ದಾರೆ.

ಗುಜರಾತ್ನಲ್ಲಿ ಗಲಭೆ ಭುಗಿಲೇಳುವುದಕ್ಕೆ ಮುನ್ನ, ಫೆಬ್ರವರಿ 2,2008ರ ಬೆಳಗ್ಗೆ ಡಿಜಿಪಿ ಕೆ.ಚಕ್ರವರ್ತಿ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಶಾಸಕಿ ಮಾಯಾ ಕೊಡ್ನಾನಿ ಮತ್ತು ವಿಶ್ವಹಿಂದೂಪರಿಷತ್, ಭಜರಂಗದಳದ ಕೆಲವು ನಾಯಕರ ಉಪಸ್ಥಿತಿಯಲ್ಲಿ ರಹಸ್ಯ ಸಭೆಯೊಂದು ನಡೆದಿರುವ ಬಗ್ಗೆ ಈ ದೂರವಾಣಿ ಕರೆಗಳು ಸಾಕ್ಷಾಧಾರಗಳನ್ನು ಒದಗಿಸುತ್ತಿವೆಯೆಂದು ಸಿಜೆಪಿ ಹೇಳಿದೆ.

ಈ ದೂರವಾಣಿಕರೆ ದಾಖಲೆಗಳ ಬಗ್ಗೆ ವಿಸ್ತೃತ ವಿಶ್ಲೇಷಣೆಯೊಂದಿಗೆ ತನಿಖೆಯಾಗಬೇಕೆಂದು ಅದು ಆಗ್ರಹಿಸಿದೆ.
ಅಹ್ಮದಾಬಾದ್ ಮತ್ತು ಗಾಂಧಿನಗರದ ನಡುವೆ ಎಲ್ಲೋ ಒಂದೆಡೆ ಈ ಸಭೆ ನಡೆದಿತ್ತು ಎಂದಿರುವ ಸಿಜೆಪಿ, ಅಹ್ಮದಾಬಾದ್ನಲ್ಲಿರುವ ನ್ಯಾಯಾಧೀಶರ ಬಂಗಲೆ ಸಮೀಪವೇ ಇಂತಹ ಇನ್ನೊಂದು ಸಭೆ ನಡೆದಿರಬಹುದೆಂದು ಅದು ಹೇಳಿದೆ.

ತನ್ನ ಈ ವಾದಕ್ಕೆ ಪೂರಕವಾಗಿ ಸಿಜೆಪಿಯು ಪ್ರಜ್ಞಾವಂತ ಪೌರರ ನ್ಯಾಯಾಧೀಕರಣ ವರದಿಗಳ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಿದೆ.ಹತ್ಯೆಗೀಡಾದ ಮಾಜಿ ಹರೇನ್ ಪಾಂಡ್ಯ ಫೆಬ್ರವರಿ 27,2002ರಂದು ಸಂಜೆ ಸಭೆ ನಡೆದಿರುವುದಾಗಿ ಹೇಳಿಕೆ ನೀಡಿರುವುದನ್ನು ಈ ವರದಿಯಲ್ಲಿ ತಿಳಿಸಲಾಗಿತ್ತು.

ಅಹ್ಮದಾಬಾದ್ನ ಗುಲ್ಬರ್ಗ್ ಸೊಸೈಟಿ ಹಾಗೂ ನರೋಡಾದ ಕೆಲವು ಪ್ರದೇಶಗಳಲ್ಲಿ ಭೀಕರ ನರಮೇಧ ನಡೆದ ದಿನವಾದ 2002ರ ಫೆಬ್ರವರಿ 28ರಂದುಮುಖ್ಯಮಂತ್ರಿ ಕಾರ್ಯಾಲಯದಿಂದ ನಗರ ಪೊಲೀಸ್ ಆಯುಕ್ತರಿಗೆ 15 ಕರೆಗಳನ್ನು ಮಾಡಲಾಗಿರುವುದನ್ನೂ ಮತ್ತು ಪೊಲೀಸ್ ಆಯುಕ್ತ ಅಂದು ರಾತ್ರಿ 11:00 ಗಂಟೆಯ ಬಳಿಕ ಹೊರಗೆ ತೆರಳದಿರುವುದೂ ಈ ಕರೆಗಳ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ.

