ಕೇವಲ 18 ತಿಂಗಳಾಗಿದ್ದಾಗಲೇ ಸಿಗರೇಟು ಸೇದುವುದನ್ನು ಕಲಿಸಿದ ತಂದೆ ಯಾವುದರ ಬಗ್ಗೆಯೂ ಆತಂಕಪಡುವುದಿಲ್ಲ.
ಲಂಡನ್ (ಪಿಟಿಐ): ಹಿರಿಯರು ಧೂಮಪಾನ ಮಾಡುವುದು ಸಾಮಾನ್ಯ. ಚಟಕ್ಕೆ ತುತ್ತಾಗುವುದು ಸಹಜ. ಆದರೆ ಇಂಡೊನೇಷ್ಯಾದ ಎರಡು ವರ್ಷದ ಆರ್ಡಿ ರಿಜಲ್ ಎಂಬ ಬಾಲಕನಿಗೆ ಧೂಮಪಾನ ಚಟವಾಗಿಬಿಟ್ಟಿದೆ!
ಆರ್ಡಿಗೆ ಸಿಗರೇಟು ಸೇದುವುದನ್ನು ಕಲಿಸಿದ್ದು ಸ್ವತಃ ಆತನ ತಂದೆ ಮುಸಿ ಬನ್ಯುಅಸಿನ್ ಮಹಮ್ಮದ್. ಕೇವಲ 18 ತಿಂಗಳಾಗಿದ್ದಾಗಲೇ ಸಿಗರೇಟು ಸೇದುವುದನ್ನು ಕಲಿಸಿದ ತಂದೆ ಯಾವುದರ ಬಗ್ಗೆಯೂ ಆತಂಕಪಡುವುದಿಲ್ಲ.
‘ಆರ್ಡಿ ಆರೋಗ್ಯದ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಆತ ಆರೋಗ್ಯವಾಗಿದ್ದಾನೆ. ಸಿಗರೇಟು ಸೇದಲು ಅವಕಾಶ ಮಾಡಿಕೊಡದಿದ್ದರೆ ಅಳುತ್ತಾನೆ. ರಂಪ ಮಾಡುತ್ತಾನೆ’ ಎಂದು ಮಹಮ್ಮದ್ ಹೇಳುತ್ತಾರೆ.
ಇಂಡೊನೇಷ್ಯಾದಲ್ಲಿ ಒಟ್ಟು ದೂಮಪಾನಿಗಳಲ್ಲಿ ಶೇ 25ರಷ್ಟು ಪಾಲು 3 ರಿಂದ 15ರ ವಯೋಮಾನದ ಮಕ್ಕಳು ಎನ್ನಲಾಗಿದೆ.
May 23, 2010
Subscribe to:
Post Comments (Atom)
No comments:
Post a Comment