ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಅಮೆರಿಕದ ಸಾರಿಗೆ ಮತ್ತು ವಿಪತ್ತು ನಿರ್ವಹಣಾ ಪರಿಣಿತರ ತಂಡ ಹಾಗೂ ಬೋಯಿಂಗ್ ಸಂಸ್ಥೆಯ ಅಧಿಕಾರಿಗಳು ಭಾರತದತ್ತ ಧಾವಿಸಿದ್ದಾರೆ.
ನವದೆಹಲಿ (ಪಿಟಿಐ): ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಅಮೆರಿಕದ ಸಾರಿಗೆ ಮತ್ತು ವಿಪತ್ತು ನಿರ್ವಹಣಾ ಪರಿಣಿತರ ತಂಡ ಹಾಗೂ ಬೋಯಿಂಗ್ ಸಂಸ್ಥೆಯ ಅಧಿಕಾರಿಗಳು ಭಾರತದತ್ತ ಧಾವಿಸಿದ್ದಾರೆ.
ಅಮೆರಿಕದ ನ್ಯಾಷನಲ್ ಟಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (ಎನ್‌ಟಿಎಸ್‌ಬಿ) ವಿಮಾನ ಅಪಘಾತಗಳ ಬಗ್ಗೆ ತನಿಖೆ ನಡೆಸುವ ಸ್ವತಂತ್ರ ಸಂಸ್ಥೆಯಾಗಿದೆ. ಅಮೆರಿಕದಲ್ಲಿ ಸಂಭವಿಸುವ ಪ್ರತಿ ವಿಮಾನ ಅಪಘಾತದ ಬಗ್ಗೆಯೂ ಈ ಸಂಸ್ಥೆ ಸ್ವತಂತ್ರವಾಗಿ ತನಿಖೆ ನಡೆಸುತ್ತದೆ. ಭವಿಷ್ಯದಲ್ಲಿ ಇಂತಹ ದುರಂತ ತಡೆಯುವುದಕ್ಕೆ ಅಗತ್ಯವಾದ ಶಿಫಾರಸುಗಳನ್ನೂ ಈ ತಂಡದಲ್ಲಿರುವ ಪರಿಣಿತರು ನೀಡುತ್ತಾರೆ. ಇದೀಗ ಈ ಪರಿಣಿತರೇ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಪಘಾತಕ್ಕೆ ತುತ್ತಾಗಿರುವುದು ಬೋಯಿಂಗ್ ಸಂಸ್ಥೆಯ 737 ವಿಮಾನ. ಹೀಗಾಗಿ ಈ ಸಂಸ್ಥೆಯ ಪರಿಣಿತರ ತಂಡವೊಂದು ಸಹ ತನಿಖೆಗಾಗಿ ಭಾರತಕ್ಕೆ ಆಗಮಿಸುತ್ತಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುವ ಅನಾಹುತಗಳ ನಿರ್ವಹಣಾ ಸಂಸ್ಥೆಯಾಗಿರುವ ಕೆನ್ಯಾನ್ ಇಂಟರ್‌ನ್ಯಾಷನಲ್ ಎಮರ್ಜೆನ್ಸಿ ಸರ್ವೀಸಸ್‌ನ ನಾಲ್ವರು ಸದಸ್ಯರ ತಂಡ ಸಹ ಪರಿಹಾರ ಕಾರ್ಯಗಳಲ್ಲಿ ಸಹಕರಿಸಲು ಭಾರತಕ್ಕೆ ಬರುತ್ತಿದೆ ಎಂದು ಏರ್ ಇಂಡಿಯಾದ ವಕ್ತಾರರಾದ ಹರ್‌ಪ್ರೀತ್ ಸಿಂಗ್ ಮುಂಬೈಯಲ್ಲಿ ತಿಳಿಸಿದ್ದಾರೆ.
May 23, 2010
Subscribe to:
Post Comments (Atom)
No comments:
Post a Comment