ಗಲಭೆಕೋರರ ವಿರುದ್ಧ ಯಾವುದೇ ಕಾರ್ಯಾ ಚರಣೆಗೂ ಇಳಿಯದಂತೆ ಪೊಲೀಸರಿಗೆ ಮೇಲಿನಿಂದ ಆದೇಶಬಂದಿರುವುದನ್ನು ಇದು ಸ್ಪಷ್ಟವಾಗಿ ತೋರಿಸಿ ಕೊಡುತ್ತದೆಯೆಂದು ಸಿಜೆಪಿ ತಿಳಿಸಿದೆ.
ಆರೋಗ್ಯ ಸಚಿವ ಅಶೋಕ್ ಭಟ್, ಸಹಾಯಕ ಗೃಹ ಸಚಿವ ಗೊರ್ಧಾನ್ ಝಡಾಫಿಯಾ, ಗೃಹ ಕಾರ್ಯದರ್ಶಿ ಅಶೋಕ್ ನಾರಾಯಣ್, ಪೊಲೀಸ್ ಮಹಾನಿರ್ದೇಶಕ ಕೆ. ಚಕ್ರವರ್ತಿ, ಗಲಭೆ ಭುಗಿಲೆದ್ದ ಸ್ಥಳಗಳಲ್ಲಿ ಕರ್ತವ್ಯದಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವಾರು ಪ್ರಮುಖರು ಅಂದು ಮಾಡಿದ ದೂರವಾಣಿ ಕರೆಗಳ ದಾಖಲೆಗಳನ್ನು ಸೆಟಲ್ವಾಡ್ ಆಯೋಗಕ್ಕೆ ಸಲ್ಲಿಸಿದ್ದಾರೆ.

ಈ ಎಲ್ಲಾ ಸಾಕ್ಷಾಧಾರಗಳು ಗುಜರಾತ್ ಗಲಭೆಗಳು ಒಂದು ಪೂರ್ವ ಯೋಜಿತ ಸಂಚೆಂಬುದನ್ನು ಸಾಬೀತುಪಡಿಸುತ್ತದೆಯೆಂದು ಸಿಜೆಪಿ ಪ್ರತಿಪಾದಿಸಿದೆ.
ಏತನ್ಮಧ್ಯೆ ಗುಜರಾತ್ನ ಮಾಜಿ ಸಚಿವ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಜಸ್ಪಾಲ್ ಸಿಂಗ್ ಸುಪ್ರೀಂಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಪತ್ರವೊಂದನ್ನು ಬರೆದು, ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರ 61 ಮಂದಿಯ ವಿರುದ್ಧ ಝಕಿಯ್ಯಿ ಜಾಫ್ರಿ ನೀಡಿದ ದೂರಿನ ಬಗ್ಗೆ ತನಿಖೆ ನಡೆಸುತ್ತಿರುವ ಆರ್.ಕೆ. ರಾಘವನ್ ನೇತೃತ್ವದ್ ವಿಶೇಷ ತನಿಖಾ ತಂಡವನ್ನು ಪುನಾರಚಿಸುವಂತೆ ಕೋರಿದ್ದಾರೆ.

ಗುಜರಾತ್ನ ಪೊಲೀಸ್ ಅಧಿಕಾರಿಗಳಾದ ಗೀತಾ ಜೋಹ್ರಿ ಮತ್ತು ಶಿವಾನಂದ ಝಾರನ್ನು ತನಿಖಾ ಕಾರ್ಯದಿಂದ ದೂರವಿರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಹೊರತಾಗಿಯೂ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಘವನ್ರ ನಿರ್ಧಾರವನ್ನು ಜಸ್ಪಾಲ್ ಸಿಂಗ್ ಪ್ರಶ್ನಿಸಿದ್ದಾರೆ.

ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದುದಕ್ಕಾಗಿ ಗೀತಾ ಜೋಹ್ರಿಯವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಸಂದರ್ಭದಲ್ಲಿ ಗಲಭೆಕೋರರಿಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯ ಪತ್ನಿ ಝಕಿಯ್ಯಿ ಸಲ್ಲಿಸಿದ ದೂರಿನಲ್ಲಿ ಶಿವಾನಂದ್ರನ್ನು ಆರೋಪಿಯಾಗಿ ಹೆಸರಿಸಲಾಗಿದೆ ಎಂದು ಜಸ್ಪಾಲ್ ಹೇಳಿದ್ದಾರೆ.

No comments: