ಹೊಸದಿಲ್ಲಿ,ಮೇ 23: ಮಂಗಳೂರಿನ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಪ್ಯಾಕೇಜ್‌ನ ಮೊದಲ ಕಂತನ್ನು ಕೇಂದ್ರ ಸರಕಾರವು ಸದ್ಯದಲ್ಲೇ ಪ್ರಕಟಿಸಲಿದೆ.
ವಿಮಾನ ದುರಂತದ ಸಂತ್ರಸ್ತರ ಪರಿಹಾರ ಪ್ಯಾಕೇಜ್‌ನ ಕುರಿತಾದ ಮಾಂಟ್ರಿಯಲ್ ಒಡಂಬಂಡಿಕೆ ಮತ್ತು ವೈಮಾನಿಕ ಕಾಯ್ದೆಯ ಬಗ್ಗೆ ಅಧ್ಯಯನ ನಡೆಸಲು ಸಂಬಂಧ ಪಟ್ಟ ಅಧಿಕಾರಿಗಳು ವಿವಿಧ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸುತ್ತಿರುವಂತೆಯೇ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ಪ್ಯಾಕೇಜನ್ನು ಸರಕಾರವು ಶೀಘ್ರವೇ ಘೋಷಿಸುವ ಸಾಧ್ಯತೆಯಿದೆ.
ವಿಮಾನ ಅವಘಡದಲ್ಲಿ ಬಲಿಯಾದವರ ಪ್ರತಿ ಕುಟುಂಬಕ್ಕೂ ತಲಾ ಎರಡು ಲಕ್ಷ ರೂ. ಪರಿಹಾರವನ್ನು ಪ್ರಧಾನಿ ಮನಮೋಹನ್‌ಸಿಂಗ್ ನಿನ್ನೆ ಘೋಷಿಸಿದ್ದರು. ಏರ್ ಇಂಡಿಯಾ ಕೂಡಾ ವಿಮಾನಾಪಘಾತ (ತಿದ್ದುಪಡಿ) ಕಾಯ್ದೆಯ ನಿಯಮಗಳನ್ವಯ, ಮೃತರ ಕುಟುಂಬಗಳಿಗೆ ತಲಾ 1.60 ಲಕ್ಷ ಡಾಲರ್ (72 ಲಕ್ಷ ರೂ.) ನೀಡಲಿದೆಯೆಂದು ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದರು.
ಮಾಂಟ್ರಿಯಲ್‌ನಲ್ಲಿ ವಿಮಾನಯಾನ ಸಂಸ್ಥೆಗಳ ನಡುವೆ ಏರ್ಪಟ್ಟ ಒಪ್ಪಂದದನ್ವಯ ತಿದ್ದುಪಡಿಗೊಂಡ ಈ ಕಾಯ್ದೆಯು, ವಿಮಾನ ದುರಂತದಲ್ಲಿ ಮೃತಪಟ್ಟ ಪ್ರತಿಯೋರ್ವ ವ್ಯಕ್ತಿಯ ಅತ್ಯಂತ ಸಮೀಪದ ಬಂಧುವು 1.60 ಲಕ್ಷ ಅಮೆರಿಕ ಡಾಲರ್ (72 ಲಕ್ಷ ರೂ.) ಪರಿಹಾರ ಪಡೆಯಲು ಅರ್ಹನಾಗಿದ್ದಾನೆ(ಳೆ).
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.
Subscribe to:
Post Comments (Atom)
No comments:
Post a Comment