VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ಮಂಗಳೂರು ವಿಮಾನ ಅಪಘಾತ ಸಂತ್ರಸ್ತರ ಸಹಾಯಕ್ಕೆ ಎಸ್‌ಎಟಿ

*ಮಂಗಳೂರು, ಮುಂಬೈ, ಕಲ್ಲಿಕೋಟೆ, ಚೆನ್ನೈಗಳಲ್ಲಿ ಸಹಾಯವಾಣಿ
* ಗಾಯಾಳುಗಳ ಸಹಾಯಕ್ಕಾಗಿ ‘ಏಂಜೆಲ್ಸ್ ಆಫ್ ಏರ್ ಇಂಡಿಯಾ’


ಮಂಗಳೂರು, ಮೇ 23: ಮಂಗಳೂರು ವಿಮಾನ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಅಗತ್ಯ ಸಹಾಯ ನೀಡಲು ಏರ್‌ಇಂಡಿಯಾ, ಸಲಹೆಗಾರರ ತಂಡವೊಂದನ್ನು ರಚಿಸಿದೆ.
ದುರಂತದಲ್ಲಿ ಬದುಕುಳಿದವರಿಗೆ ಮತ್ತು ಮೃತಪಟ್ಟ ಕುಟುಂಬದವರಿಗೆ ಎಸ್‌ಎಟಿ (ಸ್ಟೆಷಲ್ ಅಸಿಸ್ಟೆಂಟ್ಸ್ ಟೀಮ್) ಎಂಬ ವಿಭಾಗವನ್ನು ರಚಿಸಲಾಗಿದೆ.

ನಿನ್ನೆ ಮಂಗಳೂರಿಗೆ ದುಬೈಯಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತಕ್ಕೊಳಗಾಗಿ 158 ಪ್ರಯಾಣಿಕರು ಮೃತಪಟ್ಟು, 8 ಮಂದಿ ಬದುಕುಳಿದಿದ್ದರು.
‘ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಹಾಯ ಮಾಡಲು ನಾವು ಪ್ರಥಮ ಆದ್ಯತೆ ನೀಡುತ್ತೇವೆ’ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರಿಗೆ ಏರ್ ಇಂಡಿಯಾದ ‘ತುರ್ತು ಪ್ರತಿಕ್ರಿಯಾ ತಂಡ’ವನ್ನು ಕೂಡ ಕಳುಹಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣ ಮತ್ತು ಮಂಗಳೂರು ನಗರದಲ್ಲಿ ಸ್ಥಳೀಯ ಸಂಯೋಜಕ ಕೇಂದ್ರಗಳನ್ನು ತೆರೆಯಲಾಗಿದೆ.

‘ವಿಶೇಷ ಸಹಾಯಕ ತಂಡ’ವನ್ನು ಸಂತ್ರಸ್ತ ಕುಟುಂಬ ಮತ್ತು ಬದುಕುಳಿದವರಿಗೆ ನೆರವು ನೀಡಲು ನಿಯೋಜಿಸಲಾಗಿದೆ. ಎಂದು ಏರ್ ಇಂಡಿಯಾ ಹೇಳಿದೆ.
‘ಏರ್‌ಲೈನ್ಸ್ ಸಮಾಲೋಚನಾ ಕಲಾಪಗಳನ್ನು ಏರ್ಪಡಿಸಲು ಪ್ರಯತ್ನಿಸುತ್ತಿವೆ.

ತಜ್ಞರನ್ನು ಒಳಗೊಂಡ ಆ ಸಮಾಲೋಚನಾ ತಂಡದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿರುತ್ತೇವೆ’ ಎಂದು ಏರ್ ಇಂಡಿಯಾದ ವಕ್ತಾರೆ ಹರ್ಪೀತ್ ಸಿಂಗ್ ಇಂದು ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದುರಂತದಲ್ಲಿ ಗಾಯಗೊಂಡು ಬದುಕುಳಿದಿರುವವರು ‘ಏಂಜೆೆಲ್ಸ್ ಆಫ್ ಏರ್ ಇಂಡಿಯಾ’ ಮತ್ತು ಸ್ಥಳೀಯ ವೈದ್ಯರ ಆಶ್ರಯದಲ್ಲಿ ಇದ್ದಾರೆ ಎಂದವರು ಮಾಹಿತಿ ನೀಡಿದರು.

ಈಗಾಗಲೇ ಸಹಾಯವಾಣಿಗಳ ಸಂಖ್ಯೆಗಳನ್ನು ದುಬೈ, ಮಂಗಳೂರು, ಮುಂಬೈ, ಕಲ್ಲಿಕೋಟೆ, ಚೆನ್ನೈಗಳಲ್ಲಿ ಪ್ರಕಟಿಸಲಾಗಿದ್ದು, ಸಂತ್ರಸ್ತ ಕುಟುಂಬದ ಸದಸ್ಯರು ಸಂಪರ್ಕಿಸುತ್ತಿದ್ದಾರೆ. ಮೃತದೇಹಗಳ ಸಾಗಾಟ ಮತ್ತು ಇನ್ನಿತರ ಅಗತ್ಯಗಳಿಗೆ ಸಹಾಯ ಮಾಡಲು ಏರ್ ಇಂಡಿಯಾ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

ಸಂತ್ರಸ್ತ ಕುಟುಂಬದವರಿಗೆ ಮತ್ತು ಬದುಕುಳಿದವರಿಗೆ ಸಹಾಯ ಮಾಡಲು ತುರ್ತು ಸಹಾಯವಾಣಿಗಳನ್ನು ವಿವಿಧ ವಿಮಾನ ನಿಲ್ದಾಣಗಳಲ್ಲೂ ತೆರೆಯ ಲಾಗಿದೆ ಎಂದು ಅವರು ಹೇಳಿದರು.
ತುರ್ತು ಪ್ರತಿಕ್ರಿಯೆ ಮತ್ತು ಪರಿಹಾರ ಕಾರ್ಯದ ಅಂತಾರಾಷ್ಟ್ರೀಯ ಏಜೆನ್ಸಿ ಸಂಸ್ಥೆಯಾದ ಕೆನ್‌ಯಾನ್ ಈಗಾಗಲೇ ಏರ್ ಇಂಡಿಯಾವನ್ನು ಸಂಪರ್ಕಿಸಿ ಸಹಾಯದ ಭರವಸೆ ನೀಡಿದೆ ಎಂದು ಸಿಂಗ್ ನುಡಿದರು.

No comments: