ಸೋಮವಾರ ದಾಂತೇವಾಡದಲ್ಲಿ ಭೀಕರ ಅಟ್ಟಹಾಸ ನಡೆಸಿ 40 ಜನರನ್ನು ಆಹುತಿ ಪಡೆದ ನಕ್ಸಲರನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿದೆ.
ನಾಲ್ಕು ರಾಜ್ಯಗಳಲ್ಲಿ ನಕ್ಸಲರು ನೀಡಿರುವ ಬಂದ್ ಕೆಯನ್ನು ಸ್ಥಗಿತಗೊಳಿಸಿ ಹಿಂಸಾಚಾರವನ್ನು ಕೈ ಬಿಟ್ಟು ಮಾತುಕತೆಗೆ ಬನ್ನಿ ಎಂದು ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ ಅಧಿಕೃತ ಆಹ್ವಾನ ನೀಡಿದ್ದಾರೆ.
ಖಾಸಗಿ ಚಾನಲ್ ಜೊತೆಗೆ ಸಂದರ್ಶನದಲ್ಲಿ ಈ ಆಹ್ವಾನ ನೀಡಿರುವ ಗೃಹ ಸಚಿವ ಪಿ.ಚಿದಂಬರಂ, ನಕ್ಸಲರು ಯಾವುದೇ ಅಜೆಂಡಾವನ್ನು ಮುಂದಿಟ್ಟು ಬರಲಿ. ಆದರೆ ಮಾತುಕತೆಯ ಸಮಯದಲ್ಲಿ ಸಂಪೂರ್ಣವಾಗಿ ಅವರು ಹಿಂಸೆಯನ್ನು ತ್ಯಜಿಸಬೇಕು. ಎಲ್ಲಿಯೂ ಹಿಂಸೆ ಕಾಣಬಾರದು ಎಂದಿದ್ದಾರೆ.
ಇದೇ ವೇಳೆ ನಕ್ಸಲರನ್ನು ನಾವು ಲಘುವಾಗಿ ಪರಿಗಣಿಸಿದ್ದೆವು ಎಂಬುದನ್ನು ಒಪ್ಪಿಕೊಂಡ ಚಿದಂಬರಂ, ನಕ್ಸಲರು ಈ ಮಟ್ಟಕ್ಕೂ ಮುಂದುವರಿಯುವುದನ್ನು ಯೋಚಿಸಿರಲಿಲ್ಲ ಎಂದರು.
ನಕ್ಸಲರ ವಿರುದ್ಧ ಸಮರ ಮುಂದುವರಿಸುವುದಾಗಲಿ ಅಥವಾ ವೈಮಾನಿಕ ದಾಳಿ ನಡೆಸುವ ಉದ್ದೇಶವಾಗಲಿ ಸರ್ಕಾರಕ್ಕಿಲ್ಲ. ನಕ್ಸಲರ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಾಮಾಣಿಕ ಉದ್ದೇಶ ಸರ್ಕಾರದ್ದು. ಆದರೆ ನಕ್ಸಲರು ಮಾತ್ರ ತಮ್ಮ ಶಸ್ತ್ರಾಸ್ತ್ರ ತ್ಯಜಿಸಿ ನಮ್ಮೊಂದಿಗೆ ಮಾತುಕತೆಗೆ ಬರಬೇಕು ಎಂದು ಚಿದಂಬರಂ ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment