VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 21, 2010

ಹಾಲಪ್ಪನ ನಂತರ ಪ್ರತಾಪಪ್ಪನ ಪ್ರತಾಪ


ಕಾರವಾರ, ಮೇ 21 : ಸ್ನೇಹಿತನ ಹೆಂಡತಿಯ ಮಾನಭಂಗ ಮಾಡಿ ಸಿಕ್ಕಿಬಿದ್ದಿರುವ ಹರತಾಳು ಹಾಲಪ್ಪ ನ ಕೇಸು ಹಳತಾಗುವ ಮೊದಲೇ ಮತ್ತೊಂದು ಇಂಥದೇ ಪ್ರಕರಣ ಕಾರವಾರ ದಲ್ಲಿ ದಾಖಲಾಗಿದೆ.ಸ್ನೇಹಿತನ ಹೆಂಡತಿಗೆ ಮತ್ತುಬರಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ತಾಲೂಕಿನ ಯುವ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಂಧಿತರಾಗಿದ್ದಾನೆ. ಹಾಲಪ್ಪ ಪ್ರಕರಣ ಬಿಜೆಪಿಯನ್ನು ಮುಜುಗರಕ್ಕೆ ಸಿಕ್ಕಿಸಿದ್ದರೆ, ಈ ಪ್ರಕರಣ ಕಾಂಗ್ರೆಸ್ಸಿನ ವರ್ಚಸ್ಸಿಗೆ ಮಸಿ ಬಳಿದಂತಾಗಿದೆ.ಘಟನೆಯ ಹಿನ್ನೆಲೆ : ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯ ಗಂಡನ ಗೆಳೆಯ ಪ್ರತಾಪ್ ಸಿಂಗ್. ಮಹಿಳೆಯ ಗಂಡ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಉದ್ಯೋಗದಲ್ಲಿರುವುದರಿಂದ ಮತ್ತು ಅವರ ಮನೆಯಲ್ಲಿ ಬೇರೆ ಗಂಡಸರು ಇಲ್ಲದ್ದರಿಂದ ಅವರ ಮನೆ ನಿರ್ಮಾಣದ ಉಸ್ತುವಾರಿ ಪ್ರತಾಪ್ ನೋಡಿಕೊಳ್ಳುತ್ತಿದ್ದ.ಮನೆ ನಿರ್ಮಾಣ ಕೆಲಸಕ್ಕಾಗಿ ಸ್ನೇಹಿತನ ಮನೆಗೆ ಹೋಗುತ್ತಿದ್ದ ಪ್ರತಾಪ್, ಒಂದು ದಿನ ಸ್ನೇಹಿತನ ಹೆಂಡತಿಗೆ ಮತ್ತು ಬರಿಸಿ ಅತ್ಯಾಚಾರವೆಸಗಿದ್ದಾನೆ. ಅಷ್ಟು ಮಾತ್ರವಲ್ಲದೆ, ಅತ್ಯಾಚಾರ ಮಾಡಿದ್ದನ್ನು ಚಿತ್ರಿಸಿ ಸಿಡಿ ತಯಾರಿಸಬೇಕೆಂದು ತನ್ನ ಇತರ ಸ್ನೇಹಿತರಿಗೆ ಕಳಿಸಿದ್ದಾನೆ. ಆ ಸ್ನೇಹಿತರು ಅಶ್ಲೀಲ ವಿಡಿಯೋ ತುಣುಕನ್ನು ಊರಿಗೆಲ್ಲ ತಿಳಿಯುವಂತೆ ಮಾಡಿದ್ದಾರೆ.ಅತ್ಯಾಚಾರ ಕೆಲ ತಿಂಗಳುಗಳ ಹಿಂದೆ ನಡೆದಿದ್ದು, ಅಶ್ಲೀಲ ವಿಡಿಯೋ ಇತ್ತೀಚೆಗೆ ಮಹಿಳೆಯ ಸಂಬಂಧಿಕರಿಗೂ ದಕ್ಕಿದೆ. ಕೂಡಲೆ ಅವರು ಪೊಲೀಸರಿಗೆ ದೂರು ನೀಡಬೇಕೆಂದು ಆಗ್ರಹಿಸಿದ್ದಾರೆ. ದೂರು ನೀಡಿದ ಮೇಲೆ ತಲೆಮರೆಸಿಕೊಂಡಿದ್ದ ಪ್ರತಾಪ್ ಸಿಂಗ್ ನನ್ನು ಕಾರವಾರ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದನ್ನು ಅತ್ಯಾಚಾರ ಪ್ರಕರಣವೆಂದು ದಾಖಲಿಸಿಯಾಗಿದೆಯಾದರೂ, ವಿಡಿಯೋ ತುಣುಕನ್ನು ನೋಡಿದವರು ಇಬ್ಬರೂ ಸಮ್ಮತಿಸಿಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದಿದ್ದಾರೆ. ಪೊಲೀಸರು ಅತ್ಯಾಚಾರ ನಡೆಸಿರುವುದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

No comments: