VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 15, 2010

ಮ೦ಗಳೂರು: ಶ್ರೀರಾಮ ಸೇನೆ ನಿಷೇಧಕ್ಕೆ ಒತ್ತಾಯಿಸಿ ಪಿಎಫ್‌ಐ ಧರಣಿ


ಮಂಗಳೂರು, ಮೇ 14: ಲಕ್ಷಾಂತರ ರೂ. ನೀಡಿದಲ್ಲಿ ಎಲ್ಲಿ ಬೇಕಾದರೂ ಗಲಭೆಗಳನ್ನು ನಡೆಸುವ ವ್ಯವಸ್ಥೆ ಇದೆ ಎಂಬು ದನ್ನು ಚಾನೆಲೊಂದರ ಕುಟುಕು ಕಾರ್ಯಾಚರಣೆಯೊಂದರಲ್ಲಿ ಹೇಳಿಕೊಂಡ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮತ್ತಾತನ ಸಹಚರರ ಬಂಧನಕ್ಕೆ ಹಾಗೂ ಶ್ರೀರಾಮ ಸೇನೆಯ ನಿಷೇಧಕ್ಕೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ಬಳಿಕ ಧರಣಿನಿರತರು ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಗಹ ಸಚಿವರಿಗೆ ಮನವಿ ಸಲ್ಲಿಸಿದರು.ತೆಹಲ್ಕಾ ಮತ್ತು ಹೆಡ್‌ಲೈನ್ಸ್ ಟುಡೇ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮುತಾಲಿಕ್‌ನ ಮುಖವಾಡ ಬಯಲಾಗಿ ರುವುದು ಇದು ಮೊದಲನೆಲ್ಲ. ಈ ಹಿಂದೆ ಉಡುಪಿಯಲ್ಲಿ ನಡೆದ ಸಾರ್ವಜ ನಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಶಸ್ತ್ರಗಳನ್ನು ಹಿಡಿಯಬೇಕು ಎಂದು ಹೇಳಿದ್ದರೆ, ಮೈಸೂರಿ ನಲ್ಲಿ ಕೋಮು ಪ್ರಚೋದಿತ ಭಾಷಣ ಮಾಡಿ ಸಿದ್ದರಿಂದ ಸೇನೆಯ ಕಾರ್ಯಕರ್ತರು ಹಂದಿ ತಲೆಯ ನ್ನು ಹಾಕಿ ಗಲಭೆ ಸಷ್ಟಿಸಲು ಯತ್ನಿಸಿದ್ದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಳಿಗಾಗಿ 900 ಮಂದಿಯ ಆತ್ಮಹತ್ಯೆ ದಳ ರಚಿಸಿ ತರಬೇತಿ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದನು. ಹುಬ್ಬಳ್ಳಿಯ ಕೋಟಾ, ಮಂಗಳೂರಿನಲ್ಲಿ ಪಬ್ ದಾಳಿ, ಕರ್ನಾಟಕದ ಹಲೆವೆಡೆ ಚರ್ಚ್ ಮೇಲೆ ದಾಳಿ ಹೀಗೆ ಪ್ರಮೋದ್ ಮುತಾಲಿಕ್ ಮತ್ತಾತನ ಸಹಚರರು ಹಿಂದುತ್ವದ ರಕ್ಷಣೆಯ ಹೆಸರಿನಲ್ಲಿ ಶ್ರೀರಾಮ ಸೇನೆ ಎಂಬ ಸಂಘ ಟನೆ ಕಟ್ಟಿಕೊಂಡು ಸಮಾಜ ಬಾಹಿರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ತೆಹಲ್ಕಾ ಕಾರ್ಯಾಚರಣೆಯಿಂದಾಗಿ ಬೆಂಗಳೂರು, ಮಂಗಳೂರು, ಮೈಸೂರು ಗಳಲ್ಲಿ ಪ್ರಮೋದ್ ಮುತಾಲಿಕ್ ಮತ್ತಾತನ ಸಹಚರರಾದ ಪ್ರಸಾದ್ ಅತ್ತಾವರ, ಹಿತೇಶ್ ಉಡುಪಿ, ವಸಂತ ಕುಮಾರ್ ಭವಾನಿ ಇವರೆಲ್ಲರೂ ಗಲಭೆ ಸಷ್ಟಿಸಲು 60 ಲಕ್ಷ ರೂ.ಗಳ ಬೇಡಿಕೆ ಇಟ್ಟಿರುವುದು ಬೆಳಕಿ ಗೆ ಬಂದಿದೆ. ಇದು ದೇಶದ್ರೋಹಿ ಕತ್ಯವಾಗಿದ್ದು, ತಕ್ಷಣ ಇವರನ್ನೆಲ್ಲಾ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸುಳ್ಯ ವಲಯಾಧ್ಯಕ್ಷ ಶಾಫಿ ಬೆಳ್ಳಾರೆ, ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಪ್ರಮೋದ್ ಮುತಾಲಿಕ್‌ನ ಮೇಲೆ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮಗಿಲ್ಲ. ಯಾಕೆಂದರೆ ರಾಜ್ಯ ಬಿಜೆಪಿ ಸರಕಾರ ಆತನ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದಿರುವುದು ಸರಕಾರ ಮುತಾಲಿಕ್‌ನ ರಕ್ಷಣೆಗೆ ನಿಂತಿರುವುದಕ್ಕೆ ಸಾಕ್ಷಿ. -ಅನ್ವರ್ ಸಾದಾತ್ (ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ)
ಮುತಾಲಿಕ್‌ನದ್ದು ಶ್ರೀರಾಮ ಸೇನೆ ಅಲ್ಲ. ಗೂಂಡಾ ಸೇನೆ. ಅದು ಧರ್ಮ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಅಂಥವರನ್ನು ಬಂಧಿಸಿ ಜೈಲಿಗೆ ತಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. -ಅಬ್ದುರ್ರಝಾಕ್ ಕೆಮ್ಮಾರ (ಪಿಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ)

No comments: