VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 15, 2010

ಬೆ೦ಗಳೂರು: ಶ್ರೀರಾಮ ಸೇನೆ ನಿಷೇಧಿಸಿ: ಜಿ.ಎನ್. ನಾಗರಾಜ್

ದೇಶದ್ರೋಹಿ ಪ್ರಮೋದ್ ಮುತಾಲಿಕ್‌ನನ್ನು ಬಂಧಿಸಿ
ಬೆಂಗಳೂರು, ಮೇ 14: ಟಿವಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸಮಾಜದಲ್ಲಿ ಗಲಭೆ ಸೃಷ್ಟಿಸಲು ಹಣ ಪಡೆಯುತ್ತಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ದೇಶದ್ರೋಹಿ. ಆತನನ್ನು ತಕ್ಷಣವೇ ಬಂಧಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಅಟ್ಟ ಹಾಸ ಮೆರೆಯುತ್ತಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‌ರ ಅಸಲಿ ಮುಖವಾಡ ಬಯಲಾ ಗಿದೆ. ಹಣ ಪಡೆದು ಸಮಾಜದ ಸ್ವಾಸ್ಥ ಕದಡುವ ಇಂತಹ ವ್ಯಕ್ತಿಗಳು ಮತ್ತು ಅವರ ಸಹಚರರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ ಮುತಾಲಿಕ್ ಕೈವಾಡವಿರುವ ಶಂಕೆ ಮೂಡುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಪ್ರಮೋದ್ ಮುತಾಲಿಕ್‌ನ ಎಲ್ಲ ಸಮಾಜ ವಿರೋಧಿ ಕೃತ್ಯಗಳಿಗೆ ಸರಕಾರದ ನೇರ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತನಗೆ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಮುತಾಲಿಕ್‌ರ ನಿಜಬಣ್ಣ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನೈತಿಕತೆ ಇಲ್ಲ; ರಾಜ್ಯದ ಗಣಿ ಸಂಪನ್ಮೂಲ ಲೂಟಿ ಮಾಡುವವರಿಗೆ ತನ್ನ ವಿರುದ್ಧ ಮಾತನಾ ಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ರೆಡ್ಡಿ ಸಹೋದರರ ರೀತಿ ಯಲ್ಲಿ ತಾನು ಯಾರಿಂದಲೂ ಪಿಗ್ಮಿ ಸಂಗ್ರಹಿಸುತ್ತಿಲ್ಲ ಎಂದು ರೆಡ್ಡಿ ಸಹೋದರರಿಗೆ ತಿರುಗೇಟು ನೀಡಿದರು. ವಿನಾಕಾರಣ ತನ್ನ ವಿರುದ್ಧ ಗಣಿ ಉದ್ಯಮಿ ರಾಹುಲ್ ಬಲ್ಡೋಟ ಅವರಿಂದ ಹಣ ಪಡೆದಿದ್ದಾರೆಂಬ ಆರೋಪ ಮಾಡಿರುವ ರೆಡ್ಡಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು.
ಶ್ರೀರಾಮ ಸೇನೆ ನಿಷೇಧಿಸಿ: ಜಿ.ಎನ್. ನಾಗರಾಜ್
ಬೆಂಗಳೂರು, ಮೇ 14: ಹಣ ಪಡೆದು ಗಲಭೆ ಹುಟ್ಟು ಹಾಕುವ ಪ್ರಮೋದ್ ಮುತಾಲಿಕ್ ಷಡ್ಯಂತ್ರ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಆತನನ್ನು ಕೊಡಲೇ ಬಂಧಿಸಬೇಕು ಹಾಗೂ ಸಮಾಜಘಾತಕ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕು ಎಂದು ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ್ ಆಗ್ರಹಿಸಿದ್ದಾರೆ.
ಹಣ ಪಡೆದು ಗಲಭೆ ಸೃಷ್ಟಿಸುವ ಮುತಾಲಿಕ್ ಮತ್ತವನ ಗೂಂಡಾಪಡೆಯ ಬಣ್ಣ ಖಾಸಗಿ ಸುದ್ದಿ ವಾಹಿನಿಯಲ್ಲಿ ಬಯಲಾದ ಹಿನ್ನೆಲೆಯಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಜಂಟಿಯಾಗಿ ಇಂದು ಕಾರ್ಪೊರೇಶನ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮುತಾಲಿಕ್ ಮತ್ತು ಆತನ ಸಹಚರರು ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದು ಇದೇ ಮೊದಲ ಲ್ಲ. ಇದಕ್ಕೂ ಮುಂಚೆ ಅನೇಕ ಬಾರಿ ಅವರಿಂದ ಇಂತಹ ಅನೇಕ ಪ್ರಯತ್ನಗಳು ನಡೆದಿವೆ. ಸರಕಾರದ ಬೆಂಬಲ ಮತ್ತು ಕೃಪಕಟಾಕ್ಷದಿಂದ ಅವರ ಮೇಲೆ ಯಾವ ಕ್ರಮವೂ ಜರಗಿಸಲಾಗಿಲ್ಲ. ಈಗ ಬಹಿರಂಗಗೊಂಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಬೇಕು ಮತ್ತು ಶ್ರೀರಾಮ ಸೇನೆ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಪೊಲೀಸ್ ಮತ್ತು ಸಿಐಡಿ ಮೇಲೆ ಸರಕಾರದ ಒತ್ತಡ ಹೆಚ್ಚಾಗಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.
ಶ್ರೀರಾಮ ಸೇನೆಯಂಥ ದೇಶದ್ರೋಹಿ, ಮನುಷ್ಯ ದ್ವೇಷಿ ಸಂಘಟನೆಗಳು ಮತ್ತು ಅದರ ಪುಢಾರಿ ನಾಯಕರನ್ನು ಬೆಂಬಲಿಸುತ್ತ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನಕಾರರು ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಎನ್.ಎಲ್. ಭರತ್ ರಾಜ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಗೌರಮ್ಮ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ, ದಸಂಸ(ಅಂಬೇಡ್ಕರ್‌ವಾದ)ದ ರಾಜ್ಯ ಮುಖಂಡ ಅಲಸೂರು ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

No comments: