
ಮಂಜನಾಡಿ, ಮೇ ೨೭: ಇತ್ತೀಚೆಗೆ ಸಂಭವಿಸಿದ ಬಜ್ಪೆ ವಿಮಾನ ದುರಂತಕ್ಕೆ ಬಲಿಯಾದವರಿಗೆ ಮೇ ೨೬ರಂದು ಅಲ್ ಮದೀನಾದಲ್ಲಿ ವಿಶೇಷ ಪ್ರಾರ್ಥನಾ ಸಭೆ ನಡೆಯಿತು.ಸೂಫಿವರ್ಯ ಶೈಖುನಾ ಮಂಜನಾಡಿ ಉಸ್ತಾದ್ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್ ನೇತೃತ್ವ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ದುರಂತದಲ್ಲಿ ಮಡಿದ ವರಿಗೆ ಅಲ್ಲಾಹನು ಹುತಾತ್ಮ ಪದವಿ ನೀಡಲಿ. ಅವರ ಪಾರತ್ರಿಕ ಬದುಕು ಸ್ವUಯವಾಗಲೆಂದು ಹಾರೈಸಿದರು. ಹಾಗೂ ಕುಟುಂಬಕ್ಕೆ ತಮ್ಮವರ ಅಗಲಿಕೆಯನ್ನು ಸಹಿಸುವ ಸಹನೆ ಮತ್ತು ಒಳಿತನ್ನು ಅಲ್ಲಾಹು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.ಸಭೆಯಲ್ಲಿ ಊರ ಪರವೂರ ಮಹನೀಯರು, ಸಂಸ್ಥೆಯ ಯತೀಂ ಮಕ್ಕಳು, ವಿದ್ಯಾರ್ಥಿಗಳು, ಆಡಳಿತ ಸಮಿತಿಯ ಪದಾಧಿಕಾರಿಗಳಾದ ಮಹ್ಮೂದುಲ್ ಫೈಝಿ ವಾಲೆಮುಂಡೋವು, ಮೇನೇಜರ್ ಅಬ್ದುರ್ರಹ್ಮಾನ್ ಮದನಿ ಪಡನ್ನ, ಸಾದು ಕುಂಞಿ ಮಾಸ್ಟರ್, ಅಬ್ಬಾಸ್ ಹಾಜಿ ಪಾವೂರು, ಎನ್.ಎನ್.ಕರೀಂ, ಇಸ್ಮಾಯೀಲ್ ಮುಸ್ಲಿಯಾರ್ ಸಜಿಪ, ಹಸನಬ್ಬ ಹಾಜಿ ಕಲ್ಕಟ್ಟ, ಮುದರ್ರಿಸ್ ಅಬ್ದುಲ್ ಖಾದಿರ್ ಸಖಾಫಿ, ಮುನೀರ್ ಸಅದಿ, ಖತೀಬ್ ಇಸ್ಮಾಯೀಲ್ ಸಖಾಫಿ, ಶರೀಫ್ ಸಅದಿ, ಅಬೂತ್ವಾಹಿರ್ ಅಮಾನಿ ವಯನಾಡ್, ಅಬ್ದುರ್ರಶೀದ್ ಮುಸ್ಲಿಯಾರ್ ವಾಯಾಡ್, ಅಬ್ದುಲ್ಲಾ ಮೋರ್ಲ, ಲತೀಫ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment